Updated on:Jun 14, 2023 | 4:54 PM
ICC Test Cricket Rankings: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮೂವರು ಆಟಗಾರರು ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿರುವುದು ವಿಶೇಷ.
ಇನ್ನು ಕಳೆದ ಬಾರಿ ಅಗ್ರ ಮೂರರಲ್ಲಿ ಕಾಣಿಸಿಕೊಂಡಿದ್ದ ಮಾರ್ನಸ್ ಲಾಬುಶೇನ್ 2 ಸ್ಥಾನ ಕೆಳಗಿಳಿದರೆ, ಟ್ರಾವಿಸ್ ಹೆಡ್ ಒಂದು ಸ್ಥಾನ ಹಾಗೂ ಸ್ಟೀವ್ ಸ್ಮಿತ್ 4 ಸ್ಥಾನ ಕುಸಿತ ಕಂಡಿದ್ದಾರೆ. ಅದರಂತೆ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ...
ವಿಶೇಷ ಎಂದರೆ ಐಸಿಸಿ ಟೆಸ್ಟ್ ಶ್ರೇಯಾಂಕ ಇತಿಹಾಸದಲ್ಲೇ ಅಗ್ರ ಮೂರು ಸ್ಥಾನಗಳನ್ನು ಒಂದೇ ದೇಶದ ಆಟಗಾರರು ಅಲಂಕರಿಸುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ದಿಗ್ಗಜರು ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-3 ನಲ್ಲಿ ಕಾಣಿಸಿಕೊಂಡು ಮಿಂಚಿದ್ದರು.
1984 ರಲ್ಲಿ ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್ (810), ಕ್ಲೈವ್ ಲಾಯ್ಡ್ (787), ಮತ್ತು ಲ್ಯಾರಿ ಗೋಮ್ಸ್ (773) ಅವರು ಕೊನೆಯ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಮೂರು ಸ್ಥಾನಗಳನ್ನು ಅಂಕರಿಸಿದ್ದರು. ಇದೀಗ 2 ದಶಕಗಳ ಬಳಿಕ ಆಸ್ಟ್ರೇಲಿಯಾದ ಮೂವರು ಆಟಗಾರರು ಟಾಪ್-3 ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ.
5- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 826 ಪಾಯಿಂಟ್ಸ್
3- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 842 ಪಾಯಿಂಟ್ಸ್
6- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 818 ಪಾಯಿಂಟ್ಸ್
1- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 883 ಪಾಯಿಂಟ್ಸ್
4- ಬಾಬರ್ ಆಝಂ (ಪಾಕಿಸ್ತಾನ್)- 829 ಪಾಯಿಂಟ್ಸ್
2- ಜೋ ರೂಟ್ (ಇಂಗ್ಲೆಂಡ್)- 859 ಪಾಯಿಂಟ್ಸ್
8- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 792 ಪಾಯಿಂಟ್ಸ್
9- ದಿಮುತ್ ಕರುಣರತ್ನೆ (ಶ್ರೀಲಂಕಾ)- 759 ಪಾಯಿಂಟ್ಸ್
7- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 796 ಪಾಯಿಂಟ್ಸ್
10- ರಿಷಭ್ ಪಂತ್ (ಭಾರತ)- 758 ಪಾಯಿಂಟ್ಸ್
Published On - 4:48 pm, Wed, 14 June 23