ಬರೋಬ್ಬರಿ 286 ರನ್​ಗಳು: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಝಿಂಬಾಬ್ವೆ

Seychelles vs Zimbabwe: ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಝಿಂಬಾಬ್ವೆ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ನೈರೋಬಿಯಾ ಜಿಮ್​ಖಾನ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೆಶೆಲ್ಸ್ ವಿರುದ್ಧ ಬರೋಬ್ಬರಿ 286 ರನ್​ ಬಾರಿಸಿ ಸಿಕಂದರ್ ರಾಝ ಪಡೆ ವಿಶೇಷ ದಾಖಲೆ ಬರೆದಿದೆ.

ಝಾಹಿರ್ ಯೂಸುಫ್
|

Updated on: Oct 21, 2024 | 10:53 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ಟಾಪ್-3 ತಂಡಗಳ ಪಟ್ಟಿಗೆ ಝಿಂಬಾಬ್ವೆ ಕೂಡ ಎಂಟ್ರಿ ಕೊಟ್ಟಿದೆ. ಅದು ಸಹ ಬರೋಬ್ಬರಿ 286 ರನ್​ಗಳನ್ನು ಕಲೆಹಾಕುವ ಮೂಲಕ ಎಂಬುದು ವಿಶೇಷ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 280 ಕ್ಕೂ ಅಧಿಕ ಸ್ಕೋರ್​ಗಳಿಸಿದ ವಿಶ್ವದ 3ನೇ ತಂಡ ಎನಿಸಿಕೊಂಡಿದೆ.

1 / 7
ಮುಂಬರುವ ಟಿ20 ವಿಶ್ವಕಪ್​ನ ಆಫ್ರಿಕಾ ಕ್ವಾಲಿಫೈಯರ್ ಟೂರ್ನಿಯ 2ನೇ ಪಂದ್ಯದಲ್ಲಿ ಝಿಂಬಾಬ್ವೆ ಈ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೆಶೆಲ್ಸ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಝಿಂಬಾಬ್ವೆ ಪರ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಕೇವಲ 35 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 91 ರನ್ ಬಾರಿಸಿದ್ದರು.

2 / 7
ಇನ್ನು ವಿಕೆಟ್ ಕೀಪರ್ ಬ್ಯಾಟರ್ ತಡಿವಾನಾಶೆ ಮರುಮಣಿ 37 ಎಸೆತಗಳಲ್ಲಿ 5 ಸಿಕ್ಸ್, 10 ಫೋರ್​ಗಳೊಂದಿಗೆ 86 ರನ್​ ಚಚ್ಚಿದರು. ಆ ಬಳಿಕ ಬಂದ ನಾಯಕ ಸಿಕಂದರ್ ರಾಝ ಕೇವಲ 13 ಎಸೆತಗಳಲ್ಲಿ ಅಜೇಯ 36 ರನ್ ಬಾರಿಸಿದರು. ಈ ಮೂಲಕ ಝಿಂಬಾಬ್ವೆ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 286 ರನ್​ ಕಲೆಹಾಕಿತು.

3 / 7
ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್​ ಕಲೆಹಾಕಿದ ಟೆಸ್ಟ್ ಆಡುವ ವಿಶ್ವದ 2ನೇ ತಂಡ ಎಂಬ ಹೆಗ್ಗಳಿಕೆಗೆ ಝಿಂಬಾಬ್ವೆ ಪಾತ್ರವಾಯಿತು. ಅಲ್ಲದೆ ಚುಟುಕು ಕ್ರಿಕೆಟ್​ನಲ್ಲಿ ಬೃಹತ್ ಮೊತ್ತ ದಾಖಲಿಸಿದ ವಿಶ್ವದ ಮೂರನೇ ತಂಡವೆಂಬ ದಾಖಲೆಯನ್ನು ಸಹ ಝಿಂಬಾಬ್ವೆ ತನ್ನದಾಗಿಸಿಕೊಂಡರು.

4 / 7
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನೇಪಾಳ ತಂಡ. 2023 ರಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸ್ಕೋರ್​ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದೆ.

5 / 7
ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 297 ರನ್​ ಕಲೆಹಾಕಿ ಈ ದಾಖಲೆ ಬರೆದಿದೆ.

6 / 7
ಇದೀಗ ಸೆಶೆಲ್ಸ್ ವಿರುದ್ಧ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟದೊಂದಿಗೆ 286 ರನ್ ಬಾರಿಸಿ ಝಿಂಬಾಬ್ವೆ ತಂಡವು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನು ಈ ಪಂದ್ಯದಲ್ಲಿ ಝಿಂಬಾಬ್ವೆ ನೀಡಿದ 286 ರನ್​ಗಳ ಗುರಿಯನ್ನು ಬೆನ್ನತ್ತಿದ ಸೆಶೆಲ್ಸ್ ತಂಡದ ಇನಿಂಗ್ಸ್​ಗೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ, 6.1 ಓವರ್​ಗಳಲ್ಲಿ 95 ರನ್​ಗಳ ಗುರಿ ನೀಡಲಾಯಿತು. ಆದರೆ 6.1 ಓವರ್​ಗಳಲ್ಲಿ ಸೆಶೆಲ್ಸ್ ತಂಡವು ಕೇವಲ 18 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಝಿಂಬಾಬ್ವೆ ತಂಡ 75 ರನ್​ಗಳ ಭರ್ಜರಿ ಜಯ ಸಾಧಿಸಿದೆ.

7 / 7
Follow us