ಜನವರಿ 23 ರಂದೇ ಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ! ಸುಳಿವು ನೀಡಿದ ಬಿಸಿಸಿಐ
TV9 Web | Updated By: ಪೃಥ್ವಿಶಂಕರ
Updated on:
Jan 14, 2023 | 3:54 PM
KL Rahul- Athiya Shetty wedding: ಕನ್ನಡಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ನಟಿ ಅಥಿಯಾ ಶೆಟ್ಟಿ ಅವರನ್ನು ವರಿಸಲಿದ್ದಾರೆ. ಈ ಜೋಡಿಯು ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.
1 / 5
ಕನ್ನಡಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ನಟಿ ಅಥಿಯಾ ಶೆಟ್ಟಿ ಅವರನ್ನು ವರಿಸಲಿದ್ದಾರೆ. ಈ ಜೋಡಿಯು ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.
2 / 5
ಇದಕ್ಕೆ ಪುಷ್ಠಿ ನೀಡುವಂತೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ರಾಹುಲ್ ಹಿಂದೆ ಸರಿದಿದ್ದಾರೆ. ಉಭಯ ಸರಣಿಗೆ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಕೂಡ ರಾಹುಲ್ ಕೌಟುಂಬಿಕ ಕಾರಣ ನೀಡಿ ತಂಡದಿಂದ ರಜೆ ಕೋರಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಇದರಿಂದಾಗಿ ಈ ದಿನಾಂಕದಂದೆ ಈ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
3 / 5
ಖಂಡಾಲಾದಲ್ಲಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಐಷಾರಾಮಿ ಬಂಗಲೆಯಲ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ವಿವಾಹವಾಗಲಿದ್ದಾರೆ ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ.
4 / 5
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಯ ನಂತರ ಮುಂಬೈನ ಬಾಂದ್ರಾದ ಕೇಟರ್ ರೋಡ್ ಅಪಾರ್ಟ್‌ಮೆಂಟ್‌ನಲ್ಲಿನ ಫ್ಲಾಟ್‌ನಲ್ಲಿ ನೆಲಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಫ್ಲಾಟ್‌ನ ಒಂದು ತಿಂಗಳ ಬಾಡಿಗೆ ಸುಮಾರು 10 ಲಕ್ಷ ರೂಪಾಯಿಗಳು ಎಂಬ ಮಾಹಿತಿ ಹೊರಬಿದ್ದಿದೆ.
5 / 5
ರಾಹುಲ್ ಮತ್ತು ಅಥಿಯಾ ಸುಮಾರು ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿಗಳು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವುದರೊಂದಿಗೆ ಸುದ್ದಿಯಾಗುತ್ತಿದ್ದರು. ಕೆಲವು ತಿಂಗಳ ಹಿಂದೆ ಜರ್ಮನಿಯಲ್ಲಿ ರಾಹುಲ್ ಶಸ್ತ್ರ ಚಿಕಿತ್ಸೆಗೆ ಒಳಗಾದಾಗ ಅಥಿಯಾ ಕೂಡ ಅವರ ಜೊತೆಗಿದ್ದರು. ಇಬ್ಬರೂ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮಿಬ್ಬರ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು.
Published On - 3:54 pm, Sat, 14 January 23