- Kannada News Photo gallery Cricket photos KL Rahul Shares Cutest Photos With Girlfriend Athiya Shetty On Her Birthday
‘ಹ್ಯಾಪಿ ಬರ್ತ್ ಡೇ ಮೈ ಜೋಕರ್’; ಪ್ರೇಯಸಿ ಅಥಿಯಾಗೆ ವಿಶೇಷವಾಗಿ ಶುಭಕೋರಿದ ರಾಹುಲ್
KL Rahul-Athiya Shetty: ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮುಂದಿನ ವರ್ಷ ರಾಹುಲ್-ಅಥಿಯಾ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬುದು ಸುದ್ದಿ.
Updated on:Nov 05, 2022 | 6:30 PM

ಲೋಕೇಶ್ ರಾಹುಲ್ಗೆ ಇಂದು ಡಬಲ್ ಖುಷಿ. ಒಂದು ಆತ್ಮೀಯ ಗೆಳೆಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 34 ನೇ ಹುಟ್ಟುಹಬ್ಬವಾದರೆ, ಇನ್ನೊಂದು ತನ್ನ ಪ್ರೇಯಸಿ ಅಥಿಯಾ ಶೆಟ್ಟಿಗೂ ಇಂದು ಜನ್ಮ ದಿನ. ಹಾಗಾಗಿ ನವೆಂಬರ್ 5 ರಾಹುಲ್ಗೆ ಬಹಳ ವಿಶೇಷವಾದ ದಿನ.

ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬುದು ಹಳೆಯ ವಿಚಾರವಾಗಿದ್ದು, ಈ ಇಬ್ಬರ ನಡುವಿನ ಪ್ರೇಮಪುರಾಣ ಮದುವೆವರೆಗೂ ಬಂದಿದೆ ಎಂಬುದು ಸಮಾಚಾರ. ಸದ್ಯ ಟಿ20 ವಿಶ್ವಕಪ್ ಆಡುತ್ತಿರುವ ರಾಹುಲ್, ಇಬ್ಬರೂ ಒಟ್ಟಿಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಯಸಿ ಅಥಿಯಾ ಶೆಟ್ಟಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಇಬ್ಬರು ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಹುಲ್ ಹ್ಯಾಪಿ ಬರ್ತ್ ಡೇ ಮೈ ಲವ್, ನೀನು ಎಲ್ಲವನ್ನೂ ಉತ್ತಮಗೊಳಿಸಿದ್ದೀಯ ಎಂದು ಬರೆದುಕೊಂಡಿದ್ದಾರೆ. ಅದರಲ್ಲೂ ಶುಭಾಶಯ ತಿಳಿಸಿದ ಬಳಿಕ ಜೋಕರ್ ಎಮೋಜಿ ಬಳಸಿರುವುದು ಇಲ್ಲಿ ವಿಶೇಷ.

ಈಗ ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮುಂದಿನ ವರ್ಷ ರಾಹುಲ್-ಅಥಿಯಾ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬುದು ಸುದ್ದಿ.

ಈಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ರಾಹುಲ್ ಅವರ ಈವರೆಗಿನ ಪ್ರದರ್ಶನದ ವಿಚಾರಕ್ಕೆ ಬಂದರೆ. ಮೊದಲ ಮೂರು ಪಂದ್ಯಗಳಲ್ಲಿ ರಾಹುಲ್ ಬ್ಯಾಟ್ ಸೈಲೆಂಟ್ ಆಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಶತಕ ಬಾರಿಸಿ ಮತ್ತೆ ಫಾರ್ಮ್ಗೆ ಮರಳಿದ ಸಿಗ್ನಲ್ ನೀಡಿದ್ದಾರೆ.
Published On - 6:30 pm, Sat, 5 November 22



















