ಭಾರತ- ಆಸ್ಟ್ರೇಲಿಯಾ ಆಟಗಾರರನ್ನೊಳಗೊಂಡ ಈ ಶತಮಾನದ ಶ್ರೇಷ್ಠ ಟೆಸ್ಟ್ ತಂಡ ಪ್ರಕಟಿಸಿದ ಕ್ಲಾರ್ಕ್

|

Updated on: Dec 10, 2024 | 6:20 PM

Michael Clarke's best Test XI: ಮೈಕೆಲ್ ಕ್ಲಾರ್ಕ್ ಅವರು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜರನ್ನು ಒಳಗೊಂಡ ಡ್ರೀಮ್ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಮ್ಯಾಥ್ಯೂ ಹೇಡನ್ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿದ್ದರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿದ್ದಾರೆ. ಎಂ.ಎಸ್. ಧೋನಿ ಮತ್ತು ಆಡಮ್ ಗಿಲ್‌ಕ್ರಿಸ್ಟ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಶೇನ್ ವಾರ್ನ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅತ್ಯುತ್ತಮ ಬೌಲರ್‌ಗಳನ್ನು ಕ್ಲಾರ್ಕ್ ಆಯ್ಕೆ ಮಾಡಿದ್ದಾರೆ.

1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ರೋಚಕ ಘಟ್ಟ ತಲುಪಿದೆ. ಉಭಯ ತಂಡಗಳು ಇಲ್ಲಿಯವರೆಗೆ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿರುವುದರಿಂದ ಸರಣಿಯ ಉಳಿದ ಪಂದ್ಯಗಳು ಬಹಳ ಮಹತ್ವದ್ದಾಗಿವೆ. ಏತನ್ಮಧ್ಯೆ, ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರು ಭಾರತ ಮತ್ತು ಆಸ್ಟ್ರೇಲಿಯಾದ ಆಟಗಾರರನ್ನು ಒಳಗೊಂಡ ಈ ಶತಮಾನದ ಬೆಸ್ಟ್ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದಾರೆ.

2 / 6
ಮೈಕಲ್ ಕ್ಲಾರ್ಕ್ ಆಯ್ಕೆ ಮಾಡಿರುವ 11 ಆಟಗಾರರ ಬೆಸ್ಟ್ ಟೆಸ್ಟ್ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಮ್ಯಾಥ್ಯೂ ಹೇಡನ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಈ ಇಬ್ಬರೂ ಆಟಗಾರರ ಅಂಕಿಅಂಶಗಳು ಅತ್ಯುತ್ತಮವಾಗಿವೆ. ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 49.34 ಸರಾಸರಿಯಲ್ಲಿ 8586 ರನ್ ಗಳಿಸಿದ್ದರೆ, ಹೇಡನ್ 50.74 ಸರಾಸರಿಯಲ್ಲಿ 8625 ರನ್ ಗಳಿಸಿದ್ದಾರೆ.

3 / 6
ಭಾರತದ ವಿರುದ್ಧ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ರಿಕಿ ಪಾಂಟಿಂಗ್ ಕೂಡ ಒಬ್ಬರು. ಹೀಗಾಗಿ ರಿಕಿ ಪಾಂಟಿಂಗ್‌ಗೆ ಕ್ಲಾರ್ಕ್​ ಮೂರನೇ ಕ್ರಮಾಂಕ ನೀಡಿದ್ದಾರೆ. ಇದಲ್ಲದೇ ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಹೈರಾಣಾಗಿಸಿರುವ ಸಚಿನ್ ತೆಂಡೂಲ್ಕರ್​ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಮತ್ತು ವಿರಾಟ್ ಕೊಹ್ಲಿಯನ್ನು ಐದನೇ ಕ್ರಮಾಂಕದಲ್ಲಿ ಇರಿಸಿದ್ದಾರೆ.

4 / 6
ಆರನೇ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ ಅದೇ ಸಮಯದಲ್ಲಿ, ಮೈಕೆಲ್ ಕ್ಲಾರ್ಕ್ ತನ್ನ ತಂಡದಲ್ಲಿ ಎರಡೂ ದೇಶಗಳ ತಲಾ ಒಬ್ಬ ಆಟಗಾರನನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ. ಈ ಇಬ್ಬರು ವಿಕೆಟ್​ ಕೀಪರ್​ಗಳಲ್ಲಿ ಎಂಎಸ್ ಧೋನಿ ಮತ್ತು ಆಡಮ್ ಗಿಲ್​ಕ್ರಿಸ್ಟ್ ಸೇರಿದ್ದಾರೆ.

5 / 6
ಇನ್ನು ಬೌಲಿಂಗ್ ವಿಭಾಗದಲ್ಲಿ ಕ್ಲಾರ್ಕ್​ ಒಟ್ಟು 4 ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಶೇನ್ ವಾರ್ನ್ ಮಾತ್ರ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ. ಉಳಿದಂತೆ ಬೌಲಿಂಗ್​ ವಿಭಾಗದಲ್ಲಿ ರಯಾನ್ ಹ್ಯಾರಿಸ್, ಜಸ್ಪ್ರೀತ್ ಬುಮ್ರಾ ಮತ್ತು ಗ್ಲೆನ್ ಮೆಕ್‌ಗ್ರಾತ್ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ 12 ನೇ ಆಟಗಾರನಾಗಿ ಎರಡೂ ದೇಶಗಳ ತಲಾ ಒಬ್ಬ ಆಟಗಾರನನ್ನು ಆಯ್ಕೆ ಮಾಡಿದ್ದು, ಮಿಚೆಲ್ ಜಾನ್ಸನ್ ಮತ್ತು ಜಹೀರ್ ಖಾನ್ ಈ ವಿಶೇಷ ತಂಡದ ಭಾಗವಾಗಿದ್ದಾರೆ.

6 / 6
ಕ್ಲಾರ್ಕ್ ಹೆಸರಿಸಿದ ಬೆಸ್ಟ್ ಟೆಸ್ಟ್ ತಂಡ: ಮ್ಯಾಥ್ಯೂ ಹೇಡನ್, ವೀರೇಂದ್ರ ಸೆಹ್ವಾಗ್, ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಎಂಎಸ್ ಧೋನಿ/ಆಡಮ್ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ರಯಾನ್ ಹ್ಯಾರಿಸ್, ಜಸ್ಪ್ರೀತ್ ಬುಮ್ರಾ ಮತ್ತು ಗ್ಲೆನ್ ಮೆಕ್‌ಗ್ರಾತ್. 12ನೇ ಆಟಗಾರರಾಗಿ ಮಿಚೆಲ್ ಜಾನ್ಸನ್ ಮತ್ತು ಜಹೀರ್ ಖಾನ್.