IND vs AUS: ಹ್ಯಾಟ್ರಿಕ್ ಶತಕ; ಎಂಸಿಜಿಯಲ್ಲಿ ಇತಿಹಾಸ ಸೃಷ್ಟಿಸುವ ತವಕದಲ್ಲಿ ಕೆಎಲ್ ರಾಹುಲ್

|

Updated on: Dec 22, 2024 | 6:23 PM

KL Rahul's Hat-Trick Century Chance: ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಮೆಲ್ಬೋರ್ನ್‌ನಲ್ಲಿ ನಡೆಯುವ ಆಸ್ಟ್ರೇಲೊಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಶತಕದ ಅವಕಾಶ ಹೊಂದಿದ್ದಾರೆ. ಈಗಾಗಲೇ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿರುವ ರಾಹುಲ್, ಮೂರನೇ ಬಾರಿ ಶತಕ ಗಳಿಸಿದರೆ ಈ ಅಪರೂಪದ ಸಾಧನೆ ಮಾಡಲಿದ್ದಾರೆ.

1 / 7
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇದೇ ಡಿ.26 ರಿಂದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್​ಗೆ ಹ್ಯಾಟ್ರಿಕ್ ಶತಕ ಪೂರೈಸುವ ಅವಕಾಶವಿದೆ.

2 / 7
ವಾಸ್ತವವಾಗಿ ಇಲ್ಲಿಯವರೆಗಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿ ಬ್ಯಾಟ್ಸ್‌ಮನ್​ಗಳಲ್ಲಿ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ, ಆಸ್ಟ್ರೇಲಿಯಾದ ಸ್ಟಾರ್ ಟ್ರಾವಿಸ್ ಹೆಡ್ ನಂತರ, ಯಾವುದೇ ಒಬ್ಬ ಬ್ಯಾಟ್ಸ್‌ಮನ್ ಹೆಚ್ಚು ಸ್ಥಿರವಾಗಿ ಕಾಣಿಸಿಕೊಂಡಿದ್ದರೆ, ಅದು ರಾಹುಲ್ ಮಾತ್ರ.

3 / 7
ಸರಣಿ ಆರಂಭಕ್ಕೂ ಮುನ್ನ ರಾಹುಲ್​ರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರ್ಪಡೆಗೊಳ್ಳಿಸುವ ಬಗ್ಗೆ ಎಲ್ಲರೂ ಪ್ರಶ್ನೆಗಳನ್ನು ಎತ್ತಿದ್ದರೆ, ಈಗ ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ. ರಾಹುಲ್ ಇಲ್ಲಿಯವರೆಗೆ ಕೆಲವು ಬಲಿಷ್ಠ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಆದರೆ ಅವರ ಬ್ಯಾಟ್‌ನಿಂದ ಒಂದೇ ಒಂದು ಶತಕ ಕೂಡ ಬಂದಿಲ್ಲ. ಆದರೆ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ರಾಹುಲ್​ಗೆ ಹ್ಯಾಟ್ರಿಕ್ ಶತಕಗಳನ್ನು ಪೂರ್ಣಗೊಳಿಸುವ ಅವಕಾಶವಿದೆ.

4 / 7
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಎರಡು ಬಲಿಷ್ಠ ಅರ್ಧಶತಕಗಳನ್ನು ಗಳಿಸಿರುವ ರಾಹುಲ್‌ನಿಂದ ಈಗ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ಬಹುಶಃ ಈ ಕಾಯುವಿಕೆ ಮೆಲ್ಬೋರ್ನ್‌ನಲ್ಲಿಯೇ ಕೊನೆಗೊಳ್ಳಬಹುದು ಎನ್ನಲಾಗುತ್ತಿದೆ.

5 / 7
ವಾಸ್ತವವಾಗಿ ಕಳೆದೆರಡು ಸತತ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ರಾಹುಲ್ ಶತಕ ಸಿಡಿಸಿದ್ದು, ಇದೀಗ ಮೂರನೇ ಟೆಸ್ಟ್​ನಲ್ಲಿ  ಶತಕ ಪೂರೈಸಿದರೆ ರಾಹುಲ್ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಲಿದ್ದಾರೆ. ಇದಕ್ಕೂ ಮೊದಲು ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 2 ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಈ ಎರಡು ಶತಕ ಸಿಡಿಸಿದ್ದರು.

6 / 7
2021 ರಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ 123 ರನ್‌ಗಳ ಇನ್ನಿಂಗ್ಸ್ ಆಡಿದ್ದ ರಾಹುಲ್, ನಂತರ ಕಳೆದ ವರ್ಷ ಅಂದರೆ 2023 ರಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ 101 ರನ್ ಗಳಿಸಿದರು. ಈ ಎರಡೂ ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾದ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಪ್ರಾಸಂಗಿಕವಾಗಿ, ಎರಡೂ ಪಂದ್ಯಗಳು ಸೆಂಚುರಿಯನ್‌ನಲ್ಲಿಯೇ ನಡೆದಿದ್ದವು. ಈಗ ಮೆಲ್ಬೋರ್ನ್‌ನಲ್ಲಿ ರಾಹುಲ್ ಈ ಯಶಸ್ಸನ್ನು ಪುನರಾವರ್ತಿಸಿದರೆ ಅವರು ಹ್ಯಾಟ್ರಿಕ್ ಶತಕದ ದಾಖಲೆ ಬರೆಯಲಿದ್ದಾರೆ.

7 / 7
ಅಚ್ಚರಿಯೆಂದರೆ, ರಾಹುಲ್ ಅವರ ಟೆಸ್ಟ್ ವೃತ್ತಿಜೀವನವು ಇದೇ ಬಾಕ್ಸಿಂಗ್ ಡೇ ಟೆಸ್ಟ್‌ನಿಂದಲೇ ಪ್ರಾರಂಭವಾಗಿದ್ದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಅವರು ಡಿಸೆಂಬರ್ 2014 ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ, ಆ ಪಂದ್ಯ ಮೆಲ್ಬೋರ್ನ್‌ನಲ್ಲಿ ಮಾತ್ರ ನಡೆದಿದ್ದು, ಆ ಪಂದ್ಯದಲ್ಲಿ ರಾಹುಲ್ ಮೊದಲ ಇನ್ನಿಂಗ್ಸ್​ನಲ್ಲಿ 3 ಮತ್ತು 2 ನೇ ಇನ್ನಿಂಗ್ಸ್​ನಲ್ಲಿ ಕೇವಲ 1 ರನ್ ಕಲೆಹಾಕಿದ್ದರು.