AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 18 ಶತಕಗಳ ಜೊತೆಯಾಟ; 21 ವರ್ಷಗಳ ಹಳೆಯ ದಾಖಲೆ ಉಡೀಸ್

India vs England 5th Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 18 ಶತಕದ ಜೊತೆಯಾಟಗಳು ದಾಖಲಾಗಿದೆ. ಇದು 21ನೇ ಶತಮಾನದಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ದಾಖಲಾದ ಅತಿ ಹೆಚ್ಚು ಶತಕದ ಜೊತೆಯಾಟಗಳ ದಾಖಲೆಯಾಗಿದೆ. ಈ ಮೊದಲು 2003-04ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 17 ಶತಕದ ಜೊತೆಯಾಟಗಳು ನಡೆದಿದ್ದವು. ಈ ಹೊಸ ದಾಖಲೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಸೃಷ್ಟಿಯಾಗಿದೆ.

ಪೃಥ್ವಿಶಂಕರ
|

Updated on: Aug 02, 2025 | 8:28 PM

Share
ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪುನರಾಗಮನ ಮಾಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ 224 ರನ್​ಗಳಿಗೆ ಆಲೌಟ್ ಆಗಿದ್ದ ಭಾರತ, ಇಂಗ್ಲೆಂಡ್‌ ತಂಡವನ್ನು 247 ರನ್​ಗಳಿಗೆ ಸೀಮಿತಗೊಳಿಸಿತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಶುಭ್​ಮನ್ ಗಿಲ್ ಪಡೆ ಪ್ರಸ್ತುತ 300 ರನ್​ಗಳ ಸಮೀಪದಲ್ಲಿದೆ.

1 / 5
ವಾಸ್ತವವಾಗಿ ಎರಡನೇ ಇನ್ನಿಂಗ್ಸ್​ನಲ್ಲೂ ಟೀಂ ಇಂಡಿಯಾಕ್ಕೆ ಹೇಳಿಕೊಳ್ಳುವಂತಹ ಆರಂಭ ಸಿಗಿಲಿಲ್ಲ. ಆರಂಭಿಕ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ ಬೇಗನೇ ವಿಕೆಟ್ ಕಳೆದುಕೊಂಡರು. ಈ ವೇಳೆ ನೈಟ್ ವಾಚ್​ಮನ್ ಆಗಿ ಜೈಸ್ವಾಲ್ ಜೊತೆಗೂಡಿದ ಆಕಾಶ್ ದೀಪ್ ಶತಕದ ಜೊತೆಯಾಟಕ್ಕೆ ನೆರವಾದರು. ಈ ವೇಳೆ ಜೈಸ್ವಾಲ್ ಶತಕ ಸಿಡಿಸಿದರೆ, ಆಕಾಶ್ ದೀಪ್ ಅರ್ಧಶತಕ ಗಳಿಸಿ ಔಟಾದರು.

2 / 5
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ, ಇದುವರೆಗೆ ಒಟ್ಟು 18 ಶತಕಗಳ ಪಾಲುದಾರಿಕೆ ಕಂಡುಬಂದಿದೆ. ಇದು 21 ನೇ ಶತಮಾನದಲ್ಲಿ ದಾಖಲಾದ ಅತ್ಯಧಿಕ ಶತಕದ ಜೊತೆಯಾಟಗಳ ದಾಖಲೆಯಾಗಿದೆ. ಅಲ್ಲದೆ 21 ನೇ ಶತಮಾನದಲ್ಲಿ ಟೆಸ್ಟ್ ಸರಣಿಯಲ್ಲಿ 18 ಬಾರಿ ಶತಕದ ಜೊತೆಯಾಟ ನಿರ್ಮಾಣವಾಗಿರುವುದು ಇದೇ ಮೊದಲು.

3 / 5
ಇದಕ್ಕೂ ಮೊದಲು, 2003-04 ರಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಒಟ್ಟಾರೆ 17 ಶತಕದ ಜೊತೆಯಾಟಗಳು ನಡೆದಿದ್ದವು. ಈಗ ಈ 21 ವರ್ಷಗಳ ಹಳೆಯ ದಾಖಲೆಯನ್ನು ಅಂಡರ್ಸನ್- ತೆಂಡೂಲ್ಕರ್ ಟ್ರೋಫಿಯಲ್ಲಿ ಮುರಿಯಲಾಗಿದೆ.

4 / 5
ಇನ್ನು ಈ ಸರಣಿ ಬಗ್ಗೆ ಹೇಳುವುದಾದರೆ.. ಮೊದಲ ಪಂದ್ಯವನ್ನು ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಗೆದ್ದುಕೊಂಡರೆ, ಭಾರತ ತಂಡ ಎರಡನೇ ಟೆಸ್ಟ್‌ ಪಂದ್ಯವನ್ನು 336 ರನ್‌ಗಳಿಂದ ಗೆದ್ದುಕೊಂಡಿತು. ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 22 ರನ್‌ಗಳಿಂದ ಸೋಲನ್ನು ಎದುರಿಸಿದರೆ, ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಈಗ ಭಾರತ ತಂಡ ಐದನೇ ಟೆಸ್ಟ್ ಪಂದ್ಯವನ್ನು ಗೆದ್ದರೆ, ಅದು ಸರಣಿಯನ್ನು ಸಮಬಲಗೊಳಿಸುತ್ತದೆ.

5 / 5
Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!