- Kannada News Photo gallery Cricket photos MI vs RCB IPL 2023 How is the pitch at Wankhede?, What is Faf Duplessis strategy? Kannada News
Wankhede Stadium Pitch, MI vs RCB: ಮುಂಬೈನಲ್ಲಿಂದು ಬ್ಯಾಟ್ಸ್ಮನ್ಗಳ ದಿನ: ವಾಂಖೆಡೆ ಪಿಚ್ ಹೇಗಿದೆ?, ಆರ್ಸಿಬಿ ರಣತಂತ್ರವೇನು?
Wankhede Pitch Report: ಬ್ಯಾಟರ್ಗಳ ಸ್ವರ್ಗವಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಮುಂಬೈ-ಆರ್ಸಿಬಿ ಪಂದ್ಯ ನಡೆಯಲಿದ್ದು ಇಲ್ಲಿ ರನ್ ಮಳೆ ಸುರಿಯುವುದು ಖಚಿತ. ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ.
Updated on: May 09, 2023 | 8:52 AM

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ 2023ರ 54ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗುತ್ತಿದೆ.

ಉಭಯ ತಂಡಗಳು ಆಡಿದ ಆಡಿರುವ 10 ಪಂದ್ಯಗಳಲ್ಲಿ ತಲಾ ಐದು ಸೋಲು, ಗೆಲುವು ಸಾಧಿಸಿ 10 ಅಂಕ ಸಂಪಾದಿಸಿದೆ. ರನ್ರೇಟ್ ಆಧಾರದ ಮೇಲೆ ಆರ್ಸಿಬಿ ಆರನೇ ಸ್ಥಾನದಲ್ಲಿದ್ದರೆ ಮುಂಬೈ ಎಂಟನೇ ಸ್ಥಾನದಲ್ಲಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲೇರಲು ಎರಡೂ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ ಆಗಿದೆ.

ಬ್ಯಾಟರ್ಗಳ ಸ್ವರ್ಗವಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ರನ್ ಮಳೆ ಸುರಿಯುವುದು ಖಚಿತ. ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಸ್ಕೋರ್ ಕಲೆಹಾಕಬಹುದು.

ಸರಿಯಾದ ಜಾಗದಲ್ಲಿ ಚೆಂಡು ಹಾಕಿದರಷ್ಟೆ ಬ್ಯಾಟರ್ಗೆ ಕಷ್ಟವಾಗಬಹುದು. ಪಂದ್ಯ ಸಾಗುತ್ತಿದ್ದಂತೆ ಬೌಲರ್ಗಳಿಗೆ ಕೂಡ ಈ ಪಿಚ್ ಸಹಕಾರ ನೀಡಲಿದೆ. ಈ ಪಿಚ್‌ನಲ್ಲಿ 173 ಪ್ರಥಮ ಇನಿಂಗ್ಸ್ ಆವರೇಜ್ ಸ್ಕೋರ್ ಆಗಿದ್ದು, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡಬಹುದು.

ಉಭಯ ತಂಡಗಳು ಐಪಿಎಲ್ನಲ್ಲಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದಲರಲ್ಲಿ ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಜಯ ಸಾಧಿಸಿದರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯವನ್ನು ಗೆದ್ದಿದೆ.

ಆರ್ಸಿಬಿ ತಂಡ ಒಂದು ಹೆಚ್ಚುವರಿ ಬ್ಯಾಟರ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅವಕಾಶಕ್ಕಾಗಿ ಕಾಯುತ್ತಿರುವ ಮಿಚೆಲ್ ಬ್ರೇಸ್ವೆಲ್ ಕಣಕ್ಕಿಳಿಯಬಹುದು. ಹೀಗಾದಲ್ಲಿ ವನಿಂದು ಹಸರಂಗ ಬೆಂಚ್ ಕಾಯಬೇಕಿದೆ. ಕರ್ಣ್ ಶರ್ಮಾ ಸ್ಪಿನ್ ಜವಾಬ್ದಾರಿ ವಹಿಸಬೇಕು.

ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ. -0.030 ರನ್ರೇಟ್ ಹೊಂದಿದೆ. ಪ್ಲೇ ಆಫ್ಗೆ ಕ್ವಾಲಿಫೈ ಆಗಬೇಕಾದರೆ ಮುಂಬರುವ ಎಲ್ಲ ಪಂದ್ಯ ಮಹತ್ವದ್ದಾಗಿದೆ. ಕೇವಲ ಗೆದ್ದರಷ್ಟೆ ಸಾಲದು, ಕನಿಷ್ಠ ಎರಡು ಪಂದ್ಯಗಳಲ್ಲಿ ದೊಡ್ಡ ರನ್ನಿಂದ ಗೆದ್ದು + ರನ್ರೇಟ್ಗೆ ಮರಳಬೇಕು.



















