ನಿವೃತ್ತಿಯ ಸುಳಿವು ನೀಡಿದ ಐಪಿಎಲ್ನ ಅತ್ಯಂತ ದುಬಾರಿ ಪ್ಲೇಯರ್ ಮಿಚೆಲ್ ಸ್ಟಾರ್ಕ್..!
Mitchell Starc: ಒಂದೆಡೆ ಕೆಕೆಆರ್ ತಂಡದ ಆಟಗಾರರು ಟ್ರೋಫಿ ಗೆಲುವಿನ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ತಂಡದ ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ನಿವೃತ್ತಿಯ ಸುಳಿವು ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದು ಕೆಕೆಆರ್ ತಂಡಕ್ಕೆ ಮಾತ್ರವಲ್ಲದೆ, ಅವರ ತವರು ತಂಡವಾದ ಆಸ್ಟ್ರೇಲಿಯಾಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
1 / 6
ಐಪಿಎಲ್ 2024 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಗೌತಮ್ ಗಂಭೀರ್ ನೇತೃತ್ವದಲ್ಲಿ ಕೆಕೆಆರ್‌ಗೆ ಇದು ಮೂರನೇ ಟ್ರೋಫಿಯಾಗಿದೆ. ಕೋಲ್ಕತ್ತಾ ಈ ಹಿಂದೆ ಗೌತಮ್ ಗಂಭೀರ್ ನಾಯಕತ್ವದಲ್ಲಿ ಐಪಿಎಲ್ 2012 ಮತ್ತು ಐಪಿಎಲ್ 2014 ರಲ್ಲಿ ಟ್ರೋಫಿ ಗೆದ್ದಿತ್ತು.
2 / 6
ಒಂದೆಡೆ ಕೆಕೆಆರ್ ತಂಡದ ಆಟಗಾರರು ಟ್ರೋಫಿ ಗೆಲುವಿನ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ತಂಡದ ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ನಿವೃತ್ತಿಯ ಸುಳಿವು ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದು ಕೆಕೆಆರ್ ತಂಡಕ್ಕೆ ಮಾತ್ರವಲ್ಲದೆ, ಅವರ ತವರು ತಂಡವಾದ ಆಸ್ಟ್ರೇಲಿಯಾಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
3 / 6
ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಚಾಂಪಿಯನ್ ಆಗುವಲ್ಲಿ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದೊಡ್ಡ ಕೊಡುಗೆ ನೀಡಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ತಮ್ಮ ಅನುಭವವನ್ನು ಧಾರೆ ಎರೆದಿದ್ದ ಸ್ಟಾರ್ಕ್ 3 ಓವರ್‌ಗಳಲ್ಲಿ ಕೇವಲ 14 ರನ್‌ಗಳಿಗೆ 2 ವಿಕೆಟ್ ಪಡೆದಿದ್ದರು.
4 / 6
ಕೆಕೆಆರ್ ತಂಡ ಚಾಂಪಿಯನ್ ಆದ ನಂತರ ಮಾತನಾಡಿದ ಮಿಚೆಲ್ ಸ್ಟಾರ್ಕ್, ‘ನಾನು ನನ್ನ ವೃತ್ತಿಜೀವನದ ಅಂತ್ಯದ ಸಮೀಪದಲ್ಲಿದ್ದೇನೆ. ನಾನು ಶೀಘ್ರದಲ್ಲೇ ಒಂದು ಸ್ವರೂಪದಿಂದ ನಿವೃತ್ತಿ ಹೊಂದಬಹುದು. ಇನ್ನು ಐಪಿಎಲ್ ಆಡುವುದನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ ಎಂದರು.
5 / 6
ಮುಂದುವರೆದು ಮಾತನಾಡಿದ ಅವರು, ‘ಕೋಲ್ಕತ್ತಾ ಮತ್ತೆ ನನ್ನನ್ನು ತಂಡದಲ್ಲಿ ಉಳಿಸಿಕೊಂಡರೆ, ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಮತ್ತೆ ಕೋಲ್ಕತ್ತಾ ಪರ ಆಡಲು ಬಯಸುತ್ತೇನೆ. ಕೆಕೆಆರ್ ಜೊತೆ ಆಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.
6 / 6
ಈ ಐಪಿಎಲ್ನಲ್ಲಿ ಸ್ಟಾರ್ಕ್ ಒಟ್ಟು 14 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 26.12 ರ ಸರಾಸರಿಯಲ್ಲಿ 17 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ 33 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ.
Published On - 4:12 pm, Mon, 27 May 24