ಭಾರತದಲ್ಲಿ ಆರಂಭವಾಗುತ್ತಿರುವ ದೇಶೀ ಲೀಗ್ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡದ ನಾಯಕತ್ವವನ್ನು ನಿರಾಕರಿಸಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್, ಲೀಗ್ನಿಂದ ಹಿಂದೆ ಸರಿಯಲು ಏನು ಕಾರಣ ಎಂಬುದು ಬಹಿರಂಗಗೊಂಡಿದೆ.
ವಾಸ್ತವವಾಗಿ ಜೂನ್ 28 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡದ ನಾಯಕತ್ವವಹಿಸಿಕೊಳ್ಳುವಂತೆ ಕಿಶನ್ರನ್ನು ವಲಯ ಆಯ್ಕೆ ಸಮಿತಿ ಸಂಚಾಲಕ ದೇಬಾಶಿಶ್ ಚಕ್ರವರ್ತಿ ಕೇಳಿಕೊಂಡಿದ್ದರು. ಆದರೆ ಮನವಿಯನ್ನು ಕಿಶನ್ ತಿರಸ್ಕರಿಸಿದ್ದರು. ಆ ಬಳಿಕ ಯುವ ಕ್ರಿಕೆಟರ್ ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದೀಗ ಕಿಶನ್ ದೇಶಿ ಟೂರ್ನಿಯಿಂದ ಹಿಂದೆ ಸರಿದಿರುವುದರ ಕಾರಣ ಬಹಿರಂಗಗೊಂಡಿದ್ದು, ಮುಂಬರುವ ವೆಸ್ಟ್ ಇಂಡೀಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಂಡೀಸ್ ವಿರುದ್ಧದ ಸರಣಿಗೆ ಸಂಪೂರ್ಣ ಫಿಟ್ ಆಗಿರಲು ಮುಂದಾಗಿರುವ ಕಿಶನ್ ಬೆಂಗಳೂರಿನಲ್ಲಿರುವ ಎನ್ಸಿಎಯಲ್ಲಿ ತಮ್ಮ ಫಿಟ್ನೇಸ್ ಮೇಲೆ ಕೆಲಸ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಗಮನಾರ್ಹವಾಗಿ, ಅಂತರಾಷ್ಟ್ರೀಯ ಸರಣಿಗಳ ನಡುವೆ ಅಂತರವಿದ್ದಾಗ ಆಟಗಾರರು ಫಿಟ್‌ನೆಸ್ ನವೀಕರಣಗಳಿಗಾಗಿ ಬೆಂಗಳೂರಿನ ಎನ್‌ಸಿಎಗೆ ಹೋಗುತ್ತಾರೆ. ಕಿಶನ್ ಕೊನೆಯದಾಗಿ ಮೇ 26 ರಂದು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಇದೀಗ ಕಿಶನ್ ದುಲೀಪ್ ಟ್ರೋಫಿಯನ್ನು ಆಡುತ್ತಿಲ್ಲವಾದ್ದರಿಂದ, ತಮ್ಮ ಪಿಟ್ನೆಸ್ ಮೇಲೆ ಕೆಲಸ ಮಾಡಲು ಕಿಶನ್ ಎನ್ಸಿಗೆ ತೆರಳಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮುಂಬರುವ ವಿಂಡೀಸ್ ಪ್ರವಾಸದಲ್ಲಿ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
ಗಮನಾರ್ಹವಾಗಿ, ಅಂತರಾಷ್ಟ್ರೀಯ ಸರಣಿಗಳ ನಡುವೆ ಅಂತರವಿದ್ದಾಗ ಆಟಗಾರರು ಫಿಟ್‌ನೆಸ್ ನವೀಕರಣಗಳಿಗಾಗಿ ಬೆಂಗಳೂರಿನ ಎನ್‌ಸಿಎಗೆ ಹೋಗುತ್ತಾರೆ. ಕಿಶನ್ ಕೊನೆಯದಾಗಿ ಮೇ 26 ರಂದು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಇದೀಗ ಕಿಶನ್ ದುಲೀಪ್ ಟ್ರೋಫಿಯನ್ನು ಆಡುತ್ತಿಲ್ಲವಾದ್ದರಿಂದ, ತಮ್ಮ ಪಿಟ್ನೆಸ್ ಮೇಲೆ ಕೆಲಸ ಮಾಡಲು ಕಿಶನ್ ಎನ್ಸಿಗೆ ತೆರಳಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮುಂಬರುವ ವಿಂಡೀಸ್ ಪ್ರವಾಸದಲ್ಲಿ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
ಡಬ್ಲ್ಯುಟಿಸಿ ಆಡಿ ಮುಗಿಸಿದ ಬಳಿಕ ಇದೀಗ ಟೀಂ ಇಂಡಿಯಾ ಬರೋಬ್ಬರಿ 1 ತಿಂಗಳ ವಿಶ್ರಾಂತಿ ಪಡೆಯಲಿದೆ. ಆ ಬಳಿಕ ಪೂರ್ಣ ಪ್ರಮಾಣದ ಸರಣಿಗಾಗಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.
Published On - 10:44 am, Sun, 18 June 23