KL Rahul: ನಿವೃತ್ತಿಯ ಸುಳಿವು? ಬೆಂಗಳೂರು ಪಿಚ್ಗೆ ವಂದಿಸಿ ತೆರಳಿದ ಕೆಎಲ್ ರಾಹುಲ್
KL Rahul: ಕೆಎಲ್ ರಾಹುಲ್ ಈ ವರ್ಷ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. 2024 ರಲ್ಲಿ ಐದು ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ 8, 86, 22, 16, 22*, 68, 0, 12 ರನ್ ಮಾತ್ರ ಕಲೆಹಾಕಿದ್ದಾರೆ. ಅದರಲ್ಲೂ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಭಾರೀ ನಿರಾಸೆ ಮೂಡಿಸಿದ್ದಾರೆ.
1 / 5
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್ಗಳಿಂದ ಸೋಲನುಭವಿಸಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಕೆಎಲ್ ರಾಹುಲ್ ಪಿಚ್ಗೆ ತೆರಳಿ ವಿಶೇಷ ಗೌರವ ಸಲ್ಲಿಸಿದ್ದಾರೆ. ಕನ್ನಡಿಗ ಈ ನಡೆಯು ಇದೀಗ ಹಲವು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
2 / 5
ಅದರಲ್ಲೂ ಬೆಂಗಳೂರು ಟೆಸ್ಟ್ನಲ್ಲಿ ವಿಫಲರಾಗಿರುವ ಕೆಎಲ್ ರಾಹುಲ್ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಭಾರತ ತಂಡವು 36 ವರ್ಷಗಳ ಬಳಿಕ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ರಾಹುಲ್ ಪಿಚ್ಗೆ ವಂದಿಸಿ ತೆರಳಿದ್ದಾರೆ.
3 / 5
ಕೆಎಲ್ ರಾಹುಲ್ ಅವರ ಈ ನಡೆಯ ಬೆನ್ನಲ್ಲೇ, ಇದು ಬೆಂಗಳೂರಿನಲ್ಲಿ ಕನ್ನಡಿಗನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏಕೆಂದರೆ ಐತಿಹಾಸಿಕ ಗೆಲುವು ಹಾಗೂ ವಿದಾಯ ಪಂದ್ಯದ ವೇಳೆ ಪಿಚ್ಗೆ ಗೌರವ ಸಲ್ಲಿಸುವುದು ಸಾಮಾನ್ಯ. ಆದರೆ ಕೆಎಲ್ ರಾಹುಲ್ ಹೀನಾಯ ಸೋಲಿನ ನಂತರ ಪಿಚ್ಗೆ ವಂದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
4 / 5
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ನಿರ್ಣಾಯಕವಾಗಿದ್ದ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 12 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಪುಣೆಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಿಂದ ರಾಹುಲ್ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.
5 / 5
ಹೀಗಾಗಿಯೇ ಬೆಂಗಳೂರು ಟೆಸ್ಟ್ ಪಂದ್ಯವು ಕೆಎಲ್ ರಾಹುಲ್ ಪಾಲಿನ ಕೊನೆಯ ಟೆಸ್ಟ್ ಮ್ಯಾಚ್ ಆಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ನಡುವೆ ಪಿಚ್ಗೂ ವಂದಿಸಿ ತೆರಳಿರುವುದಿಂದ ಅವರು ನಿವೃತ್ತಿ ಘೋಷಿಸಲಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಈ ಅನುಮಾನಗಳಿಗೆ ಖುದ್ದು ಕೆಎಲ್ ರಾಹುಲ್ ಅವರೇ ಉತ್ತರ ನೀಡಲಿದ್ದಾರೆ. ಆ ಉತ್ತರಕ್ಕಾಗಿ ಒಂದಷ್ಟು ದಿನಗಳವರೆಗೆ ಕಾಯಬೇಕಾಗಿ ಬರಬಹುದು.