Logan Van Beek: 4,6,4,6,6,4: ಸೂಪರ್ ಓವರ್ನಲ್ಲಿ ವಿಶ್ವ ದಾಖಲೆ ಬರೆದ ವ್ಯಾನ್ ಬೀಕ್
TV9 Web | Updated By: ಝಾಹಿರ್ ಯೂಸುಫ್
Updated on:
Jun 27, 2023 | 6:09 PM
Logan Van Beek: 31 ರನ್ಗಳ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ವಿಶೇಷ ಎಂದರೆ ಈ ಓವರ್ ಎಸೆದಿರುವುದು ಕೂಡ ವ್ಯಾನ್ ಬೀಕ್.
1 / 9
ICC World Cup Qualifiers 2023: ಹರಾರೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಸೂಪರ್ ಗೆಲುವು ದಾಖಲಿಸುವ ಮೂಲಕ ನೆದರ್ಲ್ಯಾಂಡ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ.
2 / 9
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಕಲೆಹಾಕಿತು. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 374 ರನ್ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಂಡಿತು.
3 / 9
ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯವು ಸೂಪರ್ ಓವರ್ನತ್ತ ಸಾಗಿತು. ಇತ್ತ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಚೆಂಡನ್ನು ಜೇಸನ್ ಹೋಲ್ಡರ್ ಕೈಗಿತ್ತರು.
4 / 9
ಹೋಲ್ಡರ್ ಅವರ ಮೊದಲ ಎಸೆತದಲ್ಲೇ ಫೋರ್ ಬಾರಿ ಲೋಗನ್ ವ್ಯಾನ್ ಬೀಕ್, 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು.
5 / 9
4ನೇ ಹಾಗೂ 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಒಂದೇ ಓವರ್ನಲ್ಲಿ ವ್ಯಾನ್ ಬೀಕ್ ಬರೋಬ್ಬರಿ 30 ರನ್ ಚಚ್ಚಿದರು.
6 / 9
31 ರನ್ಗಳ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ವಿಶೇಷ ಎಂದರೆ ಈ ಓವರ್ ಎಸೆದಿರುವುದು ಕೂಡ ವ್ಯಾನ್ ಬೀಕ್.
7 / 9
ಅಂದರೆ ವ್ಯಾನ್ ಬೀಕ್ ಸೂಪರ್ ಓವರ್ ಬ್ಯಾಟಿಂಗ್ನಲ್ಲಿ 30 ರನ್ ಬಾರಿಸಿ, ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ನೆದರ್ಲ್ಯಾಂಡ್ಸ್ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು.
8 / 9
ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲೇ ಸೂಪರ್ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ಲೋಗನ್ ವ್ಯಾನ್ ಬೀಕ್ ನಿರ್ಮಿಸಿದರು.
9 / 9
ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 2008 ರಲ್ಲಿ ಡೇನಿಯಲ್ ವೆಟ್ಟೋರಿ ಎಸೆದ ಸೂಪರ್ ಓವರ್ನಲ್ಲಿ 25 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.