Rohit Sharma: ಹೀಗೂ ಸೋಲ್ತಾರಾ? ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಪಸ್ವರ

| Updated By: ಝಾಹಿರ್ ಯೂಸುಫ್

Updated on: Jan 29, 2024 | 10:53 AM

India vs England Test: ಫೆಬ್ರವರಿ 2 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದ್ದು, ಈ ಪಂದ್ಯಕ್ಕೆ ವಿಶಾಖಪಟ್ಟಣಂನಲ್ಲಿ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

1 / 8
ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೇವಲ 28 ರನ್​ಗಳಿಂದ ಟೀಮ್ ಇಂಡಿಯಾ  ಕೈಚೆಲ್ಲಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬರಲಾಂಭಿಸಿದೆ.

2 / 8
ಏಕೆಂದರೆ ಈ ಪಂದ್ಯದ ಮೊದಲ ದಿನದಾಟದಿಂದಲೇ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತ್ತು. ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ 246 ರನ್ ಬಾರಿಸಿದರೆ, ಭಾರತ ತಂಡ 436 ರನ್ ಪೇರಿಸಿತು. ಈ ಮೂಲಕ ಟೀಮ್ ಇಂಡಿಯಾ 190 ರನ್​ಗಳ ಮುನ್ನಡೆ ಸಾಧಿಸಿತ್ತು.

3 / 8
ಇನ್ನು ದ್ವಿತೀಯ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ತಂಡವು ಕೇವಲ 163 ರನ್​ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಅಂದರೆ 27 ರನ್​ಗಳ ಹಿನ್ನಡೆ ಇರುವಾಗಲೇ ಆಂಗ್ಲರು ಐದು ವಿಕೆಟ್​ಗಳನ್ನು ಕಳೆದುಕೊಂಡಿದ್ದರು. ಆದರೆ ಆ ಬಳಿಕ ಒಲೀ ಪೋಪ್ ಮತ್ತು ಬೆನ್ ಫೋಕ್ಸ್ 6ನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟವಾಡಿದರು. ಇನ್ನು 7ನೇ ವಿಕೆಟ್​ನಲ್ಲೂ ಅರ್ಧಶತಕದ ಪಾಲುದಾರಿಕೆ ನೀಡುವಲ್ಲಿ ಪೋಪ್-ರೆಹಾನ್ ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾಗೆ 231 ರನ್​ಗಳ ಟಾರ್ಗೆಟ್ ನೀಡಿದ್ದರು.

4 / 8
ಅಂದರೆ ಇಲ್ಲಿ ಒಲೀ ಪೋಪ್ (196) ಅವರನ್ನು ಹೊರತುಪಡಿಸಿ ಉಳಿದ ನಾಲ್ವರ ವಿಕೆಟ್ ಪಡೆಯುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ವಿಫಲರಾಗಿದ್ದರು. ಇದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾ ಅವರ ಕಳಪೆ ನಾಯಕತ್ವ ಎಂಬ ಮಾತುಗಳು ಕೇಳಿ ಬರುತ್ತಿವೆ.

5 / 8
ಇಂಗ್ಲೆಂಡ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದರೂ ರೋಹಿತ್ ಶರ್ಮಾ ಫೀಲ್ಡಿಂಗ್​ನಲ್ಲಿ ಮಹತ್ವದ ಬದಲಾವಣೆ ಮಾಡಿರಲಿಲ್ಲ. ಪೋಪ್‌ ಸ್ವೀಪ್‌ ಅಥವಾ ರಿವರ್ಸ್ ಸ್ವೀಪ್‌ಗಳನ್ನು ಬಾರಿಸುತ್ತಿದ್ದರೂ ಅದಕ್ಕೆ ತಕ್ಕದಂತಹ ಪ್ರತಿತಂತ್ರವನ್ನು ರೂಪಿಸುವಲ್ಲಿ ಟೀಮ್ ಇಂಡಿಯಾ ನಾಯಕ ವಿಫಲರಾದರು. ಪರಿಣಾಮ ಪೋಪ್ ಸುಲಭವಾಗಿ ರನ್​ಗಳಿಸುತ್ತಾ ಸಾಗಿದರು.

6 / 8
ಇತ್ತ 163 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡರೂ ಕೊನೆಯ ಐದು ವಿಕೆಟ್​ಗಳೊಂದಿಗೆ ಇಂಗ್ಲೆಂಡ್ ತಂಡ 257 ರನ್ ಪೇರಿಸಿತು. ಅದು ಕೂಡ ಬೌಲರ್​ಗಳ ನೆರವಿನಿಂದ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ರೋಹಿತ್ ಶರ್ಮಾ ಅವರದ್ದು ಸಾಧಾರಣ ನಾಯಕತ್ವ, ಅದರಲ್ಲೇನು ವಿಶೇಷವಿರಲಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

7 / 8
ಇಂಗ್ಲೆಂಡ್ ತಂಡವು ಆಕ್ರಮಣಕಾರಿಯಾಗಿ ಆಡುತ್ತಿದ್ದರೂ ರೋಹಿತ್ ಶರ್ಮಾ ಕಡೆಯಿಂದ ಬೌಲರ್​ಗಳಿಗೆ ಬೇಕಾದ ಬೆಂಬಲ ದೊರೆತಿರಲಿಲ್ಲ. ಸ್ವೀಪ್ ಶಾಟ್ ಆಡುವ ಆಟಗಾರರಿಗೆ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್​ ವಿಕೆಟ್ ಸುತ್ತಲೂ ಫೀಲ್ಡಿಂಗ್ ನಿಲ್ಲಿಸಿ ರಣತಂತ್ರ ಹೆಣೆಯುತ್ತಾರೆ. ಅಂತಹ ಯಾವುದೇ ಪ್ರಯೋಗಗಳೂ ಭಾರತದ ನಾಯಕನ ಕಡೆಯಿಂದ ಕಂಡು ಬಂದಿರಲಿಲ್ಲ. ಹೀಗಾಗಿಯೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದ ಗುಣಗಳು ಸಾಧಾರಣ ಮಟ್ಟದಲ್ಲಿದೆ ಎಂದೆನಿಸುತ್ತದೆ ಎಂದು ಮೈಕಲ್ ವಾನ್ ತಿಳಿಸಿದ್ದಾರೆ.

8 / 8
ಒಟ್ಟಿನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಅವರ ಟೆಸ್ಟ್ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬರಲಾರಂಭಿಸಿದೆ. ಈ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ದ್ವಿತೀಯ ಟೆಸ್ಟ್​ ಮೂಲಕ ಹಿಟ್​ಮ್ಯಾನ್ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.