IND vs SA: ಭಾರತ ಟೆಸ್ಟ್ ಕ್ರಿಕೆಟ್ಗೆ 34ನೇ ನಾಯಕ ನಮ್ಮ ರಾಹುಲ್; ಕರ್ನಾಟಕದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ!
TV9 Web | Updated By: ಪೃಥ್ವಿಶಂಕರ
Updated on:
Jan 03, 2022 | 2:44 PM
IND vs SA: KL ರಾಹುಲ್ ಭಾರತದ 34 ನೇ ಟೆಸ್ಟ್ ನಾಯಕರಾಗಿದ್ದಾರೆ. ಅದೇ ಸಮಯದಲ್ಲಿ, 13 ವರ್ಷಗಳ ನಂತರ ಕರ್ನಾಟಕದ ಆಟಗಾರನಿಗೆ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗಿದೆ. ಕೆಎಲ್ ರಾಹುಲ್ ಟೆಸ್ಟ್ ನಾಯಕರಾಗಿರುವ ಕರ್ನಾಟಕದ ನಾಲ್ಕನೇ ಆಟಗಾರ.
1 / 5
ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಅವರು ಈ ಟೆಸ್ಟ್‌ನಲ್ಲಿ ಆಡುವುದಿಲ್ಲ ಎಂಬ ಸುದ್ದಿ ಬಂದಾಗ ಈ ಭರವಸೆಗೆ ದೊಡ್ಡ ಹಿನ್ನಡೆಯಾಯಿತು. ಇದೀಗ ವಿರಾಟ್ ಅನುಪಸ್ಥಿತಿಯ ನೇರ ಲಾಭವು ಟೆಸ್ಟ್ ನಾಯಕತ್ವದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದ ಕೆಎಲ್ ರಾಹುಲ್ ಪಾಲಾಯಿತು.
2 / 5
KL ರಾಹುಲ್ ಭಾರತದ 34 ನೇ ಟೆಸ್ಟ್ ನಾಯಕರಾಗಿದ್ದಾರೆ. ಅದೇ ಸಮಯದಲ್ಲಿ, 13 ವರ್ಷಗಳ ನಂತರ ಕರ್ನಾಟಕದ ಆಟಗಾರನಿಗೆ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗಿದೆ. ಕೆಎಲ್ ರಾಹುಲ್ ಟೆಸ್ಟ್ ನಾಯಕರಾಗಿರುವ ಕರ್ನಾಟಕದ ನಾಲ್ಕನೇ ಆಟಗಾರ.
3 / 5
ಕೆಎಲ್ ರಾಹುಲ್ ಗಿಂತ ಮೊದಲು 1980ರಲ್ಲಿ ಗುಂಡಪ್ಪ ವಿಶ್ವನಾಥ್ 2 ಟೆಸ್ಟ್, 2003ರಿಂದ 2007ರ ನಡುವೆ ರಾಹುಲ್ ದ್ರಾವಿಡ್ 25 ಟೆಸ್ಟ್ ಹಾಗೂ 2007-08ರಲ್ಲಿ ಅನಿಲ್ ಕುಂಬ್ಳೆ 14 ಟೆಸ್ಟ್ ನಾಯಕರಾಗಿದ್ದರು.
4 / 5
KL ರಾಹುಲ್ ಅವರು ತಮ್ಮ ಟೆಸ್ಟ್ ನಾಯಕತ್ವವನ್ನು ಭಾರತಕ್ಕೆ ಪಾದಾರ್ಪಣೆ ಮಾಡುವ ಮೂಲಕ ಎಂಎಸ್ ಧೋನಿಯನ್ನು ಸರಿಗಟ್ಟಿದ್ದಾರೆ. ಈ ಸಮೀಕರಣವು ಕಡಿಮೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ನಂತರ ಭಾರತಕ್ಕೆ ಟೆಸ್ಟ್ ನಾಯಕತ್ವದ ಪದಾರ್ಪಣೆ ಮಾಡಲು ಸಂಬಂಧಿಸಿದೆ. ಟೆಸ್ಟ್‌ನಲ್ಲಿ ಭಾರತದ ನಾಯಕತ್ವವನ್ನು ವಹಿಸಿಕೊಳ್ಳುವ ಮೊದಲು, ರಾಹುಲ್ ಕೂಡ ಕೇವಲ 1 ಪ್ರಥಮ ದರ್ಜೆ ಪಂದ್ಯದಲ್ಲಿ ಧೋನಿಯಂತೆ ನಾಯಕರಾಗಿದ್ದರು. ಈ ಪ್ರಕರಣದ ದಾಖಲೆ ಅಜಿಂಕ್ಯ ರಹಾನೆ ಅವರದ್ದಾಗಿದೆ, ಅವರು ಪ್ರಥಮ ದರ್ಜೆಯಲ್ಲಿ ನಾಯಕತ್ವದ ಯಾವುದೇ ದಾಖಲೆಯನ್ನು ಹೊಂದದ್ದೆ ಭಾರತಕ್ಕೆ ಟೆಸ್ಟ್ ನಾಯಕತ್ವದ ಪದಾರ್ಪಣೆ ಮಾಡಿದರು.
5 / 5
ವಿರಾಟ್ ಕೊಹ್ಲಿ ಬದಲಿಗೆ ಜೋಹಾನ್ಸ್‌ಬರ್ಗ್‌ನಲ್ಲಿ ತಂಡದ ನಾಯಕತ್ವವನ್ನು ಪಡೆದ ನಂತರ, ರಾಹುಲ್, "ಇದು ಪ್ರತಿಯೊಬ್ಬ ಆಟಗಾರನ ಕನಸು. ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.