IPL 2022: ಐಪಿಎಲ್​ಗೆ ಸ್ಟಾರ್ಕ್​ ಕಂಬ್ಯಾಕ್: ಮತ್ತೆ ಖರೀದಿಗೆ RCB ಪ್ಲ್ಯಾನ್..?

| Updated By: ಝಾಹಿರ್ ಯೂಸುಫ್

Updated on: Jan 12, 2022 | 6:44 PM

IPL 2022 Mega Auction: ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 7.17 ರ ಆರ್ಥಿಕ ದರದಲ್ಲಿ ಒಟ್ಟು 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಬ್ಯಾಟಿಂಗ್​ ಮೂಲಕ ಕೂಡ ಒಟ್ಟು 96 ರನ್‌ಗಳನ್ನು ರನ್​ ಕಲೆಹಾಕಿದ್ದಾರೆ.

1 / 6
ಟಿ20 ಕ್ರಿಕೆಟ್​ನ ಅತ್ಯಂತ ಯಶಸ್ವಿ ವೇಗಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್​ ಐಪಿಎಲ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದು ಕೇವಲ 2 ಬಾರಿ ಮಾತ್ರ. 2014 ರಲ್ಲಿ ಹರಾಜಿನಲ್ಲಿದ್ದ ಸ್ಟಾರ್ಕ್​ ಅವರನ್ನು RCB ತಂಡ ಖರೀದಿಸಿತ್ತು. ಆರ್​ಸಿಬಿ ಪರ 2 ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ಕ್ 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಸ್ಟಾರ್ಕ್ ಐಪಿಎಲ್​ನಲ್ಲಿ ಭಾಗವಹಿಸಿರಲಿಲ್ಲ. ಇದಾಗ್ಯೂ 2018 ರಲ್ಲಿ ಮಿಚೆಲ್ ಸ್ಟಾರ್ಕ್​ ಹೆಸರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿತ್ತು.

2 / 6
ನಿರೀಕ್ಷೆಯಂತೆ ಆಸ್ಟ್ರೇಲಿಯಾ ಎಡಗೈ ವೇಗಿಯ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಿತ್ತು. ಅಂತಿಮವಾಗಿ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡವು  9.40 ಕೋಟಿ ರೂ. ನೀಡಿ ಸ್ಟಾರ್ಕ್​ ಅವರನ್ನು ಖರೀದಿಸಿತ್ತು. ಆದರೆ ಗಾಯದ ಕಾರಣ ಮಿಚೆಲ್ ಸ್ಟಾರ್ಕ್​ ಟೂರ್ನಿಯಿಂದ ಹಿಂದೆ ಸರಿದಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ 6 ವರ್ಷಗಳ ಬಳಿಕ ಸ್ಟಾರ್ಕ್​ ಐಪಿಎಲ್​ಗೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

3 / 6
 ಮುಂಬರುವ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಮಾತನಾಡಿರುವ ಮಿಚೆಲ್ ಸ್ಟಾರ್, ಈ ವರ್ಷದ ಐಪಿಎಲ್​ ಅನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಕೆಲ ಸರಣಿ ಹಾಗೂ ಟೂರ್ನಿಗಳ ಕಾರಣ ನಾನು ಕಳೆದ ಆರು ವರ್ಷ ಐಪಿಎಲ್ ಆಡಿರಲಿಲ್ಲ. ಇನ್ನು ಕೊನೆಯ ಸೀಸನ್​ನಿಂದ ಹಿಂದೆ ಸರಿಯಲು ಟಿ20 ವಿಶ್ವಕಪ್ ಕಾರಣವಾಗಿತ್ತು. ಆದರೀಗ ಈ ವರ್ಷ ಕೂಡ ಟಿ20 ವಿಶ್ವಕಪ್ ಇದೆ. ಇದನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಇದಾಗ್ಯೂ ಮುಂಬರುವ ಟಿ20 ವಿಶ್ವಕಪ್​ ಅನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್​ನಲ್ಲಿ ಭಾಗವಹಿಸಬಹುದು ಎಂದು ಮಿಚೆಲ್ ಸ್ಟಾರ್ಕ್​ ತಿಳಿಸಿದ್ದಾರೆ.

