- Kannada News Photo gallery Cricket photos Happy Birthday Virat Kohli net worth salary social media income in kannada
Happy Birthday Virat Kohli: 34 ವರ್ಷದ ವಿರಾಟ್ ಕೊಹ್ಲಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?
Virat Kohli Net Worth: ವಿರಾಟ್ ಕೊಹ್ಲಿಗೆ ತಿಂಗಳಿಗೆ ಸುಮಾರು ಐದೂವರೆ ಕೋಟಿ ಆದಾಯ ಬರುತ್ತಿದ್ದು, ಒಟ್ಟಾರೆ ಅವರ ಆಸ್ತಿ ಮೌಲ್ಯ ಸುಮಾರು 12 ಶತಕೋಟಿ ( ಸುಮಾರು 1200 ಕೋಟಿ) ರೂ. ಆಗಿದೆ.
Updated on: Nov 05, 2022 | 12:04 PM

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 34ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 5 ನವೆಂಬರ್ 1988 ರಂದು ಜನಿಸಿದ ಕೊಹ್ಲಿ ಇಂದು ಭಾರತೀಯ ಕ್ರಿಕೆಟ್‌ನ ಜೀವಾಳ. ಮೂರೂ ಫಾರ್ಮೆಟ್ಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ಕೊಹ್ಲಿ, ಬ್ಯಾಟ್ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಲ್ಲದೆ, ಗಳಿಕೆಯಲ್ಲೂ ಕಿಂಗ್ ಎನಿಸಿಕೊಂಡಿದ್ದಾರೆ.

2022ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಪಟ್ಟಿಯಲ್ಲಿ ಕೊಹ್ಲಿಗೆ ಮೊದಲ ಸ್ಥಾನ. ಅಷ್ಟೇ ಅಲ್ಲ, ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಳುಗಳ ಪಟ್ಟಿಯಲ್ಲಿ ಕೊಹ್ಲಿ ಕೂಡ ಸೇರಿದ್ದಾರೆ. ಫುಟ್ಬಾಲ್ ಆಟಗಾರರು, ಎನ್ಬಿಎ ಆಟಗಾರರು ಪ್ರಾಬಲ್ಯ ಹೊಂದಿರುವ ಈ ಪಟ್ಟಿಯಲ್ಲಿ ಕೊಹ್ಲಿ 61 ನೇ ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿಗೆ ತಿಂಗಳಿಗೆ ಸುಮಾರು ಐದೂವರೆ ಕೋಟಿ ಆದಾಯ ಬರುತ್ತದೆ. ಅವರ ನಿವ್ವಳ ಮೌಲ್ಯವು ಸುಮಾರು 12 ಶತಕೋಟಿ ( ಸುಮಾರು 1200 ಕೋಟಿ) ರೂ. ಆಗಿದೆ.

ಭಾರತ ಪರ 102 ಟೆಸ್ಟ್, 262 ಏಕದಿನ ಹಾಗೂ 113 ಟಿ20 ಪಂದ್ಯಗಳನ್ನು ಆಡಿರುವ ಕೊಹ್ಲಿ, ಹಲವು ದೊಡ್ಡ ಬ್ರಾಂಡ್‌ಗಳ ಜಾಹೀರಾತುಗಳೂ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಕೊಹ್ಲಿಗೆ ಸಾಕಷ್ಟು ಆದಾಯ ಹರಿದಬರುತ್ತಿದೆ. ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಅಂಟಿಸಿಕೊಳ್ಳುವ ಕಂಪನಿಯೊಂದರ ಸ್ಟಿಕರ್ನಿಂದ ಪ್ರತಿ ವರ್ಷ ಸುಮಾರು 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಸೋಷಿಯಲ್ ಮೀಡಿಯಾದಲ್ಲೂ ಕೊಹ್ಲಿಗೆ ಸಾಕಷ್ಟು ಫಾಲೋವರ್ಸ್ ಇದ್ದು, ವರದಿಯೊಂದರ ಪ್ರಕಾರ, ಸಾಮಾಜಿಕ ಜಾಲತಾಣಗಳಿಂದ ಕೊಹ್ಲಿ ಗಳಿಸಿರುವ ಆದಾಯ ಸುಮಾರು 328 ಕೋಟಿ ರೂ. ಆಗಿದೆ.




