ಏಕದಿನ ವಿಶ್ವಕಪ್​ನ ಅತ್ಯಂತ ಯಶಸ್ವಿ ನಾಯಕ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Sep 30, 2023 | 11:07 PM

ICC World Cup: ಈ ಆರು ತಂಡಗಳಲ್ಲಿ ಅತೀ ಹೆಚ್ಚು ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ತಂಡವೆಂದರೆ ಆಸ್ಟ್ರೇಲಿಯಾ. ಆಸೀಸ್ ಪಡೆ 1987, 1999, 2003, 2007 ಮತ್ತು 2015 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿಯೇ ಏಕದಿನ ವಿಶ್ವಕಪ್​ನ ಅತ್ಯುತ್ತಮ ನಾಯಕರುಗಳ ಪಟ್ಟಿಯಲ್ಲೂ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಮುಂಚೂಣಿಯಲ್ಲಿದ್ದಾರೆ. ಹಾಗಿದ್ರೆ ಏಕದಿನ ವಿಶ್ವಕಪ್​ನ ಅತ್ಯಂತ ಯಶಸ್ವಿ ನಾಯಕ ಯಾರೆಂದು ನೋಡೋಣ...

1 / 7
ಹದಿಮೂರನೇ ಆವೃತ್ತಿಯ ಏಕದಿನ ವಿಶ್ವಕಪ್​ಗೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 5 ರಿಂದ ಶುರುವಾಗಲಿರುವ ಕ್ರಿಕೆಟ್ ಕದನದಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಈ ಹತ್ತು ತಂಡಗಳಲ್ಲಿ ಇದುವರೆಗೆ ಕೇವಲ 6 ತಂಡಗಳು ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2 / 7
ಈ ಆರು ತಂಡಗಳಲ್ಲಿ ಅತೀ ಹೆಚ್ಚು ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ತಂಡವೆಂದರೆ ಆಸ್ಟ್ರೇಲಿಯಾ. ಆಸೀಸ್ ಪಡೆ 1987, 1999, 2003, 2007 ಮತ್ತು 2015 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿಯೇ ಏಕದಿನ ವಿಶ್ವಕಪ್​ನ ಅತ್ಯುತ್ತಮ ನಾಯಕರುಗಳ ಪಟ್ಟಿಯಲ್ಲೂ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಮುಂಚೂಣಿಯಲ್ಲಿದ್ದಾರೆ. ಹಾಗಿದ್ರೆ ಏಕದಿನ ವಿಶ್ವಕಪ್​ನ ಅತ್ಯಂತ ಯಶಸ್ವಿ ನಾಯಕ ಯಾರೆಂದು ನೋಡೋಣ...

3 / 7
1- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಕಾಂಗರೂ ಪಡೆ ಮೂರು ವಿಶ್ವಕಪ್​ಗಳಲ್ಲಿ ಕಣಕ್ಕಿಳಿದಿದೆ. ಈ ವೇಳೆ ಎರಡು ಬಾರಿ (2003, 2007) ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಏಕದಿನ ವಿಶ್ವಕಪ್​ನಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ 29 ಪಂದ್ಯಗಳನ್ನಾಡಿದ್ದ ಆಸ್ಟ್ರೇಲಿಯಾ ಬರೋಬ್ಬರಿ 26 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ ಸೋತಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯ ರದ್ದಾಗಿತ್ತು. ಹೀಗಾಗಿ ಏಕದಿನ ವಿಶ್ವಕಪ್ ಬೆಸ್ಟ್ ಕ್ಯಾಪ್ಟನ್ ಆಗಿ ಇಂದಿಗೂ ರಿಕಿ ಪಾಂಟಿಂಗ್​ ಅಗ್ರಸ್ಥಾನದಲ್ಲಿದ್ದಾರೆ.

