ಅನುಭವಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಈ ಟೆಸ್ಟ್‌ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಡಕ್ ಔಟ್ ಆಗಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್ಗೆ ಸುಸ್ತಾದರು. ಬೌಲಿಂಗ್ನಲ್ಲೂ ಫೇಲ್ ಆದ ಅಶ್ವಿನ್ ಇಡೀ ಪಂದ್ಯದಲ್ಲಿ 1 ವಿಕೆಟ್ ಪಡೆದರೆ, ಅಧಿಕ ರನ್ ಬಿಟ್ಟುಕೊಟ್ಟು ದುಬಾರಿಯಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡಿದ 16 ಓವರ್‌ಗಳಲ್ಲಿ 5.88 ಎಕಾನಮಿಯಲ್ಲಿ 94 ರನ್ ನೀಡಿದರು.