ಅನಿಲ್ ಕುಂಬ್ಳೆಗೆ ಎರಡನೇ ಸ್ಥಾನ; ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಓವರ್ ಬೌಲ್ ಮಾಡಿದ ಬೌಲರ್‌ಗಳ ಪಟ್ಟಿ ಹೀಗಿದೆ
TV9 Web | Updated By: ಪೃಥ್ವಿಶಂಕರ
Updated on:
Dec 19, 2021 | 4:08 PM
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 7339.5 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಇವರ ನಂತರ, 6808.2 ಓವರ್‌ಗಳನ್ನು ಬೌಲ್ ಮಾಡಿದ ಭಾರತದ ಅನಿಲ್ ಕುಂಬ್ಳೆ ಎರಡನೇ ಸ್ಥಾನದಲ್ಲಿದ್ದಾರೆ.
1 / 4
ಒಬ್ಬ ಬೌಲರ್ ತನ್ನ ಟೆಸ್ಟ್ ವೃತ್ತಿಜೀವನದಲ್ಲಿ ಎಷ್ಟು ಓವರ್‌ಗಳನ್ನು ಬೌಲ್ ಮಾಡಬಹುದು ಎಂಬುದು ಅವನು ಎಷ್ಟು ಫಿಟ್ ಆಗಿದ್ದಾನೆ ಮತ್ತು ಎಷ್ಟು ಸಮಯದವರೆಗೆ ಆಡಿದ್ದಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವೇಗದ ಬೌಲರ್‌ಗಳಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ, ಒಟ್ಟಾರೆ ಬೌಲರ್‌ಗಳ ಪಟ್ಟಿಯಲ್ಲಿ ಅವರ ಸಂಖ್ಯೆ ನಾಲ್ಕನೇ ಸ್ಥಾನದಲ್ಲಿದೆ.
2 / 4
ಅಂದರೆ, 3 ಬೌಲರ್‌ಗಳು ವೇಗಿಗಳಾಗದಿದ್ದರೂ, ಅವರು ಆಂಡರ್ಸನ್‌ಗಿಂತ ಮುಂದಿದ್ದಾರೆ. ಮತ್ತು ಈ ಮೂವರೂ ಅವರ ಕಾಲದಲ್ಲಿ ವಿಶ್ವ ದರ್ಜೆಯ ಸ್ಪಿನ್ನರ್‌ಗಳಾಗಿದ್ದಾರೆ.
3 / 4
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 7339.5 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಇವರ ನಂತರ, 6808.2 ಓವರ್‌ಗಳನ್ನು ಬೌಲ್ ಮಾಡಿದ ಭಾರತದ ಅನಿಲ್ ಕುಂಬ್ಳೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಕ್ರಮಾಂಕದಲ್ಲಿರುವ ಶೇನ್ ವಾರ್ನ್ 6784.1 ಓವರ್ ಬೌಲಿಂಗ್ ಮಾಡಿದ್ದಾರೆ.
4 / 4
ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಇಲ್ಲಿಯವರೆಗೆ 6001.0 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಜೊತೆಗೆ ಅವರು ಈ ಸಾಧನೆ ಮಾಡಿದ ವೇಗದ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, ಸ್ಟುವರ್ಟ್ ಬ್ರಾಡ್ 5013.1 ಓವರ್ ಬೌಲಿಂಗ್ ಮಾಡಿ ಆಂಡರ್ಸನ್ ಹಿಂದೆಯೇ ಇದ್ದಾರೆ.