PAK vs NZ: ಪವರ್‌ಪ್ಲೇ ಮುಗಿದ ತಕ್ಷಣವೇ ಗೆಲುವು ನಿರ್ಧಾರವಾಯಿತು! ಪಾಕ್ ಓಪನರ್ ರಿಜ್ವಾನ್

| Updated By: ಪೃಥ್ವಿಶಂಕರ

Updated on: Nov 10, 2022 | 5:36 PM

T20 World Cup 2022: ಅದೃಷ್ಟವಶಾತ್ ಸೆಮಿಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ್ದೇನೆ. ಬಾಬರ್ ಮತ್ತು ನಾನು ಈ ಮೊದಲು ಕಷ್ಟಪಡುತ್ತಿದ್ದೆವು. ಆದರೆ ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ ಮತ್ತು ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.

1 / 5
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಸರಿಯಾದ ಸಮಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಇವರಿಬ್ಬರೂ ಸೇರಿ ಪಾಕಿಸ್ತಾನ ತಂಡವನ್ನು ಟಿ20 ವಿಶ್ವಕಪ್‌ನ ಫೈನಲ್‌ಗೆ ಕೊಂಡೊಯ್ಯವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದರೊಂದಿಗೆ 3ನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿದೆ. ಈ ದೊಡ್ಡ ಪಂದ್ಯದಲ್ಲಿ ಬಾಬರ್ ಮತ್ತು ರಿಜ್ವಾನ್ ಇಬ್ಬರೂ ಅರ್ಧಶತಕ ಗಳಿಸಿದ್ದು ಪಾಕ್ ಪಡೆಗೆ ಮತ್ತಷ್ಟು ಬಲ ತಂದಿದೆ.

2 / 5
ಸೆಮಿಫೈನಲ್‌ಗೂ ಮುನ್ನ ಬಾಬರ್ ಮತ್ತು ರಿಜ್ವಾನ್ ಇಬ್ಬರೂ ಕಳಪೆ ಫಾರ್ಮ್​ನೊಂದಿಗೆ ಹೋರಾಡುತ್ತಿದ್ದರು. ಇದಕ್ಕೂ ಮುನ್ನ ಕಳೆದ 5 ಪಂದ್ಯಗಳಲ್ಲಿ ಪಾಕಿಸ್ತಾನದ ನಾಯಕನಿಗೆ 50 ರನ್ ಪೂರೈಸಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ, ರಿಜ್ವಾನ್ ಈ ಹಿಂದೆ ನೆದರ್ಲೆಂಡ್ಸ್ ವಿರುದ್ಧ ಮಾತ್ರ ಉತ್ತಮ ಬ್ಯಾಟಿಂಗ್ ಮಾಡಿದ್ದರು.

3 / 5
ತನ್ನ ಆರನೇ ಪಂದ್ಯದಲ್ಲಿ ಬೌಲರ್‌ಗಳನ್ನು ಬೇಟೆಯಾಡಿದ ರಿಜ್ವಾನ್ 43 ಎಸೆತಗಳಲ್ಲಿ 57 ರನ್‌ಗಳ ಅಜೇಯ ನಾಕ್  ಆಡಿದರು. ಈ ವಿಶ್ವಕಪ್‌ನಲ್ಲಿ ಇದು ಅವರ ಮೊದಲ ಅರ್ಧಶತಕವಾಗಿದ್ದು, ಬಲಿಷ್ಠ ಇನ್ನಿಂಗ್ಸ್‌ನ ಆದಾರದ ಮೇಲೆ ರಿಜ್ವಾನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿದೆ.

4 / 5
ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಜ್ವಾನ್, ಅದೃಷ್ಟವಶಾತ್ ಸೆಮಿಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ್ದೇನೆ. ಬಾಬರ್ ಮತ್ತು ನಾನು ಈ ಮೊದಲು ಕಷ್ಟಪಡುತ್ತಿದ್ದೆವು. ಆದರೆ ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ ಮತ್ತು ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.

5 / 5
ನಾವು ಅಖಾಡಕ್ಕಿಳಿಯುವ ಮುನ್ನವೇ, ಆರಂಭಿಕ ಓವರ್​ಗಳಲ್ಲಿ ಅಬ್ಬರಿಸಬೇಕು ಎಂದು ನಿರ್ಧರಿಸಿದ್ದೇವು. ನಾವು ಪವರ್‌ಪ್ಲೇ ಮುಗಿಸಿದಾಗ, ಪಿಚ್ ಕಷ್ಟಕರವಾದ ಕಾರಣ ನಮ್ಮಲ್ಲಿ ಒಬ್ಬರು ಹೆಚ್ಚು ಸಮಯ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದು ನಮಗೆ ತಿಳಿದಿತ್ತು. ಟೂರ್ನಿಯಲ್ಲಿ ನಮಗೆ ಉತ್ತಮ ಆರಂಭ ಸಿಗಲಿಲ್ಲ, ಆದರೆ ಎಲ್ಲರೂ ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಈಗ ಅದನ್ನು ನಿಜ ಮಾಡಿದ್ದೇವೆ ಎಂದು ರಿಜ್ವಾನ್ ಹೇಳಿಕೊಂಡಿದ್ದಾರೆ.

Published On - 7:10 pm, Wed, 9 November 22