13 ಎಸೆತ, 7 ಬೌಂಡರಿ, 6 ಸಿಕ್ಸರ್, 64 ರನ್..! ಲೆಜೆಂಡ್ಸ್ ಕಾಳಗದಲ್ಲಿ ಸುನಾಮಿ ಎಬ್ಬಿಸಿದ ಗಂಭೀರ್ ಪಾರ್ಟ್ನರ್

| Updated By: ಪೃಥ್ವಿಶಂಕರ

Updated on: Sep 22, 2022 | 2:19 PM

Legends League Cricket: 215.78 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೊಲೊಮನ್ ಮಿರ್, ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 13 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳ ಬಲದಿಂದ 64 ರನ್ ದೋಚಿದರು.

1 / 5
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದು, ಈ ಪಂದ್ಯಾವಳಿಯಲ್ಲಿ ವಿಶ್ವ ಕ್ರಿಕೆಟ್‌ನ ಮಾಜಿ ಲೆಜೆಂಡ್‌ಗಳು ಪಾಲ್ಗೋಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ರಸದೌತಣವನ್ನೇ ನೀಡುತ್ತಿದ್ದಾರೆ. ಈ ಪಂದ್ಯಾವಳಿಯ ಭಾಗವಾಗಿ ಸೆಪ್ಟೆಂಬರ್ 21 ಬುಧವಾರದಂದು ಲಕ್ನೋದಲ್ಲಿ ನಡೆದ ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಭಿಲ್ವಾರಾ ಕಿಂಗ್ಸ್ ತಂಡಗಳ ನಡುವಿನ ಕದನದಲ್ಲಿ ಗಂಭೀರ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ತಂಡ ಭಿಲ್ವಾರಾ ಕಿಂಗ್ಸ್ ತಂಡವನ್ನು 78 ರನ್‌ಗಳಿಂದ ಸೋಲಿಸಿತು. ಇದು ಎರಡು ಪಂದ್ಯಗಳಲ್ಲಿ ಇಂಡಿಯಾ ಕ್ಯಾಪಿಟಲ್ಸ್‌ ತಂಡದ ಮೊದಲ ಗೆಲುವಾಗಿದ್ದು, ಈ ಗೆಲುವಿನಲ್ಲಿ 33 ವರ್ಷದ ಬ್ಯಾಟ್ಸ್‌ಮನ್ ಸೊಲೊಮನ್ ಮಿರ್ ಪ್ರಮುಖ ಪಾತ್ರವಹಿಸಿದರು.

2 / 5
ಗೌತಮ್ ಗಂಭೀರ್ ನಾಯಕತ್ವದ ಕ್ಯಾಪಿಟಲ್ಸ್ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಈ ಬೃಹತ್ ಟಾರ್ಗೆಟ್​ನಲ್ಲಿ ಬಹುಪಾಲು ಜಿಂಬಾಬ್ವೆಯ ಮಾಜಿ ಬ್ಯಾಟ್ಸ್‌ಮನ್ ಸೊಲೊಮನ್ ಮಿರ್ ಅವರ ಕೊಡುಗೆಯಾಗಿತ್ತು. ತಂಡದ ಪರ ಬೆರಗುಗೊಳಿಸುವ ಇನ್ನಿಂಗ್ಸ್ ಆಡಿದ ಮಿರ್, ಕೇವಲ 38 ಎಸೆತಗಳಲ್ಲಿ 82 ರನ್ ಚಚ್ಚಿದರು.

3 / 5
215.78 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೊಲೊಮನ್ ಮಿರ್, ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 13 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳ ಬಲದಿಂದ 64 ರನ್ ದೋಚಿದರು.

4 / 5
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಿರ್ಧಾರದಿಂದಾಗಿ 30 ನೇ ವಯಸ್ಸಿನಲ್ಲಿ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಸೊಲೊಮನ್ ಮಿರ್ ತನ್ನಲ್ಲಿ ಕ್ರಿಕೆಟ್ ಸಾಮಥ್ಯ್ರ ಕೊಂಚವು ಕರಗಿಲ್ಲ ಎಂಬುದನ್ನು ಈ ಪಂದ್ಯದಲ್ಲಿ ಸಾಭೀತುಪಡಿಸಿದರು. ವಾಸ್ತವವಾಗಿ 2019 ರಂದು ಕ್ರಿಕೆಟ್​ನಲ್ಲಿ ರಾಜಕೀಯ ಹಸ್ತಕ್ಷೇಪದಿಂದಾಗಿ ಜಿಂಬಾಬ್ವೆ ಕ್ರಿಕೆಟ್ ಅನ್ನು ಐಸಿಸಿ ಅಮಾನತುಗೊಳಿಸಿತ್ತು. ಇದರಿಂದಾಗಿ ಜಿಂಬಾಬ್ವೆ ತಂಡ ಯಾವುದೇ ಐಸಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮೀರ್ ನಿವೃತ್ತಿ ಹೊಂದಿದ್ದರು.

5 / 5
2014 ರಲ್ಲಿ ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಸೊಲೊಮನ್ ಮಿರ್ ಅವರು ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ತಮ್ಮ 47 ODIಗಳಲ್ಲಿ, ಮಿರ್ 1 ಶತಕ ಮತ್ತು 3 ಅರ್ಧ ಶತಕಗಳ ಸಹಾಯದಿಂದ 955 ರನ್ ಗಳಿಸಿದರು. ಜೊತೆಗೆ 2 ಟೆಸ್ಟ್‌ಗಳಲ್ಲಿ 78 ರನ್ ಮತ್ತು 9 ಟಿ20 ಪಂದ್ಯಗಳಲ್ಲಿ 253 ರನ್ ಗಳಿಸಿದ್ದಾರೆ.

Published On - 2:19 pm, Thu, 22 September 22