AUS vs ENG: W,W,W,W,W,W.. ವಿಶ್ವ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

Updated on: Dec 04, 2025 | 5:45 PM

Mitchell Starc Breaks Akram Record: ಗಬ್ಬಾ ಆಶಸ್ ಟೆಸ್ಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಪಾಕ್‌ನ ವಾಸಿಮ್ ಅಕ್ರಮ್ ಅವರ ವಿಶ್ವ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ್ದಾರೆ. 415 ಟೆಸ್ಟ್ ವಿಕೆಟ್‌ಗಳೊಂದಿಗೆ ಸ್ಟಾರ್ಕ್ ಎಡಗೈ ವೇಗಿಗಳಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ಮೊದಲ ದಿನದಾಟದಲ್ಲಿ 325/9 ರನ್ ಗಳಿಸಿದ್ದು, ಜೋ ರೂಟ್ ಅಜೇಯ ಶತಕ ಬಾರಿಸಿದ್ದಾರೆ. ಸ್ಟಾರ್ಕ್ 6 ವಿಕೆಟ್ ಪಡೆದು ಮಿಂಚಿದರು.

1 / 6
ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 325 ರನ್ ಗಳಿಸಿದೆ. ಇಂಗ್ಲೆಂಡ್ ಪರ ಜೋ ರೂಟ್ ಅಜೇಯ ಶತಕ ಬಾರಿಸಿದ್ದರೆ, ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 6 ವಿಕೆಟ್ ಪಡೆದು ಮಿಂಚಿದ್ದಾರೆ.

2 / 6
ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಮೊದಲ ಓವರ್​ನಿಂದಲೇ ಇಂಗ್ಲೆಂಡ್ ತಂಡವನ್ನು ಕಾಡಲಾರಂಭಿಸಿದ ಸ್ಟಾರ್ಕ್​ ದಿನದಾಟದಂತ್ಯಕ್ಕೆ ಬರೋಬ್ಬರಿ 6 ವಿಕೆಟ್ ಕಬಳಿಸಿ ತಂಡದ ಪರ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಸ್ಟಾರ್ಕ್​, ಪಾಕ್ ಮಾಜಿ ನಾಯಕ ವಾಸಿಮ್ ಅಕ್ರಮ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

3 / 6
ವಾಸ್ತವವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಎಡಗೈ ವೇಗಿಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಮೊದಲ ಸ್ಥಾನದಲ್ಲಿದ್ದರು. ಅಕ್ರಮ್ 104 ಪಂದ್ಯಗಳಲ್ಲಿ 23.62 ಸರಾಸರಿಯಲ್ಲಿ 414 ವಿಕೆಟ್‌ಗಳನ್ನು ಪಡೆದಿದ್ದರು. ಇದೀಗ ಮಿಚೆಲ್ ಸ್ಟಾರ್ಕ್ ಅಕ್ರಮ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಎನಿಸಿಕೊಂಡಿದ್ದಾರೆ.

4 / 6
ಮಿಚೆಲ್ ಸ್ಟಾರ್ಕ್ ತಮ್ಮ ಟೆಸ್ಟ್ ವೃತ್ತಿಜೀವನದ ಕೇವಲ 102 ನೇ ಪಂದ್ಯದಲ್ಲಿ ವಾಸಿಮ್ ಅಕ್ರಮ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಹ್ಯಾರಿ ಬ್ರೂಕ್ ಅವರನ್ನು ತಮ್ಮ 415 ನೇ ಟೆಸ್ಟ್ ವಿಕೆಟ್ ಆಗಿ ಔಟ್ ಮಾಡುವ ಮೂಲಕ ಅವರು ಅಕ್ರಮ್ ಅವರ ದಾಖಲೆಯನ್ನು ಮುರಿದರು. ಸ್ಟಾರ್ಕ್ 102 ಪಂದ್ಯಗಳಲ್ಲಿ 26.51 ಸರಾಸರಿಯಲ್ಲಿ 415 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5 / 6
ಟೆಸ್ಟ್ ಕ್ರಿಕೆಟ್‌ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಎಡಗೈ ವೇಗಿಗಳು ಸ್ಟಾರ್ಕ್ ಮತ್ತು ಅಕ್ರಮ್ ಮಾತ್ರ. ಅವರಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದವರು ಶ್ರೀಲಂಕಾದ ಚಾಮಿಂಡಾ ವಾಸ್, ಅವರು 111 ಪಂದ್ಯಗಳಲ್ಲಿ 355 ವಿಕೆಟ್‌ಗಳನ್ನು ಪಡೆದಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ 78 ಟೆಸ್ಟ್‌ಗಳಲ್ಲಿ 317 ವಿಕೆಟ್‌ಗಳನ್ನು ಪಡೆದಿದ್ದರೆ, ಭಾರತದ ಜಹೀರ್ ಖಾನ್ 92 ಟೆಸ್ಟ್‌ಗಳಲ್ಲಿ 311 ವಿಕೆಟ್‌ಗಳನ್ನು ಪಡೆದಿದ್ದಾರೆ.

6 / 6
ಗಬ್ಬಾ ಟೆಸ್ಟ್‌ನಲ್ಲಿ ವಾಸಿಮ್ ಅಕ್ರಮ್ ಅವರ ದಾಖಲೆಯನ್ನು ಮುರಿದ ಮೂಲಕ, ಮಿಚೆಲ್ ಸ್ಟಾರ್ಕ್ ಎಡಗೈ ವೇಗಿಗಳಲ್ಲಿ ನಂಬರ್ ಒನ್ ಆಗಿದ್ದು ಮಾತ್ರವಲ್ಲದೆ, ವಾರ್ನ್ ಮತ್ತು ಮೆಕ್‌ಗ್ರಾತ್ ನಂತರ ಗಬ್ಬಾದಲ್ಲಿ ಆಡಿದ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೂರನೇ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ಅವರು ನಾಥನ್ ಲಿಯಾನ್ ಅವರನ್ನು ಮೀರಿಸಿದ್ದಾರೆ.