4 / 7
2- ಸ್ಟೀಫನ್ ಫ್ಲೆಮಿಂಗ್: ನ್ಯೂಝಿಲೆಂಡ್​ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಏಕದಿನ ವಿಶ್ವಕಪ್​ನಲ್ಲಿ 27 ಪಂದ್ಯಗಳಲ್ಲಿ ಕಿವೀಸ್ ತಂಡನ್ನು ಮುನ್ನಡೆಸಿದ್ದಾರೆ. ಈ ವೇಳೆ ನ್ಯೂಝಿಲೆಂಡ್ ತಂಡ ಗೆದ್ದಿರುವುದು ಕೇವಲ 16 ಪಂದ್ಯಗಳಲ್ಲಿ ಮಾತ್ರ. ಇನ್ನು 10 ಮ್ಯಾಚ್​ಗಳಲ್ಲಿ ಸೋತರೆ, 1 ಪಂದ್ಯ ರದ್ದಾಗಿತ್ತು. ಇದಾಗ್ಯೂ ನ್ಯೂಝಿಲೆಂಡ್ ತಂಡಕ್ಕೆ ವಿಶ್ವಕಪ್ ಗೆದ್ದುಕೊಡಲು ಫ್ಲೆಮಿಂಗ್​ಗೆ ಸಾಧ್ಯವಾಗಿರಲಿಲ್ಲ.

5 / 7
3- ಕ್ಲೈವ್ ಲಾಯ್ಡ್: ಏಕದಿನ ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್​ ತಂಡದ ಅತ್ಯಂತ ಯಶಸ್ವಿ ನಾಯಕ ಕ್ಲೈವ್ ಲಾಯ್ಡ್. 1975 ರಿಂದ 1983 ರವರೆಗೆ ಲಾಯ್ಡ್ ನೇತೃತ್ವದಲ್ಲಿ ವಿಂಡೀಸ್ ಪಡೆ 17 ಪಂದ್ಯಗಳಲ್ಲಿ ಕಣಕ್ಕಿಳಿದಿತ್ತು. ಈ ವೇಳೆ 15 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ, 2 ಮ್ಯಾಚ್​ಗಳಲ್ಲಿ ಸೋಲನುಭವಿಸಿತ್ತು. ಇನ್ನು 1975 ಹಾಗೂ 1979 ರಲ್ಲಿ ಕ್ಲೈವ್ ಲಾಯ್ಡ್​ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

6 / 7
4- ಮಹೇಂದ್ರ ಸಿಂಗ್ ಧೋನಿ: ಟೀಮ್ ಇಂಡಿಯಾದ ಯಶಸ್ವಿ ನಾಯಕರೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ 2011 ಹಾಗೂ 2015 ರ ವಿಶ್ವಕಪ್​ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಆಡಿದ 17 ಪಂದ್ಯಗಳಲ್ಲಿ ಟೀಮ್ ಇಂಡಿಯಾ 14 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು 1 ಪಂದ್ಯ ಟೈನಲ್ಲಿ ಅಂತ್ಯ ಕಂಡರೆ, ಮತ್ತೆರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಹಾಗೆಯೇ 2011ರ ವಿಶ್ವಕಪ್​ನಲ್ಲಿ ಧೋನಿಯು ಟೀಮ್ ಇಂಡಿಯಾವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು.

7 / 7
5- ಇಮ್ರಾನ್ ಖಾನ್: ಪಾಕಿಸ್ತಾನ್ ತಂಡವನ್ನು ಇಮ್ರಾನ್ ಖಾನ್ ಏಕದಿನ ವಿಶ್ವಕಪ್​ನಲ್ಲಿ 22 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಪಾಕ್ ಪಡೆ ಗೆದ್ದಿರುವುದು ಕೇವಲ 14 ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ 8 ಮ್ಯಾಚ್​ಗಳಲ್ಲಿ ಸೋಲನುಭವಿಸಿತ್ತು. ಇದಾಗ್ಯೂ 1992 ರಲ್ಲಿ ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ್ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.