Krunal Pandya IPL Auction 2025: ಆರ್ಸಿಬಿಗೆ ಬಂದ ಹಾರ್ದಿಕ್ ಪಾಂಡ್ಯ ಸಹೋದರ
Krunal Pandya IPL Auction 2025: ಮುಂಬೈ ಇಂಡಿಯನ್ಸ್‌ನೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಲಕ್ನೋ ಸೂಪರ್ ಜೈಂಟ್ಸ್‌ಗೆ ತೆರಳಿದ್ದ ಕೃನಾಲ್ ಪಾಂಡ್ಯ ಈಗ ಹೊಸ ತಂಡವನ್ನು ಕಂಡುಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಕೃನಾಲ್ ಪಾಂಡ್ಯರನ್ನು 5.75 ಕೋಟಿ ರೂಗೆ ಖರೀದಿಸುವಲ್ಲಿ ಆರ್ಸಿಬಿ ಯಶಸ್ವಿಯಾಯಿತು.
1 / 5
ಐಪಿಎಲ್ ಮೆಗಾ ಹರಾಜಿನ ಎರಡನೇ ದಿನವಾದ ಇಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಮೊದಲ ಖರೀದಿಯಾಗಿ ಟೀಂ ಇಂಡಿಯಾದ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
2 / 5
ಕೃನಾಲ್ ಪಾಂಡ್ಯ ಖರೀದಿಗಾಗಿ ಬೆಂಗಳೂರು ಮತ್ತು ರಾಜಸ್ಥಾನ ನಡುವೆ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ರೂ 5.75 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.
3 / 5
2016 ರಲ್ಲಿ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಆಡಿದ್ದ ಕೃನಾಲ್ ಪಾಂಡ್ಯ, ಆರ್ಸಿಗೆ ಸೇರುವ ಮೊದಲು, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದರು. 2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿದ್ದ ಕೃನಾಲ್ರನ್ನು ಲಕ್ನೋ ಫ್ರಾಂಚೈಸ್ 8.25 ಕೋಟಿ ರೂಪಾಯಿ ಪಾವತಿಸುವ ಮೂಲಕ ತಂಡಕ್ಕೆ ಸೇರಿಸಿಕೊಂಡಿತ್ತು.
4 / 5
ಆದರೆ, ತಂಡದ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲು ಕೃನಾಲ್ಗೆ ಸಾಧ್ಯವಾಗಿರಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರ ವಿಫಲ ಪ್ರದರ್ಶನವು ಎಲ್ಲರನ್ನು ನಿರಾಶೆಗೊಳಿಸಿತು, ಇದರಿಂದಾಗಿ ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದರು.
5 / 5
ಇನ್ನು ಐಪಿಎಲ್‌ನಲ್ಲಿ 127 ಪಂದ್ಯಗಳನ್ನು ಆಡಿರುವ ಕೃನಾಲ್ 132.82 ರ ಸ್ಟ್ರೈಕ್ ರೇಟ್ ಹಾಗೂ 22.56ರ ಸರಾಸರಿಯೊಂದಿಗೆ 1,647 ರನ್ ಕಲೆಹಾಕಿದ್ದಾರೆ. ಹಾಗೆಯೇ ಸ್ಪಿನ್ ಬೌಲರ್ ಆಗಿರುವ ಕೃನಾಲ್, ಇದುವರೆಗೆ ಆಡಿರುವ 127 ಪಂದ್ಯಗಳಲ್ಲಿ 34.28 ರ ಸರಾಸರಿ ಮತ್ತು 7.36 ರ ಎಕಾನಮಿ ದರದಲ್ಲಿ 76 ವಿಕೆಟ್‌ಗಳನ್ನು ಪಡೆದಿದ್ದಾರೆ.