IND vs ENG: ಒಂದೇ ಸರಣಿಯಲ್ಲಿ ಮೂರು ಅಪರೂಪದ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್

Updated on: Jul 31, 2025 | 10:49 PM

KL Rahul's England Tour: ಇಂಗ್ಲೆಂಡ್ ಪ್ರವಾಸದಲ್ಲಿ ಕೆಎಲ್ ರಾಹುಲ್ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕಡಿಮೆ ಸ್ಕೋರ್ ಮಾಡಿದರೂ, ವಿದೇಶಿ ಟೆಸ್ಟ್ ಸರಣಿಯಲ್ಲಿ 1000 ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಮೂರನೇ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಅವರು 2 ಶತಕಗಳನ್ನು ಗಳಿಸಿ 500 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.

1 / 6
ಇಂಗ್ಲೆಂಡ್ ಪ್ರವಾಸದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅವರ ಪ್ರದರ್ಶನ ಅದ್ಭುತವಾಗಿದೆ. ಅನುಭವಿ ಆಟಗಾರನಾಗಿ ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲ ರಾಹುಲ್ ಕೊಡುಗೆ ನೀಡಿದ್ದಾರೆ. ಆದಾಗ್ಯೂ ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಈ ಇನ್ನಿಂಗ್ಸ್​ನಲ್ಲಿ 40 ಎಸೆತಗಳನ್ನು ಎದುರಿಸಿದ್ದ ರಾಹುಲ್ ಕೇವಲ 14 ರನ್ ಗಳಿಸಿ ಔಟಾದರು.

2 / 6
ರಾಹುಲ್ ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟದಿರಬಹುದು. ಆದರೆ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ, ರಾಹುಲ್ ವಿದೇಶಿ ಟೆಸ್ಟ್ ಸರಣಿಯಲ್ಲಿ 1000 ಕ್ಕೂ ಹೆಚ್ಚು ಎಸೆತಗಳನ್ನು ಆಡಿದ ಭಾರತದ ಮೂರನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ.

3 / 6
ಈ ಮೂಲಕ ರಾಹುಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ನಡೆಯುತ್ತಿರುವ ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಇದುವರೆಗೆ 1038 ಎಸೆತಗಳನ್ನು ಆಡಿದ್ದಾರೆ.

4 / 6
ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ಭಾರತೀಯ ಆಟಗಾರ ಪಟ್ಟಿಯಲ್ಲಿ ಮತ್ತೊಬ್ಬ ಕನ್ನಡಿಗ ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದಾರೆ. ದಿ ವಾಲ್ ಎಂದೇ ಪ್ರಸಿದ್ಧರಾಗಿರುವ ರಾಹುಲ್, 2002 ರ ಇಂಗ್ಲೆಂಡ್ ಪ್ರವಾಸದಲ್ಲಿ ಗರಿಷ್ಠ ಸಂಖ್ಯೆಯ ಎಸೆತಗಳನ್ನು ಅಂದರೆ 1336 ಎಸೆತಗಳನ್ನು ಆಡಿದ ದಾಖಲೆಯನ್ನು ಮಾಡಿದ್ದರು.

5 / 6
ಇದರ ಜೊತೆಗೆ ಈ ಪ್ರವಾಸದಲ್ಲಿ ರಾಹುಲ್ ಇದುವರೆಗೆ 2 ಶತಕ ಇನ್ನಿಂಗ್ಸ್‌ಗಳನ್ನು ಆಡುವಲ್ಲಿ ಯಶಸ್ವಿಯಾಗಿದ್ದು, 500 ಕ್ಕೂ ಹೆಚ್ಚು ರನ್‌ ಕಲೆಹಾಕಿದ್ದಾರೆ. ಇದಲ್ಲದೆ, ಈ ಟೆಸ್ಟ್ ಸರಣಿಯಲ್ಲಿ ಅವರು ಒಟ್ಟು 1038 ಎಸೆತಗಳನ್ನು ಎದುರಿಸಿದ್ದಾರೆ. ಮೊದಲ ಬಾರಿಗೆ, ರಾಹುಲ್ ಟೆಸ್ಟ್ ಸರಣಿಯಲ್ಲಿ ಈ ಮೂರು ಸಾಧನೆಗಳನ್ನು ಒಟ್ಟಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

6 / 6
ಹಾಗೆಯೇ ಭಾರತದ ಆರಂಭಿಕ ಆಟಗಾರನಾಗಿ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗವಾಸ್ಕರ್ ಅವರ ದಾಖಲೆ ಮುರಿಯುವ ಸನಿಹದಲ್ಲಿ ರಾಹುಲ್ ಇದ್ದಾರೆ. ರಾಹುಲ್ ಇಂಗ್ಲೆಂಡ್‌ನಲ್ಲಿ ಆರಂಭಿಕ ಆಟಗಾರನಾಗಿ 13 ಟೆಸ್ಟ್ ಪಂದ್ಯಗಳಲ್ಲಿ 1122 ರನ್ ಗಳಿಸಿದ್ದಾರೆ. ಪ್ರಸ್ತುತ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಇಂಗ್ಲೆಂಡ್‌ನಲ್ಲಿ 15 ಟೆಸ್ಟ್‌ ಪಂದ್ಯಗಳಲ್ಲಿ ಒಟ್ಟು 1152 ರನ್ ಗಳಿಸಿದ್ದಾರೆ. ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಕೇವಲ 31 ರನ್‌ ಬಾರಿಸಿದರೆ, ಗವಾಸ್ಕರ್ ದಾಖಲೆ ಮುರಿಯಲಿದ್ದಾರೆ.