Virat Kohli: ಟಾಪ್ ರನ್​ ಸರದಾರರ ಪಟ್ಟಿಗೆ ಕಿಂಗ್ ಕೊಹ್ಲಿ ಎಂಟ್ರಿ: ಇದು ಕೂಡ ದಾಖಲೆ

| Updated By: ಝಾಹಿರ್ ಯೂಸುಫ್

Updated on: Jan 15, 2023 | 5:29 PM

Most ODI Runs Record: ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಐದು ಬ್ಯಾಟ್ಸ್​ಮನ್​ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಹಾಗಿದ್ರೆ ಏಕದಿನ ಕ್ರಿಕೆಟ್ ಟಾಪ್-5 ರನ್​ ಸರದಾರರು ಯಾರೆಲ್ಲಾ ನೋಡೋಣ...

1 / 9
ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಏಕದಿನ ಕ್ರಿಕೆಟ್​ನ ಟಾಪ್ ರನ್​ ಸರದಾರರ ಪಟ್ಟಿಗೆ ಎಂಟ್ರಿ ಕೊಡುವ ಮೂಲಕ ಎಂಬುದು ವಿಶೇಷ.

2 / 9
ಈ ಪಂದ್ಯದಲ್ಲಿ 70 ರನ್​ ಪೂರೈಸುವುದರೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಟಾಪ್-5 ಬ್ಯಾಟ್ಸ್​ಮನ್​ಗಳ ಪಟ್ಟಿಗೆ ಎಂಟ್ರಿ ಕೊಟ್ಟರು. ಅದು ಕೂಡ ಶ್ರೀಲಂಕಾದ ಮಹೇಲ ಜಯವರ್ಧನೆ ಅವರನ್ನು ಹಿಂದಿಕ್ಕುವ ಮೂಲಕ.

3 / 9
ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ ಏಕದಿನ ಕ್ರಿಕೆಟ್​ನಲ್ಲಿ 12650 ರನ್​ ಕಲೆಹಾಕಿದ್ದರೆ, ಇದೀಗ ವಿರಾಟ್ ಕೊಹ್ಲಿ 12754	ರನ್​ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಐದು ಬ್ಯಾಟ್ಸ್​ಮನ್​ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಹಾಗಿದ್ರೆ ಏಕದಿನ ಕ್ರಿಕೆಟ್ ಟಾಪ್-5 ರನ್​ ಸರದಾರರು ಯಾರೆಲ್ಲಾ ನೋಡೋಣ...

4 / 9
1- ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್​ನ ರನ್​ ಸರದಾರನಾಗಿ ಅಗ್ರಸ್ಥಾನದಲ್ಲಿದ್ದಾರೆ. 452 ಏಕದಿನ ಇನಿಂಗ್ಸ್​ ಆಡಿರುವ ಸಚಿನ್ ಒಟ್ಟು 18426 ರನ್​ ಕಲೆಹಾಕಿದ್ದಾರೆ.

5 / 9
2- ಕುಮಾರ ಸಂಗಾಕ್ಕರ: ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಾಕ್ಕರ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 380 ಏಕದಿನ ಇನಿಂಗ್ಸ್​ ಆಡಿರುವ ಸಂಗಾಕ್ಕರ ಒಟ್ಟು 14234 ರನ್​ ಬಾರಿಸಿದ್ದಾರೆ.

6 / 9
3- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 365 ಇನಿಂಗ್ಸ್​ ಮೂಲಕ 13704	ರನ್​ ಕಲೆಹಾಕಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.

7 / 9
4- ಸನತ್ ಜಯಸೂರ್ಯ: ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಂಕಾ ಪರ 433 ಏಕದಿನ ಇನಿಂಗ್ಸ್ ಆಡಿರುವ ಜಯಸೂರ್ಯ ಒಟ್ಟು 13430 ರನ್​ ಕಲೆಹಾಕಿದ್ದಾರೆ.

8 / 9
5- ವಿರಾಟ್ ಕೊಹ್ಲಿ: ಏಕದಿನ ಕ್ರಿಕೆಟ್​ನಲ್ಲಿ 259 ಇನಿಂಗ್ಸ್​ ಆಡಿರುವ ವಿರಾಟ್ ಕೊಹ್ಲಿ ಒಟ್ಟು 12754 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಟಾಪ್-5 ನಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.

9 / 9
ಸಚಿನ್ ತೆಂಡೂಲ್ಕರ್ ಹೊರತುಪಡಿಸಿ ಟೀಮ್ ಇಂಡಿಯಾದ ಯಾವುದೇ ಬ್ಯಾಟ್ಸ್​ಮನ್ ಏಕದಿನ ಕ್ರಿಕೆಟ್​ನ ಟಾಪ್-5 ರನ್​ ಸರದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಕಿಂಗ್ ಕೊಹ್ಲಿ ಅಗ್ರ-5 ಕ್ಕೆ ಎಂಟ್ರಿ ಕೊಡುವ ಮೂಲಕ ಈ ಸಾಧನೆ ಮಾಡಿದ 2ನೇ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.