Test Records: ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಅತೀ ಹೆಚ್ಚು ದ್ವಿಶತಕ ಬಾರಿಸಿದ್ದು ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jun 20, 2023 | 8:32 PM

Team India Records: ಟೀಮ್ ಇಂಡಿಯಾ ಪರ ಕೂಡ ಟೆಸ್ಟ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಕೂಡ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಆದರೆ ಭಾರತದ ಪರ ಅತ್ಯಧಿಕ ದ್ವಿಶತಕ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 2ನೇ ಸ್ಥಾನದಲ್ಲಿದ್ದಾರೆ.

1 / 7
Test Records: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಶತಕ ಬಾರಿಸಿದ್ದು ಯಾರು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ ಸಚಿನ್ ತೆಂಡೂಲ್ಕರ್. ಮಾಸ್ಟರ್ ಬ್ಲಾಸ್ಟರ್ ಸಚಿನ್ ಒಟ್ಟು 51 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

2 / 7
ಹಾಗೆಯೇ ಟೀಮ್ ಇಂಡಿಯಾ ಪರ ಕೂಡ ಟೆಸ್ಟ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಕೂಡ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಆದರೆ ಭಾರತದ ಪರ ಅತ್ಯಧಿಕ ದ್ವಿಶತಕ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 2ನೇ ಸ್ಥಾನದಲ್ಲಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಟೆಸ್ಟ್​​ನಲ್ಲಿ ಅತೀ ಹೆಚ್ಚು ದ್ವಿಶತಕ ಬಾರಿಸಿದ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡೋಣ...

3 / 7
1- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 185 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 7 ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತದ ಪರ ಟೆಸ್ಟ್​ನಲ್ಲಿ ಅತ್ಯಧಿಕ ಡಬಲ್ ಸೆಂಚುರಿ ಬಾರಿಸಿದ ದಾಖಲೆ ಹೊಂದಿದ್ದಾರೆ.

4 / 7
2- ಸಚಿನ್ ತೆಂಡೂಲ್ಕರ್: 200 ಟೆಸ್ಟ್ ಪಂದ್ಯಗಳಲ್ಲಿ 329	ಇನಿಂಗ್ಸ್ ಆಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 6 ದ್ವಿಶತಕ ಬಾರಿಸಿದ್ದಾರೆ.

5 / 7
3- ವೀರೇಂದ್ರ ಸೆಹ್ವಾಗ್: ಟೀಮ್ ಇಂಡಿಯಾದ ಮಾಜಿ ಹೊಡಿಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ 178 ಟೆಸ್ಟ್​ ಇನಿಂಗ್ಸ್​ಗಳಲ್ಲಿ 6 ಬಾರಿ ದ್ವಿಶತಕ ಸಿಡಿಸಿದ್ದಾರೆ.

6 / 7
4- ರಾಹುಲ್ ದ್ರಾವಿಡ್: ಟೀಮ್ ಇಂಡಿಯಾದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ 284 ಟೆಸ್ಟ್ ಇನಿಂಗ್ಸ್​ನಲ್ಲಿ 5 ಬಾರಿ ದ್ವಿಶತಕ ಬಾರಿಸಿದ್ದಾರೆ.

7 / 7
5- ಸುನಿಲ್ ಗವಾಸ್ಕರ್: ಲಿಟಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ಪರ ಒಟ್ಟು 214 ಟೆಸ್ಟ್ ಇನಿಂಗ್ಸ್ ಆಡಿದ್ದಾರೆ. ಈ ವೇಳೆ 4 ಬಾರಿ ದ್ವಿಶತಕ ಸಿಡಿಸಿದ್ದರು.