
IPL ನಲ್ಲಿ ಬ್ಯಾಟ್ಸ್ಮನ್ಗಳದ್ದೇ ಪರಾಕ್ರಮ ಎಂಬುದು ಗೊತ್ತಿದೆ. ಇದಾಗ್ಯೂ ಕೆಲ ಬೌಲರ್ಗಳು ಅತ್ಯಾದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಐಪಿಎಲ್ನಲ್ಲಿ ಡಾಟ್ ಬಾಲ್ (ಯಾವುದೇ ರನ್ ನೀಡದಿರುವುದು) ಮಾಡುವುದು ಬೌಲರ್ಗಳಿಗೆ ದೊಡ್ಡ ಸವಾಲು.

ಆದರೆ ಕಳೆದ 14 ಸೀಸನ್ ಐಪಿಎಲ್ನಲ್ಲಿ 9 ಬೌಲರ್ಗಳು ಐಪಿಎಲ್ನಲ್ಲಿ ಸಾವಿರಕ್ಕೂ ಅಧಿಕ ಡಾಟ್ ಬಾಲ್ ಎಸೆದು ಮಿಂಚಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ಗಳು ಯಾರೆಲ್ಲಾ ನೋಡೋಣ...

10- ರವೀಂದ್ರ ಜಡೇಜಾ- 987 ಡಾಟ್ ಬಾಲ್

9- ಡೇಲ್ ಸ್ಟೈನ್- 1,022 ಡಾಟ್ ಬಾಲ್

8- ಪ್ರವೀಣ್ ಕುಮಾರ್- 1,076 ಡಾಟ್ ಬಾಲ್

7- ಪಿಯುಷ್ ಚಾವ್ಲಾ- 1,151 ಡಾಟ್ ಬಾಲ್

6- ಅಮಿತ್ ಮಿಶ್ರಾ- 1,154 ಡಾಟ್ ಬಾಲ್

5- ಲಸಿತ್ ಮಾಲಿಂಗ- 1,155 ಡಾಟ್ ಬಾಲ್

4- ಸುನಿಲ್ ನರೈನ್- 1,249 ಡಾಟ್ ಬಾಲ್

3- ರವಿಚಂದ್ರನ್ ಅಶ್ವಿನ್- 1,265 ಡಾಟ್ ಬಾಲ್

2- ಭುವನೇಶ್ವರ್ ಕುಮಾರ್- 1,267 ಡಾಟ್ ಬಾಲ್

1- ಹರ್ಭಜನ್ ಸಿಂಗ್- 1,268 ಡಾಟ್ ಬಾಲ್.

ಐಪಿಎಲ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ದಾಖಲೆ ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಆದರೆ ಈ ಬಾರಿ ಈ ದಾಖಲೆಯನ್ನು ಮುರಿಯುವ ಅವಕಾಶ ಭುವನೇಶ್ವರ್ ಕುಮಾರ್, ಅಶ್ವಿನ್ ಹಾಗೂ ಸುನಿಲ್ ನರೈನ್ಗೆ ಇದೆ. ಹೀಗಾಗಿ ಈ ಸೀಸನ್ ಮೂಲಕ ಹೊಸ ದಾಖಲೆ ನಿರ್ಮಾಣವಾಗಲಿದೆ.