ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಪುತ್ರ
Virat Kohli: ಟೀಮ್ ಇಂಡಿಯಾದ ಬ್ಯಾಟಿಂಗ್ ಆಧಾರಸ್ತಂಭ ವಿರಾಟ್ ಕೊಹ್ಲಿ ಸದ್ಯ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೊದಲ ಮ್ಯಾಚ್ನಲ್ಲಿ 70 ರನ್ ಬಾರಿಸಿ ಮಿಂಚಿದ್ದ ಕೊಹ್ಲಿ ಕಡೆಯಿಂದ ಪುಣೆಯ ಎಂಸಿಎ ಮೈದಾನದಲ್ಲಿ ಶತಕವನ್ನು ನಿರೀಕ್ಷಿಸಬಹುದು.
Updated on: Oct 21, 2024 | 8:42 AM

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ದೇಶ ವಿದೇಶದಲ್ಲಿ ಅಭಿಮಾನಿಗಳು ಇರುವುದು ಗೊತ್ತೇ ಇದೆ. ಅದರಲ್ಲೂ ಕೆಲ ಸ್ಟಾರ್ ಆಟಗಾರರ ಪುತ್ರರೇ ಕಿಂಗ್ ಕೊಹ್ಲಿಯ ಫ್ಯಾನ್ಸ್ಗಳಾಗಿ ಬದಲಾಗಿದ್ದಾರೆ. ಅವರಲ್ಲಿ ಲಂಕಾ ಲೆಜೆಂಡ್ ಪುತ್ರ ಕೂಡ ಒಬ್ಬರು.

ಹೌದು, ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಅವರ ಪುತ್ರ ರಾನುಕ್ ಜಯಸೂರ್ಯ ಕಿಂಗ್ ಕೊಹ್ಲಿಯ ಕಟ್ಟಾಭಿಮಾನಿ. ಹೀಗಾಗಿಯೇ ತನ್ನ ನೆಚ್ಚಿನ ತಾರೆಯನ್ನು ಭೇಟಿಯಾಗಲು ಕಾದು ಕುಳಿತಿದ್ದರು. ರಾನುಕ್ಗೆ ಅಂತಹದೊಂದು ಅವಕಾಶ ಆಗಸ್ಟ್ ತಿಂಗಳಲ್ಲಿ ಸಿಕ್ಕಿದೆ.

ಭಾರತ ತಂಡವು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ತೆರಳಿದ್ದ ವೇಳೆ ಸನತ್ ಜಯಸೂರ್ಯ ತಮ್ಮ ಮಗನಿಗೆ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿಸಿದ್ದಾರೆ. ಇದೇ ವೇಳೆ ರಾನುಕ್ ಕಿಂಗ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆದು, ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ರಾನುಕ್ ಜಯಸೂರ್ಯ ಕೂಡ ತಂದೆಯ ಹಾದಿಯಲ್ಲಿದ್ದಾರೆ. ಈಗಾಗಲೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿರುವ 17 ವರ್ಷದ ರಾನುಕ್ ಶ್ರೀಲಂಕಾ ಕ್ರಿಕೆಟ್ ಮೇಜರ್ ಲೀಗ್ ಅಂಡರ್-23 ಪಂದ್ಯಾವಳಿಯಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಸುದ್ದಿಯಾಗಿದ್ದರು. ಇದೀಗ ಕಿಂಗ್ ಕೊಹ್ಲಿ ಜೊತೆಗಿನ ಫೋಟೋದೊಂದಿಗೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇನ್ನು ಲಂಕಾ ಲೆಜೆಂಡ್ ಸನತ್ ಜಯಸೂರ್ಯ ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡವು 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದುಕೊಂಡಿದೆ. ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಮೂಲಕ ಸನತ್ ಜಯಸೂರ್ಯ ಗರಡಿಯಲ್ಲಿ ಶ್ರೀಲಂಕಾ ತಂಡವು ಮತ್ತೆ ಬಲಿಷ್ಠ ಪಡೆಯಾಗಿ ರೂಪುಗೊಳ್ಳುತ್ತಿದೆ.
























