IPL 2023: ಈ ಐಪಿಎಲ್​​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದಿರುವ ಬೌಲರ್ ಯಾರು ಗೊತ್ತಾ?

|

Updated on: May 04, 2023 | 3:32 PM

IPL 2023: ಈ ಐಪಿಎಲ್​​ನ ವಿಶೇಷತೆಯೆಂದರೆ ಬೌಲರ್ ಹಾಗೂ ಬ್ಯಾಟರ್​​ ಇಬ್ಬರಿಂದಲೂ ಸಮಬಲದ ಹೋರಾಟ ಕಂಡುಬರುತ್ತಿದೆ. ಅದರಲ್ಲೂ ಭಾರತೀಯ ಬೌಲರ್​​ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ.

1 / 8
ಐಪಿಎಲ್​​ನ ಅರ್ಧದಷ್ಟು ಪಯಣ ಈಗಾಗಲೇ ಮುಗಿದಿದ್ದು ಇನ್ನುಳಿದ ಭಾಗದ ಪಂದ್ಯಗಳು ಕೂಡ ಭರದಿಂದ ಸಾಗುತ್ತಿವೆ. ಈ ಐಪಿಎಲ್​​ನ ವಿಶೇಷತೆಯೆಂದರೆ ಬೌಲರ್ ಹಾಗೂ ಬ್ಯಾಟರ್​​ ಇಬ್ಬರಿಂದಲೂ ಸಮಬಲದ ಹೋರಾಟ ಕಂಡುಬರುತ್ತಿದೆ. ಅದರಲ್ಲೂ ಭಾರತೀಯ ಬೌಲರ್​​ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ.

2 / 8
ಇಂತಹ ಹಲವು ದಾಖಲೆಗಳಲ್ಲಿ ಮುಗಿದಿರುವ ಅರ್ಧದಷ್ಟು ಪ್ರಯಾಣದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಬೌಲ್ ಮಾಡಿದ ದಾಖಲೆಯೂ ಸೇರಿದೆ. ಈ ದಾಖಲೆಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

3 / 8
ಶಮಿ ಇದುವರೆಗಿನ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಇದಲ್ಲದೆ ಈ ಐಪಿಎಲ್​ನಲ್ಲಿ ಅತಿ ಹೆಚ್ಚಿನ ಡಾಟ್ ಬಾಲ್‌ ಮಾಡಿದ ದಾಖಲೆಯಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಹಿಂದಿಕ್ಕಿದ್ದಾರೆ. ಮೊಹಮ್ಮದ್ ಶಮಿ ಇದುವರೆಗೆ 119 ಡಾಟ್ ಬಾಲ್ ಎಸೆದಿದ್ದು, ಸಿರಾಜ್ 112 ಡಾಟ್ ಬಾಲ್ ಎಸೆದಿದ್ದಾರೆ.

4 / 8
ಶಮಿ ಈ ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಒಟ್ಟು 35 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಅದರಲ್ಲಿ ಅವರು 119 ಡಾಟ್ ಬಾಲ್ ಎಸೆದು ಒಟ್ಟು 17 ವಿಕೆಟ್ ಪಡೆದಿದ್ದಾರೆ.

5 / 8
ಏತನ್ಮಧ್ಯೆ ಆರ್‌ಸಿಬಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕೂಡ ಟೂರ್ನಿಯಲ್ಲಿ 9 ಪಂದ್ಯಗಳನ್ನು ಆಡಿ, 35 ಓವರ್ ಬೌಲ್ ಮಾಡಿದ್ದಾರೆ. ಇದರಲ್ಲಿ ಅವರು 112 ಡಾಟ್ ಬಾಲ್‌ಗಳನ್ನು ಎಸೆದಿದ್ದು, 15 ವಿಕೆಟ್ ಪಡೆದಿದ್ದಾರೆ.

6 / 8
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ಆಡಿರುವ 10 ಪಂದ್ಯಗಳಲ್ಲಿ 34.2 ಓವರ್‌ ಬೌಲ್ ಮಾಡಿ 81 ಡಾಟ್ ಬಾಲ್‌ಗಳೊಂದಿಗೆ 17 ವಿಕೆಟ್ ಉರುಳಿಸಿದ್ದಾರೆ.

7 / 8
ಪಂಜಾಬ್ ವೇಗಿ ಅರ್ಷದೀಪ್ ಸಿಂಗ್, ಆಡಿರುವ 10 ಪಂದ್ಯಗಳಲ್ಲಿ 37 ಓವರ್‌ ಬೌಲ್ ಮಾಡಿ 80 ಡಾಟ್ ಬಾಲ್‌ಗಳ ಜೊತೆಗೆ 16 ವಿಕೆಟ್ ಉರುಳಿಸಿದ್ದಾರೆ.

8 / 8
ದೆಹಲಿ ಕ್ಯಾಪಿಟಲ್ಸ್ ತಂಡದ ವೇಗಿ ಎನ್ರಿಚ್ ನೋಕಿಯಾ ಆಡಿರುವ 8 ಪಂದ್ಯಗಳಲ್ಲಿ 32 ಓವರ್‌ ಬೌಲ್ ಮಾಡಿದ್ದು ಇದರಲ್ಲಿ, 77 ಡಾಟ್ ಬಾಲ್‌ಗಳೊಂದಿಗೆ 7 ವಿಕೆಟ್ ಉರುಳಿಸಿದ್ದಾರೆ.