MPL: 11 ಬೌಂಡರಿ, 4 ಸಿಕ್ಸರ್; ಟಿ20ಯಲ್ಲಿ ಚೊಚ್ಚಲ ಶತಕ ಸಿಡಿಸಿ 2 ದಾಖಲೆ ಬರೆದ ಅಂಕಿತ್..!
Ankit Bawne Century in MPL: ಅಂಕಿತ್ ತಮ್ಮ ಶತಕವನ್ನು ಪೂರ್ಣಗೊಳಿಸಿದ ಸಿಕ್ಸರ್ ಅವರ ಇನ್ನಿಂಗ್ಸ್‌ನ ಕೊನೆಯ ಸಿಕ್ಸರ್ ಆಗಿತ್ತು. ಅಂಕಿತ್ ಪಂದ್ಯದಲ್ಲಿ ಕೊನೆಯವರೆಗೂ ಅಜೇಯರಾಗಿ ಉಳಿದು 60 ಎಸೆತಗಳಲ್ಲಿ ಒಟ್ಟು 105 ರನ್ ಬಾರಿಸಿದರು.
1 / 6
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಜೂನ್ 17 ರಂದು ನಡೆದ ಪಂದ್ಯದಲ್ಲಿ 30 ವರ್ಷದ ಅಂಕಿತ್ ಬಾವ್ನೆ ಚೊಚ್ಚಲ ಟಿ20 ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಕೊಲ್ಹಾಪುರ ಟಸ್ಕರ್ಸ್ ತಂಡದ ಪರ ಕಣಕ್ಕಿಳಿದಿದ್ದ ಅಂಕಿತ್, ರತ್ನಗಿರಿ ಜೆಟ್ಸ್ ತಂಡದ ವಿರುದ್ಧ ಸ್ಫೋಟಕ ಶತಕ ಸಿಡಿಸಿದರು.
2 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರತ್ನಗಿರಿ ಜೆಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ತಂಡದ ಪರ ಪ್ರೀತಂ ಪಾಟೀಲ್ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 69 ರನ್ ಚಚ್ಚಿದರು.
3 / 6
177 ರನ್‌ಗಳ ಗುರಿ ಬೆನ್ನತ್ತಿದ ಕೊಲ್ಹಾಪುರ ಟಸ್ಕರ್ಸ್ ತಂಡ ಅಂಕಿತ್ ಅವರ ಸ್ಫೋಟಕ ಶಕತದಿಂದಾಗಿ 20 ಓವರ್‌ಗಳಲ್ಲಿ 2 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿತು. ಈ ಮೂಲಕ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಂಡಿತು.
4 / 6
ಅಂಕಿತ್ 98 ರನ್ ಗಳಿಸಿ ಆಡುತ್ತಿದ್ದಾಗ ಸಿಕ್ಸರ್ ಬಾರಿಸುವ ಮೂಲಕ ಶತಕದ ಹೊಸ್ತಿಲು ದಾಟಿದರು. ಈ ಶತಕ ಪೂರೈಸಲು ಅವರು 59 ಎಸೆತಗಳನ್ನು ಎದುರಿಸಿದರು. ಈ ವೇಳೆ ಅವರು 11 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದರು.
5 / 6
ಅಂಕಿತ್ ತಮ್ಮ ಶತಕವನ್ನು ಪೂರ್ಣಗೊಳಿಸಿದ ಸಿಕ್ಸರ್ ಅವರ ಇನ್ನಿಂಗ್ಸ್‌ನ ಕೊನೆಯ ಸಿಕ್ಸರ್ ಆಗಿತ್ತು. ಅಂಕಿತ್ ಪಂದ್ಯದಲ್ಲಿ ಕೊನೆಯವರೆಗೂ ಅಜೇಯರಾಗಿ ಉಳಿದು 60 ಎಸೆತಗಳಲ್ಲಿ ಒಟ್ಟು 105 ರನ್ ಬಾರಿಸಿದರು. ಈ ಶತಕದೊಂದಿಗೆ ಎರಡು ದಾಖಲೆಗಳನ್ನು ನಿರ್ಮಿಸಿದರು. ಮೊದಲನೆಯದಾಗಿ, ಇದು ಅವರ ಟಿ20 ವೃತ್ತಿಜೀವನದ ಮೊದಲ ಶತಕ ಮತ್ತು ಎರಡನೆಯದಾಗಿ, ಎಂಪಿಎಲ್ ಇತಿಹಾಸದಲ್ಲಿ ಇದು ಮೊದಲ ಶತಕವಾಗಿ ದಾಖಲಾಗಿದೆ.
6 / 6
ಇನ್ನು ಅಂಕಿತ್ ಬಾವ್ನೆ ಅವರ ಪ್ರಥಮ ದರ್ಜೆ ಕ್ರಿಕೆಟ್ ಸಾಧನೆ ನೋಡುವುದಾದರೆ, ಬಾವ್ನೆ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಸೇರಿದಂತೆ ಒಟ್ಟು 32 ಶತಕಗಳನ್ನು ಬಾರಿಸಿದ್ದಾರೆ. ಇದೀಗ ಟಿ20 ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸುವುದರೊಂದಿಗೆ ಅಂಕಿತ್ ಬಾವ್ನೆ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.