ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಮಥೀಶ ಪತಿರಾಣ

| Updated By: ಝಾಹಿರ್ ಯೂಸುಫ್

Updated on: Aug 31, 2023 | 10:59 PM

Matheesha Pathirana: ವೇಗದ ಯಾರ್ಕರ್ ಎಸೆತಗಳ​ ಮೂಲಕ ಗಮನ ಸೆಳೆದ ಪತಿರಾಣ 7.4 ಓವರ್​ಗಳಲ್ಲಿ ಕೇವಲ 32 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 164 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

1 / 7
ಏಷ್ಯಾಕಪ್​ನ 2ನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ತಂಡದ ಯುವ ವೇಗಿ ಮಥೀಶ ಪತಿರಾಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಿಗ್ಗಜ ಬೌಲರ್ ಚಾಮಿಂಡ ವಾಸ್ ಅವರ 29 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 7
ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ್ ತಂಡವು ಮಥೀಶ ಪತಿರಾಣ ದಾಳಿಗೆ ತತ್ತರಿಸಿತು.

3 / 7
ವೇಗದ ಯಾರ್ಕರ್ ಎಸೆತಗಳ​ ಮೂಲಕ ಗಮನ ಸೆಳೆದ ಪತಿರಾಣ 7.4 ಓವರ್​ಗಳಲ್ಲಿ ಕೇವಲ 32 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 164 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

4 / 7
ಅಲ್ಲದೆ ಶ್ರೀಲಂಕಾ ಪರ 4 ವಿಕೆಟ್ ಕಬಳಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಚಾಮಿಂಡ ವಾಸ್ ಹೆಸರಿನಲ್ಲಿತ್ತು.

5 / 7
1994 ರಲ್ಲಿ ಝಿಂಬಾಬ್ವೆ ವಿರುದ್ಧ ಚಾಮಿಂಡ ವಾಸ್ 20 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಅಂದು ವಾಸ್ ಅವರ ವಯಸ್ಸು 20 ವರ್ಷ, 280 ದಿನಗಳು.

6 / 7
ಇದೀಗ 20 ವರ್ಷ, 256 ದಿನಗಳಲ್ಲಿ ಮಥೀಶ ಪತಿರಾಣ 4 ವಿಕೆಟ್ ಕಬಳಿಸುವ ಮೂಲಕ 29 ವರ್ಷಗಳಿಂದ ಚಾಮಿಂಡ ವಾಸ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

7 / 7
ಹಾಗೆಯೇ ಏಷ್ಯಾಕಪ್​ನಲ್ಲಿ 4 ವಿಕೆಟ್ ಕಬಳಿಸಿದ ಶ್ರೀಲಂಕಾ ತಂಡದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನೂ ಕೂಡ ಮಥೀಶ ಪತಿರಾಣ ನಿರ್ಮಿಸಿದ್ದಾರೆ. (APC: AFP/Getty Images)