ಹೆಚ್ಚು ಶತಕ, ಅರ್ಧಶತಕ, ಸಿಕ್ಸರ್…: ಈ ವಿಶ್ವಕಪ್​ನಲ್ಲಿ ರೋಹಿತ್ ಪಡೆ ಸೃಷ್ಟಿಸಬಹುದಾದ ಹಲವು ದಾಖಲೆಗಳಿವು

|

Updated on: Oct 01, 2023 | 8:47 AM

ODI World Cup 2023: 2023 ರ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿದ್ದು, ಈ ಬಾರಿಯ ಚಾಂಪಿಯನ್ ಆಗುವ ಸುವರ್ಣಾವಕಾಶ ಟೀಂ ಇಂಡಿಯಾಕ್ಕಿದೆ. ಅದಕ್ಕೆ ಪೂರಕವಾಗಿ ಬಲಿಷ್ಠ ಪಡೆಯನ್ನೇ ಬಿಸಿಸಿಐ ಕಣಕ್ಕಿಳಿಸಿದೆ. ಇನ್ನು ಈ ಮೆಗಾ ಇವೆಂಟ್​ನಲ್ಲಿ ರೋಹಿತ್ ಪಡೆ ಹಲವು ದಾಖಲೆಗಳನ್ನು ಬರೆಯುವ ಹೊಸ್ತಿಲಿನಲ್ಲಿದೆ. ಆ ದಾಖಲೆಗಳ ಪಟ್ಟಿ ಇಲ್ಲಿದೆ.

1 / 9
2023 ರ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿದ್ದು, ಈ ಬಾರಿಯ ಚಾಂಪಿಯನ್ ಆಗುವ ಸುವರ್ಣಾವಕಾಶ ಟೀಂ ಇಂಡಿಯಾಕ್ಕಿದೆ. ಅದಕ್ಕೆ ಪೂರಕವಾಗಿ ಬಲಿಷ್ಠ ಪಡೆಯನ್ನೇ ಬಿಸಿಸಿಐ ಕಣಕ್ಕಿಳಿಸಿದೆ. ಇನ್ನು ಈ ಮೆಗಾ ಇವೆಂಟ್​ನಲ್ಲಿ ರೋಹಿತ್ ಪಡೆ ಹಲವು ದಾಖಲೆಗಳನ್ನು ಬರೆಯುವ ಹೊಸ್ತಿಲಿನಲ್ಲಿದೆ. ಆ ದಾಖಲೆಗಳ ಪಟ್ಟಿ ಇಲ್ಲಿದೆ.

2 / 9
ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌: ಏಕದಿನ ವಿಶ್ವಕಪ್​ನಲ್ಲಿ ತಲಾ 44 ವಿಕೆಟ್ ಪಡೆದಿರುವ ಮಾಜಿ ಲೆಜೆಂಡರಿ ವೇಗಿಗಳಾದ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರು ಪ್ರಸ್ತುತ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್​ ಪಡೆದವರ ಪೈಕಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

3 / 9
ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಮೊಹಮ್ಮದ್ ಶಮಿ ತನ್ನ ಮೂರನೇ ಏಕದಿನ ವಿಶ್ವಕಪ್‌ನಲ್ಲಿ (11 ವಿಶ್ವಕಪ್ ಪಂದ್ಯಗಳಲ್ಲಿ 31 ವಿಕೆಟ್‌ಗಳು)ಇನ್ನು ಕೇವಲ 13 ವಿಕೆಟ್‌ ಪಡೆದರೆ ಈ ದಿಗ್ಗಜರ ದಾಖಲೆ ಮುರಿದು ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಭಾರತೀಯರ ಪೈಕಿ ಮೊದಲ ಸ್ಥಾನಕ್ಕೇರಲಿದ್ದಾರೆ.

4 / 9
ಸಚಿನ್ ದಾಖಲೆ ಮುರಿಯಲ್ಲಿದ್ದಾರೆ ಗಿಲ್‌: ಈ ವರ್ಷ ಅದ್ಭುತ ಪ್ರದರ್ಶನ ನೀಡಿರುವ ಭಾರತದ ಸ್ಟಾರ್ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಇದುವರೆಗೆ ಆಡಿರುವ 20 ಇನ್ನಿಂಗ್ಸ್‌ಗಳಿಂದ 1230 ರನ್ ಕಲೆಹಾಕಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಗಿಲ್ ಕನಿಷ್ಠ 9 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರೆ, ಸಚಿನ್ ತೆಂಡೂಲ್ಕರ್ ಅವರ 25 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾಶ ಪಡೆಯಲ್ಲಿದ್ದಾರೆ.

5 / 9
ಈ ವಿಶ್ವಕಪ್​ನಲ್ಲಿ ಗಿಲ್ 665 ರನ್ ಗಳಿಸಲು ಯಶಸ್ವಿಯಾದರೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲ್ಲಿದ್ದಾರೆ.

6 / 9
ಅತಿ ಹೆಚ್ಚು ಸಿಕ್ಸರ್: ರೋಹಿತ್ ಶರ್ಮಾ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ 471 ಇನ್ನಿಂಗ್ಸ್‌ಗಳಲ್ಲಿ 551 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ಬ್ಯಾಟಿಂಗ್ ಸ್ಟಾರ್ ಕ್ರಿಸ್ ಗೇಲ್ ಅವರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ (553 ಸಿಕ್ಸರ್‌ಗಳು) ದಾಖಲೆಯನ್ನು ಮುರಿಯಲು ಭಾರತೀಯ ನಾಯಕ ಕೇವಲ ಮೂರು ಸಿಕ್ಸರ್‌ಗಳ ದೂರದಲ್ಲಿದ್ದಾರೆ.

7 / 9
ಕೇವಲ ಒಂದು ಶತಕ ಅವಶ್ಯಕ: ರೋಹಿತ್ ಶರ್ಮಾ (ಕೇವಲ 17 ಇನ್ನಿಂಗ್ಸ್‌ಗಳಲ್ಲಿ 6 ಶತಕ) ಮತ್ತು ಸಚಿನ್ ತೆಂಡೂಲ್ಕರ್ (44 ಇನ್ನಿಂಗ್ಸ್‌ಗಳಲ್ಲಿ 6 ಶತಕ) ತಲಾ 6 ಶತಕಗಳನ್ನು ಬಾರಿಸುವ ಮೂಲಕ ಇದುವರೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರೆನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ರೋಹಿತ್ ಕೇವಲ ಒಂದು ಶತಕದ ದೂರದಲ್ಲಿದ್ದಾರೆ.

8 / 9
ಏಕದಿನದಲ್ಲಿ 50 ಶತಕ: ಏಕದಿನದಲ್ಲಿ ಇದುವರೆಗೆ 47 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ, ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ.

9 / 9
ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಇನ್ನು ಕೇವಲ ಮೂರು ಶತಕ ಸಿಡಿಸಿದರೆ ಸಚಿನ್ ಅವರ ದಾಖಲೆಯನ್ನು ಮುರಿಯಲಿದ್ದಾರೆ ಮತ್ತು ಐವತ್ತು ಏಕದಿನ ಶತಕಗಳನ್ನು ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ವಿಶ್ವ ದಾಖಲೆ ಬರೆಯಲ್ಲಿದ್ದಾರೆ.