AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mitchell Starc: ಸ್ಟಾರ್ಕ್​ ಸ್ಪಾರ್ಕ್​: ಹೊಸ ವಿಶ್ವ ದಾಖಲೆ ಸೃಷ್ಟಿ

T20 World Cup 2024: ವಿಶ್ವಕಪ್ ಇತಿಹಾಸದಲ್ಲೇ ಮೂರಂಕಿ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿಕೊಳ್ಳಲು ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​ಗೆ ಬೇಕಿರುವುದು ಕೇವಲ ಐದು ವಿಕೆಟ್​ಗಳು ಮಾತ್ರ. ಆಸ್ಟ್ರೇಲಿಯಾ ತಂಡವು ಸೂಪರ್-8 ಹಂತದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ವಿರುದ್ಧ ಪಂದ್ಯವಾಡಲಿದ್ದು, ಈ ಮ್ಯಾಚ್​​ಗಳ ಮೂಲಕ ಸ್ಟಾರ್ಕ್​ ಕಡೆಯಿಂದ ಹೊಸ ವಿಶ್ವ ದಾಖಲೆಯನ್ನು ನಿರೀಕ್ಷಿಸಬಹುದು.

ಝಾಹಿರ್ ಯೂಸುಫ್
|

Updated on:Jun 22, 2024 | 11:09 AM

Share
T20 World Cup 2024: ಟಿ20 ವಿಶ್ವಕಪ್​ನ 44ನೇ ಪಂದ್ಯದ ಮೂಲಕ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಸ್ಟಾರ್ಕ್​ ಕೇವಲ 21 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು.

1 / 5
ಈ ಒಂದು ವಿಕೆಟ್​ನೊಂದಿಗೆ ಐಸಿಸಿ ವಿಶ್ವಕಪ್​ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆ ಮಿಚೆಲ್ ಸ್ಟಾರ್ಕ್​ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು.

2 / 5
ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಟಿ20+ಏಕದಿನ ವಿಶ್ವಕಪ್​ಗಳಲ್ಲಿ 59 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 94 ವಿಕೆಟ್​ ಕಬಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

3 / 5
ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಸ್ಟಾರ್ಕ್​ ಯಶಸ್ವಿಯಾಗಿದ್ದಾರೆ. ಟಿ20+ಏಕದಿನ ವಿಶ್ವಕಪ್​ಗಳಲ್ಲಿ ಒಟ್ಟು 52 ಪಂದ್ಯಗಳನ್ನಾಡಿರುವ ಮಿಚೆಲ್ ಸ್ಟಾರ್ಕ್​ ಒಟ್ಟು 95 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

4 / 5
ಇನ್ನು ವಿಶ್ವಕಪ್​ನಲ್ಲಿ 100 ವಿಕೆಟ್​ಗಳ ಸಾಧನೆ ಮಾಡಲು ಮಿಚೆಲ್ ಸ್ಟಾರ್ಕ್​ಗೆ ಬೇಕಿರುವುದು ಕೇವಲ 5 ವಿಕೆಟ್​ಗಳು ಮಾತ್ರ. ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್​ನ ಸೂಪರ್-8 ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ವಿರುದ್ಧ ಆಡಬೇಕಿದ್ದು, ಈ ಪಂದ್ಯದ ಮೂಲಕ ಮಿಚೆಲ್ ಸ್ಟಾರ್ಕ್ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

5 / 5

Published On - 11:02 am, Sat, 22 June 24

ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ

ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ

ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ

ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ

50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ

ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ

ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ

Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