- Kannada News Photo gallery Cricket photos new zealand reach semifinal 3rd time icc world cup final semifianl
ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಕಿವೀಸ್; 7 ಆವೃತ್ತಿಗಳ ಬರ ಈ ವರ್ಷವಾದರೂ ಅಂತ್ಯವಾಗುತ್ತಾ?
T20 World Cup: ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡವಾಯಿತು. ಇದರೊಂದಿಗೆ ಕಿವೀಸ್ ತಂಡ ಹ್ಯಾಟ್ರಿಕ್ ಸಾಧನೆಯನ್ನೂ ಮಾಡಿದೆ.
Updated on:Nov 04, 2022 | 7:01 PM

ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡವಾಯಿತು. ಇದರೊಂದಿಗೆ ಕಿವೀಸ್ ತಂಡ ಹ್ಯಾಟ್ರಿಕ್ ಸಾಧನೆಯನ್ನೂ ಮಾಡಿದೆ.

ನ್ಯೂಜಿಲೆಂಡ್ ತನ್ನ ಸೂಪರ್-12 ರ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ಅನ್ನು 35 ರನ್‌ಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪಿದೆ.

ಇದಕ್ಕೂ ಮುನ್ನ 2021ರ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ತಂಡ ಫೈನಲ್ ತಲುಪಿತ್ತು. ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ಈ ಟೂರ್ನಿಯಲ್ಲಿ ಫೈನಲ್ ತಲುಪಿದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.

ಆ ಬಳಿಕ 2016 ರಲ್ಲೂ ಕಿವೀಸ್ ಪಡೆ ಸೆಮಿಫೈನಲ್‌ಗೆ ಪ್ರವೇಶಿಸಿತು. ಆದರೆ, ಭಾರತದಲ್ಲಿ ನಡೆದ ಆ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ತಲುಪಿತು.

ಅಂದಹಾಗೆ, ನ್ಯೂಜಿಲೆಂಡ್ 2015 ರಿಂದ ಐಸಿಸಿ ಪಂದ್ಯಾವಳಿಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದೆ. 2015 ರ ಏಕದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿತ್ತು.

ಇದಾದ ಬಳಿಕ ಮತ್ತೊಮ್ಮೆ 2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಫೈನಲ್‌ಗೆ ಪ್ರಯಾಣ ಬೆಳೆಸಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಅಲ್ಲಿ ರೋಚಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಸೋಲೊಪ್ಪಿಕೊಂಡಿತ್ತು.

ಆದಾಗ್ಯೂ, ನ್ಯೂಜಿಲೆಂಡ್ ಯಾವಾಗಲೂ ಫೈನಲ್ ಅಥವಾ ಸೆಮಿಫೈನಲ್‌ಗಳಲ್ಲಿ ಸೋತಿದೆ ಎಂದಲ್ಲ. ಕಳೆದ ವರ್ಷ, ವಿಲಿಯಮ್ಸನ್ ತಂಡವು ಮೊದಲ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
Published On - 7:01 pm, Fri, 4 November 22









