ಕೇವಲ 10 ರನ್​ಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ ಕೆಎಲ್ ರಾಹುಲ್

Updated on: Aug 02, 2025 | 2:30 PM

KL Rahul: ಕೆಎಲ್ ರಾಹುಲ್ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿವೊಂದರಲ್ಲಿ 500+ ರನ್ ಕಲೆಹಾಕಿದ್ದಾರೆ. ಈ ಸ್ಮರಣೀಯ ಪ್ರದರ್ಶನದೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಬರೆಯುವ ಅವಕಾಶ ಕೆಎಲ್ ರಾಹುಲ್ ಮುಂದಿತ್ತು. ಆದರೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಫಲರಾಗುವ ಮೂಲಕ ಭರ್ಜರಿ ದಾಖಲೆಯನ್ನು ತಪ್ಪಿಸಿಕೊಂಡಿದ್ದಾರೆ.

1 / 5
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದ ನಾಲ್ಕು ಮ್ಯಾಚ್​ಗಳಲ್ಲಿ 2 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದ ರಾಹುಲ್ ಕೊನೆಯ ಪಂದ್ಯದಲ್ಲಿ ಎಡವಿದ್ದಾರೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ ಕೇವಲ 14 ರನ್​ಗಳಿಸಿ ಔಟಾಗಿದ್ದರು.

2 / 5
ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ 28 ಎಸೆತಗಳನ್ನು ಎದುರಿಸಿದರೂ ಕೆಎಲ್ ರಾಹುಲ್ ಕಲೆಹಾಕಿದ್ದು ಕೇವಲ 7 ರನ್​ಗಳು ಮಾತ್ರ. ಈ ಮೂಲಕ ಅಂತಿಮ ಪಂದ್ಯದಲ್ಲಿ 21 ರನ್​ಗಳಿಸಿ ಬ್ಯಾಟಿಂಗ್ ಮುಗಿಸಿದ್ದಾರೆ. ಈ ಇಪ್ಪತ್ತೊಂದು ರನ್​ಗಳೊಂದಿಗೆ ಕೆಎಲ್ಆರ್​ ಅವರು ಈ ಬಾರಿಯ ಸರಣಿಯಲ್ಲಿ ಒಟ್ಟು 532 ರನ್​ ಕಲೆಹಾಕಿದ್ದಾರೆ.

3 / 5
ಆದರೆ ಕೇವಲ 10 ರನ್​ಗಳಿಂದ ಭರ್ಜರಿ ದಾಖಲೆಯೊಂದನ್ನು ನಿರ್ಮಿಸುವ ಅವಕಾಶವನ್ನು ಕೆಎಲ್ ರಾಹುಲ್ ತಪ್ಪಿಸಿಕೊಂಡಿದ್ದಾರೆ. ಅಂದರೆ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್​ನಲ್ಲಿ ಕೆಲ್​ಆರ್​ 31 ರನ್​ಗಳಿಸಿದ್ದರೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಆರಂಭಿಕ ಬ್ಯಾಟ್ಸ್​ಮನ್ ಎನಿಸಿಕೊಳ್ಳುತ್ತಿದ್ದರು.

4 / 5
ಸದ್ಯ ಈ ದಾಖಲೆ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿಯೇ ಉಳಿದುಕೊಂಡಿದೆ. 1979 ರಲ್ಲಿ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಗವಾಸ್ಕರ್ ಬರೋಬ್ಬರಿ 542 ರನ್​ಗಳಿಸಿದ್ದರು. ಈ ಮೂಲಕ ವಿದೇಶಿ ಟೆಸ್ಟ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು.

5 / 5
ಈ ಭರ್ಜರಿ ದಾಖಲೆಯನ್ನು ಮುರಿಯಲು ಕೆಎಲ್ ರಾಹುಲ್​ಗೆ ಉತ್ತಮ ಅವಕಾಶವಿತ್ತು. ಆದರೆ ಅಂತಿಮ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕೇವಲ 14 ರನ್​ಗಳಿಸಿ ಔಟಾಗಿದ್ದ ಕೆಎಲ್ ರಾಹುಲ್, ದ್ವಿತೀಯ ಇನಿಂಗ್ಸ್​ನಲ್ಲಿ 7 ರನ್​ಗಳಿಸಿ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಒಟ್ಟು 532 ರನ್​ಗಳಿಸಿ ಇಂಗ್ಲೆಂಡ್ ವಿರುದ್ಧದ ವಿದೇಶಿ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್​ಗಳಿಸಿದ 2ನೇ ಭಾರತೀಯ ಆರಂಭಿಕ ಬ್ಯಾಟರ್ ಎಂಬ ದಾಖಲೆಗೆ ತೃಪ್ತಿಪಟ್ಟುಕೊಂಡಿದ್ದಾರೆ.