4 / 6
ಇದೇ ವೇಳೆ ನಾನು ಇನ್ನೂ ಕೂಡ ಹೆಸರು ನೋಂದಣಿ ಮಾಡಿಕೊಂಡಿಲ್ಲ ಎಂದು ತಿಳಿಸಿರುವ ಸ್ಟಾರ್ಕ್​, ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಇದಾಗ್ಯೂ ಮಿಚೆಲ್ ಸ್ಟಾರ್ಕ್ ಈ ಬಾರಿ​ ಐಪಿಎಲ್​ನಿಂದ ಸರಿಯುವ ಯಾವುದೇ ಸೂಚನೆ ನೀಡಿಲ್ಲ. ಇನ್ನು ಆಸ್ಟ್ರೇಲಿಯಾ ಕಳೆದ ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಕಾರಣ ಈ ಸಲ ಸ್ಟಾರ್ಕ್​ ಟಿ20 ವಿಶ್ವಕಪ್​ಗಾಗಿ ಐಪಿಎಲ್​ನಿಂದ ಹಿಂದೆ ಸರಿಯುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಮುಂಬರುವ ಐಪಿಎಲ್ ಸೀಸನ್​ಗಾಗಿ ಮಿಚೆಲ್ ಸ್ಟಾರ್ಕ್ ಕೂಡ ಹೆಸರು ನೋಂದಾಯಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ.

5 / 6
ಇತ್ತ ಆರ್​ಸಿಬಿ ತಂಡವು ಅತ್ಯುತ್ತಮ ವಿದೇಶಿ ವೇಗಿಯ ಹುಡುಕಾಟದಲ್ಲಿದ್ದು, ಹೀಗಾಗಿ ಸ್ಟಾರ್ಕ್​ ಆಗಮನ ಬೆಂಗಳೂರು ಫ್ರಾಂಚೈಸಿಯ ಉತ್ತಮ ಆಯ್ಕೆಯಾಗಲಿದೆ. ಅದರಲ್ಲೂ ಈಗಾಗಲೇ  ಫ್ರಾಂಚೈಸಿ ಪರ ಆಡಿರುವ ಸ್ಟಾರ್ಕ್​ ಖರೀದಿಗಾಗಿ ಆರ್​ಸಿಬಿ ಕೂಡ ಕೂಡ ಹೆಚ್ಚಿನ ಆಸಕ್ತಿವಹಿಸಲಿದೆ. ಈ ಮೂಲಕ ಕಳೆದ ಕೆಲ ಸೀಸನ್​ಗಳಿಂದ ತಂಡದ ಹಿನ್ನಡೆಗೆ ಕಾರಣವಾಗಿದ್ದ ಎಡಗೈ ವೇಗಿಯ ಕೊರತೆಯನ್ನು ಆರ್​ಸಿಬಿ ನೀಗಿಸಿಕೊಳ್ಳಬಹುದು. ಹೀಗಾಗಿ ಮಿಚೆಲ್ ಸ್ಟಾರ್ಕ್​ ಐಪಿಎಲ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಆರ್​ಸಿಬಿ ಫ್ರಾಂಚೈಸಿ ಖರೀದಿಗಾಗಿ ಭರ್ಜರಿ ಪೈಪೋಟಿಯನ್ನಂತು ನಡೆಸಲಿದೆ.

6 / 6
ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 7.17 ರ ಆರ್ಥಿಕ ದರದಲ್ಲಿ ಒಟ್ಟು 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಬ್ಯಾಟಿಂಗ್​ ಮೂಲಕ ಕೂಡ ಒಟ್ಟು 96 ರನ್‌ಗಳನ್ನು ರನ್​ ಕಲೆಹಾಕಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ಪರ 48 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 7.52 ರ ಆರ್ಥಿಕ ದರದಲ್ಲಿ ಒಟ್ಟು 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಬಾರಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಸ್ಟಾರ್ಕ್​ ಅವರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದರು.

Published On - 3:41 pm, Wed, 12 January 22