Updated on: Jul 13, 2023 | 3:06 PM
India vs West Indies: ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕನ್ನಡಿಗ ಅನಿಲ್ ಕುಂಬ್ಳೆ. ಇನ್ನು ದ್ವಿತೀಯ ಸ್ಥಾನದಲ್ಲಿ ಹರ್ಭಜ್ ಸಿಂಗ್ ಇದ್ದಾರೆ. ಇದೀಗ ಮೂರನೇ ವಿಕೆಟ್ ಟೇಕರ್ ಆಗಿ ಅಶ್ವಿನ್ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಈ ಮೂವರನ್ನು ಹೊರತುಪಡಿಸಿ ಟೀಮ್ ಇಂಡಿಯಾ ಪರ ಯಾವುದೇ ಬೌಲರ್ 700+ ವಿಕೆಟ್ ಕಬಳಿಸಿಲ್ಲ. ಹಾಗಿದ್ರೆ ಭಾರತದ ಪರ ಅತ್ಯಧಿಕ ವಿಕೆಟ್ ಪಡೆ ಬೌಲರ್ಗಳು ಯಾರೆಲ್ಲಾ ಎಂದು ನೋಡೋಣ...
1- ಅನಿಲ್ ಕುಂಬ್ಳೆ: ಭಾರತದ ಪರ ಒಟ್ಟು 401 ಪಂದ್ಯಗಳನ್ನಾಡಿರುವ ಅನಿಲ್ ಕುಂಬ್ಳೆ 9204.2 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ ಒಟ್ಟು 953 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.
2- ಹರ್ಭಜನ್ ಸಿಂಗ್: ಟೀಮ್ ಇಂಡಿಯಾ ಪರ 365 ಪಂದ್ಯಗಳಲ್ಲಿ 6925.1 ಓವರ್ ಬೌಲಿಂಗ್ ಮಾಡಿರುವ ಹರ್ಭಜನ್ ಸಿಂಗ್ ಒಟ್ಟು 707 ವಿಕೆಟ್ ಕಬಳಿಸಿದ್ದಾರೆ.
3- ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾ ಪರ ಇದುವರೆಗೆ 271 ಪಂದ್ಯಗಳನ್ನಾಡಿರುವ ಅಶ್ವಿನ್ 5385.3 ಓವರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಒಟ್ಟು 702 ವಿಕೆಟ್ಗಳನ್ನು ಕಬಳಿಸಿದ್ದಾರೆ.
4- ಕಪಿಲ್ ದೇವ್: ಭಾರತದ ಪರ 356 ಪಂದ್ಯಗಳನ್ನಾಡಿರುವ ಕಪಿಲ್ ದೇವ್, 6490.2 ಓವರ್ಗಳನ್ನು ಎಸೆದು 687 ವಿಕೆಟ್ ಕಬಳಿಸಿದ್ದಾರೆ.
5- ಝಹೀರ್ ಖಾನ್: ಟೀಮ್ ಇಂಡಿಯಾ ಪರ 303 ಪಂದ್ಯಗಳನ್ನಾಡಿರುವ ಎಡಗೈ ವೇಗಿ ಝಹೀರ್ ಖಾನ್ ಒಟ್ಟು 4825.2 ಓವರ್ ಎಸೆದಿದ್ದಾರೆ. ಈ ವೇಳೆ ಒಟ್ಟು 597 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಅಂದರೆ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ಗಳನ್ನು ಪಡೆದಿರುವ ಟಾಪ್-3 ನಲ್ಲಿ ಸ್ಪಿನ್ನರ್ಗಳಿದ್ದಾರೆ. ಈ ಪಟ್ಟಿಯಲ್ಲಿ 707 ವಿಕೆಟ್ ಕಬಳಿಸಿ 2ನೇ ಸ್ಥಾನದಲ್ಲಿರುವ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಲು ಅಶ್ವಿನ್ ಅವರಿಗೆ ಬೇಕಿರುವುದು ಕೇವಲ 6 ವಿಕೆಟ್ಗಳು ಮಾತ್ರ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಅಶ್ವಿನ್ ದ್ವಿತೀಯ ಸ್ಥಾನಕ್ಕೇರಬಹುದು.