ಟೀಮ್ ಇಂಡಿಯಾಗೆ ಶುಭ ಸೂಚನೆ: ಮೊಹಮ್ಮದ್ ಶಮಿಗೆ ಗ್ರೀನ್ ಸಿಗ್ನಲ್

|

Updated on: Jan 09, 2025 | 8:23 AM

Mohammed Shami: ಮೊಹಮ್ಮದ್ ಶಮಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರೂ, ಅವರು ಎರಡು ಮೂರು ಬಾರಿ ಫಿಟ್​​ನೆಸ್ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರ ಮತ್ತೆ ಎನ್​ಸಿಎ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಇದು ಟೀಮ್ ಇಂಡಿಯಾ ಪಾಲಿಗೆ ಶುಭ ಸೂಚನೆ.

1 / 5
ಕಳೆದ ಒಂದೂವರೆ ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ಕಂಬ್ಯಾಕ್ ಕನ್ಫರ್ಮ್ ಆಗಿದೆ. ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಕಡೆಯಿಂದ ಗ್ರೀನ್​ ಸಿಗ್ನಲ್ ಸಿಕ್ಕಿದ್ದು, ಹೀಗಾಗಿ ಮುಂಬರುವ ಸರಣಿಗೆ ಅವರನ್ನು ಆಯ್ಕೆಗೆ ಪರಿಗಣಿಸಲಿದ್ದಾರೆ.

2 / 5
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಮೊಹಮ್ಮದ್ ಶಮಿ ಅವರನ್ನು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ತಂಡದ ಲಿಸ್ಟ್​ನಲ್ಲೂ ಶಮಿ ಅವರ ಹೆಸರಿದೆ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಏಕದಿನ ಪಂದ್ಯಗಳ ಮೂಲಕ ಮೊಹಮ್ಮದ್ ಶಮಿ ಪುನರಾಗಮನ ಮಾಡುವುದು ಖಚಿತ.

3 / 5
ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಮೊಹಮ್ಮದ್ ಶಮಿ ಬಂಗಾಳ ಪರ ವಿಜಯ್ ಹಝಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗುರುವಾರ ನಡೆಯಲಿರುವ ಹರ್ಯಾಣ ವಿರುದ್ಧದ ಪ್ರಿ ಕ್ವಾರ್ಟರ್ ಫೈನಲ್ ಶಮಿ ಬಂಗಾಳ ಪರ ಕಣಕ್ಕಿಳಿಯಲಿದ್ದು, ಇದೇ ವೇಳೆ NCAಯ ಫಿಸಿಯೋ ಅಥವಾ ತರಬೇತುದಾರ ಅವರ ಜೊತೆಯಿರಲಿದ್ದಾರೆ ಎಂದು ಕ್ರಿಕ್​ಬಝ್ ವರದಿ ತಿಳಿಸಿದೆ. ಈ ಮೂಲಕ ಶಮಿ ಅವರ ಫಿಟ್​ನೆಸ್ ಮೇಲೆ ನಿಗಾಯಿಡುವಂತೆ ಬಿಸಿಸಿಐ ಸೂಚಿಸಿದೆ.

4 / 5
ವಿಜಯ ಹಝಾರೆ ಟೂರ್ನಿಯ ಪಂದ್ಯಗಳಲ್ಲಿ ಮೊಹಮ್ಮದ್ ಶಮಿ 10 ಓವರ್​​ಗಳನ್ನು ಎಸೆಯಲು ಸಫಲರಾದರೆ, ಫೆಬ್ರವರಿ 6 ರಿಂದ ಶುರುವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಅವರಿಗೆ ಸ್ಥಾನ ಸಿಗಲಿದೆ.

5 / 5
ಇತ್ತ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮೊಹಮ್ಮದ್ ಶಮಿ ಅವರ ಪುನರಾಗಮನ ಟೀಮ್ ಇಂಡಿಯಾ ಪಾಲಿಗೆ ಶುಭಸೂಚನೆ. ಏಕೆಂದರೆ 2023ರ ಏಕದಿನ ವಿಶ್ವಕಪ್​ನಲ್ಲಿ ಕೇವಲ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಶಮಿ ಕರಾರುವಾಕ್ ದಾಳಿ ಸಂಘಟಿಸಿ ಒಟ್ಟು 24 ವಿಕೆಟ್ ಕಬಳಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ ಫೈನಲ್​ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮೊಹಮ್ಮದ್ ಶಮಿ ಅವರ ಕಂಬ್ಯಾಕ್ ಸುದ್ದಿಯು ಭಾರತ ತಂಡದ ಚಾಂಪಿಯನ್ಸ್ ಟ್ರೋಫಿಯ ಕನಸನ್ನು ದುಪ್ಪಟ್ಟು ಮಾಡಿದೆ ಎನ್ನಬಹುದು.