KL Rahul: ಧಾರವಾಡ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವಾದ ಕೆಎಲ್ ರಾಹುಲ್: ಕನ್ನಡಿಗನ ಆರ್ಥಿಕ ಸಹಾಯಕ್ಕೆ ಸಲಾಂ ಎನ್ನಲೇ ಬೇಕು
KL Rahul Helped Shruti Kulavi: ವಿದ್ಯಾಭ್ಯಾಸದಿಂದ ವಂಚಿತವಾಗುವ ಹಂತದಲ್ಲಿದ್ದ ಸೃಷ್ಟಿಯ ಬಾಳಲ್ಲಿ ಈಗ ಮಂದಹಾಸ ಮೂಡಿದೆ. ಈ ಕುಟುಂಬದ ಕಷ್ಟವನ್ನು ತಿಳಿದ ಬಿಜೆಪಿ ಮುಖಂಡ ಹಾಗೂ ಸಮಾಜಸೇವಕ ಮಂಜುನಾಥ ಹೆಬಸೂರು ಖ್ಯಾತ ಕ್ರಿಕೇಟಿಗ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿಸಿದ್ದಾರೆ.
1 / 6
ಸುಡುಗಾಡು ಸಿದ್ದರ ಕುಟುಂಬದಲ್ಲಿ ಅಲೇಮಾರಿ ಜೀವನ ನಡೆಸಿಕೊಂಡು ಬದುಕು ನಡೆಸುತ್ತಿರುವ ಬಡಕುಟುಂಬದ ವಿದ್ಯಾರ್ಥಿನಿಗೆ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ ನೆರವಾಗಿದ್ದಾರೆ. ಧಾರವಾಡದ ಸಿದ್ದೇಶ್ವರ ಕಾಲೋನಿಯಲ್ಲಿರುವ ಹನುಮಂತಪ್ಪಾ ಹಾಗೂ ಸುಮಿತ್ರಾ ದಂಪತಿಯ ಮಗಳು ಸೃಷ್ಟಿಗೆ ಭವಿಷ್ಯದಲ್ಲಿ ಡಾಕ್ಟರ್ ಆಗುವ ಕನಸು ಇದೆ. ಈ ಕನಸಿಗೆ ಇದೀಗ ರಾಹುಲ್ ಬೆಳಕಾಗಿ ಬಂದಿದ್ದಾರೆ.
2 / 6
ವಿದ್ಯಾಭ್ಯಾಸದಿಂದ ವಂಚಿತವಾಗುವ ಹಂತದಲ್ಲಿದ್ದ ಸೃಷ್ಟಿಯ ಬಾಳಲ್ಲಿ ಈಗ ಮಂದಹಾಸ ಮೂಡಿದೆ. ಈ ಕುಟುಂಬದ ಕಷ್ಟವನ್ನು ತಿಳಿದ ಬಿಜೆಪಿ ಮುಖಂಡ ಹಾಗೂ ಸಮಾಜಸೇವಕ ಮಂಜುನಾಥ ಹೆಬಸೂರು ಖ್ಯಾತ ಕ್ರಿಕೇಟಿಗ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿಸಿದ್ದಾರೆ.
3 / 6
1996 ರಲ್ಲಿ ದೀಪಕ ಗಾಂವ್ಕರ್ ಹಾಗೂ ಅನೀತಾ ಗಾಂವ್ಕರ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್ ಎಕ್ಸಲೆನ್ಸ್ ಶಾಲೆ ಉತ್ತಮ ಹೆಸರು ಪಡೆದುಕೊಂಡಿದ್ದು, ಈ ಶಾಲೆಯಲ್ಲಿ ಸೃಷ್ಟಿ ಕುಲಾವಿ ವ್ಯಾಸಾಂಗ ಮಾಡಲು ರಾಹುಲ್ ಅವರು ನೆರವು ನೀಡಿದ್ದಾರೆ. ಇದೊಂದು ನಮ್ಮ ಶಾಲೆಗೆ ಹಾಗೂ ನಮಗೂ ಹೆಮ್ಮೆ ಎಂದು ಶಾಲೆಯ ಪ್ರಾಂಶುಪಾಲರಾದ ಮಾಲಾಶ್ರಿ ನಯ್ಯರ್ ಹೇಳಿದ್ದಾರೆ.
4 / 6
ಸದಾಕಾಲ ಕ್ರಿಕೆಟ್ನಲ್ಲಿ ಬ್ಯೂಸಿ ಆಗಿರುವ ರಾಹುಲ್ ಸುಡಗಾಡ ಸಿದ್ದರ ಜನಾಂಗದ ವಿದ್ಯಾರ್ಥಿನಿಗೆ ಓದಲು ಆರ್ಥಿಕ ಸಹಾಯದ ಹಸ್ತ ಚಾಚಿದ್ದು ಹೆಮ್ಮೆ ಎನ್ನುವ ಮಾತುಗಳು ಧಾರವಾಡ ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.
5 / 6
ಬಡ ವಿದ್ಯಾರ್ಥಿಗೆ ದಾರಿದೀಪವಾಗಲೂ ಸಹಕರಿಸಿದ ಧಾರವಾಡದ ಸಮಾಜಿಕ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ಮಂಜುನಾಥ ಹೆಬಸೂರು ಅವರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
6 / 6
ರಾಹುಲ್ ಸದ್ಯ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲೇ ಭಾರತ ವಿಕೆಟ್ ಕಳೆದುಕೊಂಡಾಗ ವಿರಾಟ್ ಕೊಹ್ಲಿ ಜೊತೆಗೂಡಿ ರಾಹುಲ್ ಅವರು ಅಜೇಯ 97 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೇವಲ ಮೂರೇ ಮೂರು ರನ್ಗಳಿಂದ ಶತಕ ವಂಚಿತರಾದರು. ಈ ಗೆಲುವಿನ ಇನ್ನಿಂಗ್ಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು.