ಹಾಗೆಯೇ ಭಾರತದಲ್ಲಿ ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು 37 ಟೆಸ್ಟ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಂ ಇಂಡಿಯಾ 17 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ ತಂಡವು ಭಾರತ ತಂಡವನ್ನು ಕೇವಲ 3 ಬಾರಿ ಸೋಲಿಸಲು ಶಕ್ತವಾಗಿದೆ. ಉಳಿದ 17 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಆದರೆ ಕಳೆದ 6 ಪಂದ್ಯಗಳಲ್ಲಿ ಟೀಂ ಇಂಡಿಯಾ 4 ಬಾರಿ ಸೋಲನುಭವಿಸಿದ್ದು, ಕೇವಲ ಒಂದು ಬಾರಿ ಮಾತ್ರ ನ್ಯೂಜಿಲೆಂಡ್ ತಂಡವನ್ನು ಸೋಲಿಸಲು ಶಕ್ತವಾಗಿದೆ. ಇದಲ್ಲದೇ ಒಂದು ಪಂದ್ಯ ಡ್ರಾ ಆಗಿದೆ.