Mohammed Shami: ಕೊರೊನಾ ಗೆದ್ದ ಮೊಹಮ್ಮದ್ ಶಮಿ; ಟಿ20 ವಿಶ್ವಕಪ್‌ಗೆ ಆಯ್ಕೆ..?
TV9 Web | Updated By: ಪೃಥ್ವಿಶಂಕರ
Updated on:
Sep 28, 2022 | 6:02 PM
Mohammed Shami: ಮೊಹಮ್ಮದ್ ಶಮಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೊರೊನಾ ವರದಿಯನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶಮಿ ಕೊರೊನಾದಿಂದ ಗುಣಮುಖರಾಗಿರುವುದು ಖಚಿತವಾಗಿದೆ.
1 / 5
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 28 ಬುಧವಾರದಿಂದ ಆರಂಭವಾಗಲಿದೆ. ಈ ಸರಣಿಗೆ ಟೀಂ ಇಂಡಿಯಾದ ಕೆಲವು ಪ್ರಮುಖ ಆಟಗಾರರು ಗೈರಾಗಲಿದ್ದು, ಅವರಲ್ಲಿ ಒಬ್ಬರು ವೇಗದ ಬೌಲರ್ ಮೊಹಮ್ಮದ್ ಶಮಿ. ಕೊರೊನಾ ವೈರಸ್ ಸೋಂಕಿನ ಹಿಡಿತಕ್ಕೆ ಒಳಗಾದ ಶಮಿ ಇದೀಗ ತಮ್ಮ ಸ್ಥಿತಿಯ ಬಗ್ಗೆ ಅಪ್‌ಡೇಟ್ ನೀಡಿದ್ದು, ಇದು ಭಾರತೀಯ ಅಭಿಮಾನಿಗಳಿಗೆ ಸ್ವಲ್ಪ ಸಮಾದಾನ ತಂದಿದೆ.
2 / 5
ಮೊಹಮ್ಮದ್ ಶಮಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೊರೊನಾ ವರದಿಯನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶಮಿ ಕೊರೊನಾದಿಂದ ಗುಣಮುಖರಾಗಿರುವುದು ಖಚಿತವಾಗಿದೆ.
3 / 5
ಒಂದೂವರೆ ವಾರದ ಹಿಂದೆ ಶಮಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಬೇಕಿದ್ದ ಶಮಿ ಸೋಂಕಿನಿಂದ ಸರಣಿಗೆ ಗೈರಾಗಬೇಕಾಯಿತು.
4 / 5
ಶಮಿ ಸೋಂಕಿನಿಂದ ಚೇತರಿಸಿಕೊಂಡಿರಬಹುದು, ಆದರೆ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದೇ ಕಾರಣಕ್ಕೆ ಬಿಸಿಸಿಐ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಅವರ ಸ್ಥಾನದಲ್ಲಿ ಉಮೇಶ್ ಯಾದವ್ ಅವರನ್ನು ಆಯ್ಕಮಾಡಿದೆ.
5 / 5
ಟೀಮ್ ಮ್ಯಾನೇಜ್‌ಮೆಂಟ್ ಮುಂದೆ ಬುಮ್ರಾಗೆ ಈ ಎರಡು ದೊಡ್ಡ ಆಯ್ಕೆಗಳಿವೆ. ಇವರಿಬ್ಬರೂ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡದ ಮೀಸಲು ಸದಸ್ಯರೂ ಆಗಿದ್ದಾರೆ. ಆದರೆ, ಈ ಇಬ್ಬರಲ್ಲಿ ಒಬ್ಬರು ಮಾತ್ರ ಬುಮ್ರಾ ಅವರ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಶಮಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಇದಕ್ಕೆ ಪ್ರಮುಖ ಕಾರಣ ಬುಮ್ರಾ ಅವರಂತೆ ಶಮಿ ಕೂಡ ಸಾಕಷ್ಟು ಅನುಭವ ಹೊಂದಿದ್ದಾರೆ. ಅಲ್ಲದೆ ತಂಡದ ಬೌಲಿಂಗ್ ಲೈನ್ ಅಪ್ ನೋಡಿದರೆ ಅಲ್ಲಿಯೂ ಶಮಿ ಅನುಭವವೇ ಬೇಕಾಗಿದೆ.
Published On - 6:02 pm, Wed, 28 September 22