AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

186.34 … ಟಿ20 ಕ್ರಿಕೆಟ್​ನಲ್ಲಿ ಮಿಚೆಲ್ ಓವನ್ ವಿಶ್ವ ದಾಖಲೆ

Mitchell Owen Records: ಆಸ್ಟ್ರೇಲಿಯಾ, ಬಿಗ್ ಬ್ಯಾಷ್ ಲೀಗ್, ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಗಳ ಮೂಲಕ ಒಟ್ಟು 44 ಟಿ20 ಇನಿಂಗ್ಸ್ ಆಡಿರುವ ಯುವ ದಾಂಡಿಗ ಮಿಚೆಲ್ ಓವನ್ ಇದೀಗ ಹೊಸ ದಾಖಲೆ ಬರೆದಿದ್ದಾರೆ. ಅದು ಸಹ ಸ್ಫೋಟಕ ದಾಂಡಿಗ ನ್ಯೂಝಿಲೆಂಡ್​ನ ಫಿನ್ ಅಲೆನ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Jul 22, 2025 | 7:58 AM

Share
ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ (Mitchell Owen) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಜಮೈಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಓವನ್ 27 ಎಸೆತಗಳಲ್ಲಿ 6 ಸಿಕ್ಸರ್​ಗಳೊಂದಿಗೆ 50 ರನ್ ಬಾರಿಸಿ ಮಿಂಚಿದ್ದರು.

1 / 5
ಈ ಅರ್ಧಶತಕದೊಂದಿಗೆ ಮಿಚೆಲ್ ಓವನ್ ಟಿ20 ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ್ದಾರೆ. ಈ ಸಾವಿರ ರನ್ ಪೂರೈಸಿರುವುದು 186.34 ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಕನಿಷ್ಠ ಅತ್ಯಧಿಕ ಸ್ಟ್ರೈಕ್ ರೇಟ್​ನಲ್ಲಿ ಒಂದು ಸಾವಿರಕ್ಕೂ ಅಧಿಕ ರನ್​ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಮಿಚೆಲ್ ಓವನ್ ಪಾಲಾಯಿತು.

2 / 5
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ನ್ಯೂಝಿಲೆಂಡ್​ನ ಫಿನ್ ಅಲೆನ್ ಹೆಸರಿನಲ್ಲಿತ್ತು. ಅಲೆನ್ ಟಿ20 ಕ್ರಿಕೆಟ್​ನಲ್ಲಿ 159 ಇನಿಂಗ್ಸ್​ಗಳ ಮೂಲಕ 4415 ರನ್ ಕಲೆಹಾಕಿದ್ದಾರೆ. ಅದು ಸಹ 173.81 ಸ್ಟ್ರೈಕ್ ರೇಟ್​ನಲ್ಲಿ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎನಿಸಿಕೊಂಡಿದ್ದರು.

3 / 5
ಇದೀಗ ಈ ದಾಖಲೆಯನ್ನು ಮಿಚೆಲ್ ಓವನ್ ಮುರಿದಿದ್ದಾರೆ. ಮಿಚೆಲ್ ಕೇವಲ 44 ಟಿ20 ಇನಿಂಗ್ಸ್​ಗಳ ಮೂಲಕ 1010 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರು ಬ್ಯಾಟ್ ಬೀಸಿರುವುದು 186.34 ಸ್ಟ್ರೈಕ್ ರೇಟ್​ನಲ್ಲಿ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್​ನೊಂದಿಗೆ ಸಾವಿರಕ್ಕೂ ಅಧಿಕ ರನ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಓವನ್ ಅಗ್ರಸ್ಥಾನಕ್ಕೇರಿದ್ದಾರೆ.

4 / 5
ಇಲ್ಲಿ ಗಮನಿಸಬೇಕಾದ ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ಮಿಚೆಲ್ ಓವನ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ ಬಾರಿಸಿರುವ ಸಿಕ್ಸರ್​ಗಳ ಸಂಖ್ಯೆ. ಕೇವಲ 44 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 77 ಸಿಕ್ಸ್ ಸಿಡಿಸಿದ್ದಾರೆ. ಕೇವಲ 23 ವರ್ಷದ ಮಿಚೆಲ್ ಓವನ್ ಇದೇ ಅಬ್ಬರ ಮುಂದುವರೆಸಿದರೆ ಟಿ20 ಕ್ರಿಕೆಟ್​ನ ಸಿಕ್ಸರ್ ಕಿಂಗ್ ಎನಿಸುವುದರಲ್ಲಿ ಡೌಟೇ ಇಲ್ಲ.

5 / 5
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ

ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್