ಮಿಚೆಲ್ ಸ್ಟಾರ್ಕ್​ ಮಿಂಚಿನ ದಾಳಿಗೆ ವಿಶ್ವ ದಾಖಲೆಯೇ ಬೌಲ್ಡ್!

Updated on: Aug 22, 2026 | 8:04 AM

Mitchell Starc World Record: ಟೆಸ್ಟ್ ಕ್ರಿಕೆಟ್​ನಲ್ಲಿ ಮಿಚೆಲ್ ಸ್ಟಾರ್ಕ್​ ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸುವ ಮೂಲಕ. ಈ ವಿಕೆಟ್​ಗಳೊಂದಿಗೆ ಸ್ಟಾರ್ಕ್​ ವಿಂಡೀಸ್ ವೇಗಿ ಪೆಡ್ರೊ ಕಾಲಿನ್ಸ್ ಅವರ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 

1 / 5
ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲೇ ಮಿಚೆಲ್ ಸ್ಟಾರ್ಕ್​ ಮಿಂಚಿನ ದಾಳಿ ನಡೆಸಿದ್ದಾರೆ. ಈ ದಾಳಿಯೊಂದಿಗೆ ಸ್ಟಾರ್ಕ್​ ಕೇವಲ 22 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಈ ಐದು ವಿಕೆಟ್​ಗಳಲ್ಲಿ ಮೊದಲ ವಿಕೆಟ್ ಪಡೆದಿದ್ದು ಇನಿಂಗ್ಸ್​ನ ಮೊದಲ ಎಸೆತದಲ್ಲಿ ಎಂಬುದು ವಿಶೇಷ. (PC: Mitchell Starc)

2 / 5
ಮಕೈನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಓವರ್​ ಎಸೆದ ಸ್ಟಾರ್ಕ್​ ಇನಿಂಗ್ಸ್​ನ ಮೊದಲ ಎಸೆತದಲ್ಲೇ ಶಾದ್ಮನ್ ಇಸ್ಲಾಂ (0) ವಿಕೆಟ್ ಕಬಳಿಸಿದರು. ಈ ವಿಕೆಟ್​ನೊಂದಿಗೆ 149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬೌಲರ್‌ಗೂ ಸಾಧ್ಯವಾಗದ ಅದ್ಭುತ ಸಾಧನೆಯನ್ನು ಮಾಡಿದರು. (PC: Mitchell Starc)

3 / 5
ಟೆಸ್ಟ್ ಪಂದ್ಯವೊಂದರ ತೀರಾ ಮೊದಲನೇ ಎಸೆತದಲ್ಲೇ ವಿಕೆಟ್ ಪಡೆಯುವುದು ಯಾವುದೇ ಬೌಲರ್‌ಗಾದರೂ ಅತ್ಯಂತ ಅಪರೂಪದ ಸಂಗತಿ. ಆದರೆ ಮಿಚೆಲ್ ಸ್ಟಾರ್ಕ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೋಬ್ಬರಿ 4 ಬಾರಿ ಪಂದ್ಯದ ಮೊದಲನೇ ಎಸೆತದಲ್ಲೇ ವಿಕೆಟ್ ಉರುಳಿಸಿ ಈ ಸಾಧನೆ ಮಾಡಿದ ಜಗತ್ತಿನ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. (PC: Mitchell Starc)

4 / 5
ಈ ಹಿಂದೆ ಈ ವಿಶ್ವ ದಾಖಲೆ ವೆಸ್ಟ್ ಇಂಡೀಸ್‌ನ ಪೆಡ್ರೊ ಕಾಲಿನ್ಸ್ (3 ಬಾರಿ) ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಬ್ರೇಕ್ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 4 ಬಾರಿ ಮೊದಲ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆಯನ್ನು ಬರೆದಿದ್ದಾರೆ. (PC: Mitchell Starc)

5 / 5
ಈ ದಾಖಲೆಯ ಜೊತೆಗೆ ಮತ್ತೊಂದು ಮೈಲಿಗಲ್ಲನ್ನು ಕೂಡ ಮಿಚೆಲ್ ಸ್ಟಾರ್ಕ್ ದಾಟಿದ್ದಾರೆ. ಈ ಮ್ಯಾಚ್​ನಲ್ಲಿ ಕೇವಲ 22 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ಸ್ಟಾರ್ಕ್​​, ಸೌತ್ ಆಫ್ರಿಕಾದ ದಿಗ್ಗಜ ಡೇಲ್ ಸ್ಟೇನ್ (439 ವಿಕೆಟ್) ಅವರ ದಾಖಲೆಯನ್ನು ಮುರಿದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-10 ಬೌಲರ್‌ಗಳ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. (PC: Mitchell Starc)

Published On - 8:01 am, Sat, 22 August 26

Loading...
Unable to load recommendations.
Follow Us