World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
TV9 Web | Updated By: ಝಾಹಿರ್ ಯೂಸುಫ್
Updated on:
Feb 22, 2022 | 5:39 PM
Matthew Spoors: ಜರ್ಮನಿ ವಿರುದ್ದ ನಡೆದ ಈ ಪಂದ್ಯದಲ್ಲಿ ಮ್ಯಾಥ್ಯೂ 55 ಎಸೆತಗಳಲ್ಲಿ 73 ರನ್ ಬಾರಿಸಿದ್ದರು. ಈ ಮೂಲಕ ಜರ್ಮನಿ ನೀಡಿ 132 ರನ್‌ಗಳ ಟಾರ್ಗೆಟ್ ಅನ್ನು ಕೆನಡಾ 19.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು.
1 / 5
ಟಿ20 ಕ್ರಿಕೆಟ್ನಲ್ಲಿ ಶತಕಗಳು ಮೂಡಿಬರುವುದು ಬಲು ಅಪರೂಪ. ಆದರೆ ಕೆನಡಾದ 22 ವರ್ಷದ ಯುವ ಬ್ಯಾಟ್ಸ್ಮನ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಹೀಗೆ ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಆಟಗಾರನ ಹೆಸರು ಮ್ಯಾಥ್ಯೂ ಸ್ಪೂರ್ಸ್.
2 / 5
T20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಫಿಲಿಪೈನ್ಸ್ ವಿರುದ್ಧ ಚೊಚ್ಚಲ ಪಂದ್ಯವಾಡಿದ ಮ್ಯಾಥ್ಯೂ ಸ್ಪೂರ್ಸ್ ಮೊದಲ ಇನ್ನಿಂಗ್ಸ್‌ನಲ್ಲೇ ಶತಕ ಸಿಡಿಸಿದರು. ಈ ಮೂಲಕ ಟಿ20 ಪದಾರ್ಪಣೆ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಬರೆದರು.
3 / 5
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮ್ಯಾಥ್ಯೂ ಸ್ಪೂರ್ಸ್ 66 ಎಸೆತಗಳಲ್ಲಿ ಅಜೇಯ 108 ರನ್ ಬಾರಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 14 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಮೂಡಿಬಂದಿತು. ಮ್ಯಾಥ್ಯೂ ಸ್ಪರ್ಸ್ ಅವರ ಈ ಅಜೇಯ ಶತಕದ ನೆರವಿನಿಂದ ಕೆನಡಾ ತಂಡವು 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು.
4 / 5
ಈ ಬೃಹತ್ ಗುರಿ ಬೆನ್ನತ್ತಿದ ಫಿಲಿಪೈನ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕೆನಡಾ ತಂಡವು 118 ರನ್‌ಗಳ ಬೃಹತ್ ಅಂತರದಿಂದ ಗೆಲುವು ದಾಖಲಿಸಿತು.
5 / 5
ಇನ್ನು ಈ ಪಂದ್ಯದ ಬಳಿಕ 2ನೇ ಪಂದ್ಯದಲ್ಲೂ ಮ್ಯಾಥ್ಯೂ ಸ್ಪೂರ್ಸ್ ಅಬ್ಬರಿಸಿದ್ದರು. ಜರ್ಮನಿ ವಿರುದ್ದ ನಡೆದ ಈ ಪಂದ್ಯದಲ್ಲಿ ಮ್ಯಾಥ್ಯೂ 55 ಎಸೆತಗಳಲ್ಲಿ 73 ರನ್ ಬಾರಿಸಿದ್ದರು. ಈ ಮೂಲಕ ಜರ್ಮನಿ ನೀಡಿ 132 ರನ್‌ಗಳ ಟಾರ್ಗೆಟ್ ಅನ್ನು ಕೆನಡಾ 19.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು.
Published On - 5:38 pm, Tue, 22 February 22