MLC 2023: ಹೊಸ ಲೀಗ್ಗೆ ಲಾ ನೈಟ್ ರೈಡರ್ಸ್ ತಂಡ ಪ್ರಕಟ
TV9 Web | Updated By: ಝಾಹಿರ್ ಯೂಸುಫ್
Updated on:
Jun 14, 2023 | 4:04 PM
MLC 2023: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಜುಲೈ 13 ರಿಂದ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿರುವುದು ವಿಶೇಷ.
1 / 7
MLC 2023: ಅಮೆರಿಕದಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕತ್ವದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವನ್ನು ಪ್ರಕಟಿಸಲಾಗಿದೆ.
2 / 7
16 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ 4 ಯುಎಸ್‌ಎ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ತಂಡದಲ್ಲಿ 7 ಸ್ಟಾರ್ ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ.
3 / 7
ವಿದೇಶಿ ಆಟಗಾರರ ಪಟ್ಟಿಯಲ್ಲಿ ಲಾ ನೈಟ್ ರೈಡರ್ಸ್ ಆಯ್ಕೆ ಮಾಡಿರುವುದು ಗಪ್ಟಿಲ್, ರಸೆಲ್, ಜೇಸನ್ ರಾಯ್, ನರೈನ್ನಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಎಂಬುದು ವಿಶೇಷ.
4 / 7
ಇನ್ನು ಭಾರತೀಯ ಮೂಲದ ಅಮೆರಿಕನ್ ಆಟಗಾರರಾದ ಉನ್ಮುಕ್ತ್ ಚಂದ್ ಹಾಗೂ ಜಸ್ಕರನ್ ಮಲ್ಹೋತ್ರಾ ಕೂಡ ಲಾ ನೈಟ್ ರೈಡರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ಈ ಕೆಳಗಿನಂತಿದೆ...
5 / 7
LAKR ತಂಡ ಹೀಗಿದೆ: ಉನ್ಮುಕ್ತ್ ಚಂದ್ (ಯುಎಸ್‌ಎ), ಅಲಿ ಖಾನ್ (ಯುಎಸ್‌ಎ), ಅಲಿ ಶೇಖ್ (ಯುಎಸ್‌ಎ), ಭಾಸ್ಕರ್ ಯಡ್ರಾಮ್ (ವೆಸ್ಟ್ ಇಂಡೀಸ್), ಕಾರ್ನೆ ಡ್ರೈ (ದಕ್ಷಿಣ ಆಫ್ರಿಕಾ), ನಿತೀಶ್ ಕುಮಾರ್ (ಕೆನಡಾ), ಸೈಫ್ ಬದರ್ (ಪಾಕಿಸ್ತಾನ) ಶಾಡ್ಲಿ ವ್ಯಾನ್ ಸ್ಚಾಕ್‌ವಿಕ್ (ದಕ್ಷಿಣ ಆಫ್ರಿಕಾ), ಜಸ್ಕರನ್ ಮಲ್ಹೋತ್ರಾ (ಯುಎಸ್‌ಎ), ಸುನಿಲ್ ನರೈನ್ (ವೆಸ್ಟ್ ಇಂಡೀಸ್), ಆ್ಯಂಡ್ರೆ ರಸೆಲ್ (ವೆಸ್ಟ್ ಇಂಡೀಸ್), ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಜೇಸನ್ ರಾಯ್ (ಇಂಗ್ಲೆಂಡ್), ಲಾಕಿ ಫರ್ಗುಸನ್ (ನ್ಯೂಜಿಲೆಂಡ್), ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್), ರಿಲೀ ರೌಸ್ಸೊ (ಸೌತ್ ಆಫ್ರಿಕಾ).
6 / 7
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಜುಲೈ 13 ರಿಂದ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿರುವುದು ವಿಶೇಷ.
7 / 7
ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ (ಟೆಕ್ಸಾಸ್ ಸೂಪರ್ ಕಿಂಗ್ಸ್), ಮುಂಬೈ ಇಂಡಿಯನ್ಸ್ (MI ನ್ಯೂಯಾರ್ಕ್), ಕೋಲ್ಕತ್ತಾ ನೈಟ್ ರೈಡರ್ಸ್ (ಲಾಸ್ ಏಂಜಲೀಸ್ ನೈಟ್ ರೈಡರ್ಸ್), ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಸಿಯಾಟಲ್ ಓರ್ಕಾಸ್) ಫ್ರಾಂಚೈಸಿಗಳ 4 ತಂಡಗಳು ಹೊಸ ಲೀಗ್ನಲ್ಲಿ ಕಣಕ್ಕಿಳಿಯಲಿದೆ.