IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
IPL 2022 Mega Auction: ಮುಂದಿನ ಸೀಸನ್ನಲ್ಲಿ ಲಕ್ನೋ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ಹಾಗೂ ಮೆಂಟರ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ.
Updated on:Jan 04, 2022 | 4:44 PM

ಐಪಿಎಲ್ ಮೆಗಾ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು ಸಿದ್ದತೆಗಳನ್ನು ಆರಂಭಿಸಿದೆ. ಈಗಾಗಲೇ ಲಕ್ನೋ ತಂಡ ಕೋಚ್ ಹಾಗೂ ಮೆಂಟರ್ಗಳನ್ನು ಫೈನಲ್ ಮಾಡಿದೆ. ಅದರಂತೆ ಮುಂದಿನ ಸೀಸನ್ನಲ್ಲಿ ಲಕ್ನೋ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ಹಾಗೂ ಮೆಂಟರ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಹಮದಾಬಾದ್ ತಂಡ ಕೂಡ ಕೋಚ್ ಹಾಗೂ ಮೆಂಟರ್ ಅನ್ನು ಫೈನಲ್ ಮಾಡಿದೆ ಎಂದು ವರದಿಯಾಗಿದೆ.

ಈ ವರದಿಯಂತೆ ಮುಂದಿನ ಸೀಸನ್ನಲ್ಲಿ ಅಹಮದಾಬಾದ್ ತಂಡದ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮೆಂಟರ್ ಆಗಿ ಗ್ಯಾರಿ ಕರ್ಸ್ಟನ್ ಇರಲಿದ್ದಾರೆ.

ಇಲ್ಲಿ ವಿಶೇಷ ಎಂದರೆ 2011 ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಾಗ ಗ್ಯಾರಿ ಕಸ್ಟರ್ನ್ ಅವರ ಕೋಚಿಂಗ್ನಲ್ಲಿ ಆಶಿಶ್ ನೆಹ್ರಾ ಆಡಿದ್ದರು.

ಅಷ್ಟೇ ಅಲ್ಲದೆ ಈ ಹಿಂದೆ ಗ್ಯಾರಿ ಕಸ್ಟರ್ನ್ ಹಾಗೂ ಆಶಿಶ್ ನೆಹ್ರಾ ಆರ್ಸಿಬಿ ಪರ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ನೆಹ್ರಾ ಹಾಗೂ ಕಸ್ಟರ್ನ್ ಮತ್ತೆ ಒಂದಾಗುತ್ತಿದ್ದಾರೆ.

ಹಾಗೆಯೇ ಇಂಗ್ಲೆಂಡ್ ಮಾಜಿ ಆರಂಭಿಕ ಆಟಗಾರ ವಿಕ್ರಮ್ ಸೋಲಂಕಿ ಅಹಮದಾಬಾದ್ ತಂಡದ ನಿರ್ದೇಶಕರಾಗಲಿದ್ದಾರೆ ಎಂದು ತಿಳಿಸಲಾಗಿದೆ.

2018-19 ರಲ್ಲಿ ಆಶಿಶ್ ನೆಹ್ರಾ ಆರ್ಸಿಬಿ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಇದೀಗ ಅಹಮದಾಬಾದ್ ತಂಡ ಮುಖ್ಯ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ.
Published On - 2:41 pm, Tue, 4 January 22
























