ಈ ಪ್ರಶಸ್ತಿ ಸುತ್ತಿನಲ್ಲಿ ಅನೇಕ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದರು. ಬ್ರೆಜಿಲ್ ಫುಟ್ಬಾಲ್ ಆಟಗಾರ ರಾಬರ್ಟೊ ಕಾರ್ಲೋಸ್, ಜಮೈಕಾದ ಸ್ಪ್ರಿಂಟರ್ ಅಸಫಾ ಪೊವೆಲ್, ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರಂತಹ ಅನೇಕ ದೊಡ್ಡ ಹೆಸರುಗಳು ಈ ಪ್ರಶಸ್ತಿಯ ರೇಸ್‌ನಲ್ಲಿದ್ದವು. ಇವರೆಲ್ಲರನ್ನೂ ಹಿಂದಿಕ್ಕಿ ಸುರೇಶ್ ರೈನಾ ಅವರಿಗೆ ಈ ಅವಾರ್ಡ್ ಒಲಿದಿರುವುದು ವಿಶೇಷ.