Updated on: Sep 12, 2022 | 11:24 AM
ಏಷ್ಯಾಕಪ್ 2022 ಮುಕ್ತಾಯಗೊಂಡಿದೆ. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಸೋಲಿಸಿ ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ 6ನೇ ಬಾರಿ ಏಷ್ಯಾಕಪ್ ಗೆದ್ದ ಹೆಗ್ಗಳಿಕೆಗೆ ಲಂಕಾ ತಂಡ ಪಾತ್ರವಾಗಿದೆ. ವಿಶೇಷ ಎಂದರೆ....
ವಿಶೇಷ ಎಂದರೆ ಈ ಬಾರಿ ಏಷ್ಯಾಕಪ್ನಲ್ಲಿ ರನ್ ಮಳೆ ಹರಿದರೂ ಕೇವಲ ಇಬ್ಬರು ಬ್ಯಾಟ್ಸ್ಮನ್ಗಳು ಮಾತ್ರ 200 ಕ್ಕೂ ಅಧಿಕ ರನ್ ಕಲೆಹಾಕಿದ್ದರು. ಅವರಲ್ಲಿ ಒಬ್ಬರು ಟೀಮ್ ಇಂಡಿಯಾ ಆಟಗಾರರಾದರೆ, ಮತ್ತೊಬ್ಬರು ಪಾಕ್ ಕ್ರಿಕೆಟಿಗ ಎಂಬುದು ವಿಶೇಷ. ಹಾಗಿದ್ರೆ ಈ ಬಾರಿಯ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ...
1- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್): ಪಾಕ್ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 6 ಪಂದ್ಯಗಳಿಂದ ಒಟ್ಟು 281 ರನ್ ಕಲೆಹಾಕಿದ್ದರು. ಈ ಮೂಲಕ ಈ ಬಾರಿಯ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
2- ವಿರಾಟ್ ಕೊಹ್ಲಿ (ಭಾರತ): ಈ ಪಟ್ಟಿಯಲ್ಲಿರುವ 2ನೇ ಆಟಗಾರನೆಂದರೆ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಈ ಬಾರಿಯ ಏಷ್ಯಾಕಪ್ನಲ್ಲಿ 5 ಪಂದ್ಯಗಳಿಂದ 276 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಇದರಲ್ಲಿ ಒಂದು ಶತಕ ಕೂಡ ಸೇರಿದೆ. ಅಂದರೆ ಏಷ್ಯಾಕಪ್ ಟಿ20ಯಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ.
3- ಇಬ್ರಾಹಿಂ ಝದ್ರಾನ್: ಅಫ್ಘಾನಿಸ್ತಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಇಬ್ರಾಹಿಂ ಝದ್ರಾನ್ 5 ಪಂದ್ಯಗಳಿಂದ 196 ರನ್ ಬಾರಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
4- ಭಾನುಕ ರಾಜಪಕ್ಸೆ: ಶ್ರೀಲಂಕಾದ ಸ್ಪೋಟಕ ಬ್ಯಾಟ್ಸ್ಮನ್ ಭಾನುಕ ರಾಜಪಕ್ಸೆ 6 ಪಂದ್ಯಗಳಿಂದ 191 ರನ್ ಕಲೆಹಾಕಿ 4ನೇ ಸ್ಥಾನ ಅಲಂಕರಿಸಿದ್ದಾರೆ.
5- ಪಾತುಂ ನಿಸಂಕಾ: ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಪಾತುಂ ನಿಸಂಕಾ ಈ ಬಾರಿ 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ ಒಟ್ಟು 173 ರನ್ ಬಾರಿಸಿದ್ದಾರೆ.