MS Dhoni: ನಿವೃತ್ತಿಯ ಹಂತದಲ್ಲೂ ದಾಖಲೆ: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ ಎಂಎಸ್ ಧೋನಿ

|

Updated on: Apr 22, 2023 | 9:32 AM

CSK vs SRH, IPL 2023: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಪ್ರದರ್ಶನ ತೋರಿದರು. ಒಂದು ಕ್ಯಾಚ್, ಒಂದು ರನೌಟ್ ಮತ್ತು ಸ್ಟಂಪ್ ಔಟ್ ಮಾಡಿ ವಿಕೆಟ್ ಹಿಂಭಾಗದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

1 / 8
ಐಪಿಎಲ್ 2023 ರಲ್ಲಿ ಶುಕ್ರವಾರ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿತು. ಬ್ಯಾಟಿಂಗ್​ನಲ್ಲಿ ಡೆವೋನ್ ಕಾನ್ವೆ ಮಿಂಚಿದರೆ, ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ 4 ಓವರ್​ಗೆ 22 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತರು.

2 / 8
ಈ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಪ್ರದರ್ಶನ ತೋರಿದರು. ಒಂದು ಕ್ಯಾಚ್, ಒಂದು ರನೌಟ್ ಮತ್ತು ಸ್ಟಂಪ್ ಔಟ್ ಮಾಡಿ ವಿಕೆಟ್ ಹಿಂಭಾಗದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

3 / 8
ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್‌-ಕೀಪರ್‌ ಎಂಬ ಸಾಧನೆಯನ್ನು 41 ವರ್ಷದ ಎಂಎಸ್ ಧೋನಿ ನಿರ್ಮಿಸಿದ್ದಾರೆ. ಈ ಹಿಂದೆ ಕ್ವಿಂಟನ್ ಡಿಕಾಕ್ ಅವರು ಈ ದಾಖಲೆಯನ್ನು ಹೊಂದಿದ್ದರು. ಇದೀಗ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮೀರಿಸಿದ್ದಾರೆ.

4 / 8
ಈ ಪಂದ್ಯಕ್ಕು ಮುನ್ನ ಧೋನಿ ಹಾಗೂ ಡಿಕಾಕ್ ಒಟ್ಟು 207 ಕ್ಯಾಚ್‌ಗಳನ್ನು ಪಡೆದು ನಂಬರ್ 1 ಸ್ಥಾನದಲ್ಲಿದ್ದರು. ಮಹೇಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಆ್ಯಡಂ ಮಾರ್ಕ್ರಮ್ ಅವರ ಕ್ಯಾಚ್ ಅನ್ನು ಧೋನಿ ಪಡೆದ ಕೂಡಲೆ ಇತಿಹಾಸ ನಿರ್ಮಿಸಿದ್ದಾರೆ.

5 / 8
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್‌ ಆರಂಭ ನಿಧಾನ ಗತಿಯಿಂದ ಕೂಡಿತ್ತು. 13 ಎಸೆತಗಳಿಂದ 18 ರನ್‌ ಮಾಡಿ ಬ್ರೂಕ್‌ ಪೆವಿಲಿಯನ್‌ ಸೇರಿಕೊಂಡರು. ದ್ವಿತೀಯ ವಿಕೆಟಿಗೆ ಅಭಿಷೇಕ್‌ ಶರ್ಮ-ರಾಹುಲ್‌ ತ್ರಿಪಾಠಿ 36 ರನ್‌ ಪೇರಿಸಿದರು. 26 ಎಸೆತಗಳಲ್ಲಿ, 3 ಬೌಂಡರಿ, 1 ಸಿಕ್ಸರ್‌ ಮೂಲಕ 34 ರನ್‌ ಮಾಡಿದ ಅಭಿಷೇಕ್‌ ತಂಡದ ಪರ ಗರಿಷ್ಠ ಮೊತ್ತ ಕಲೆಹಾಕಿದರು.

6 / 8
ತ್ರಿಪಾಠಿ ಆಟ 21 ರನ್​ಗೆ ಅಂತ್ಯವಾಯಿತು. ನಾಯಕ ಮಾರ್ಕ್‌ರಮ್‌ (12), ಕೀಪರ್‌ ಕ್ಲಾಸೆನ್‌ (17), ಜಾನ್ಸೆನ್‌ (ಅಜೇಯ 17) ಸಿಡಿಯಲು ವಿಫ‌ಲರಾದರು. ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಜಡೇಜಾ 3 ವಿಕೆಟ್ ಪಡೆದರು.

7 / 8
ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಕಾನ್ವೆ ಮತ್ತು​ ಗಾಯಕ್ವಾಡ್ (35 ರನ್) 87 ರನ್​ಗಳ ಜೊತೆಯಾಟ ಮಾಡಿದರು. ರಹಾನೆ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಅಂಬಟಿ ರಾಯುಡು ಸಹ 9 ರನ್​ಗೆ ಪೆವಿಲಿಯನ್​ ದಾರಿ ಹಿಡಿದರು.

8 / 8
ಒಂದೆಡೆ ವಿಕೆಟ್​ ಹೋಗುತ್ತಿದ್ದರೂ ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 57 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸ್​ನಿಂದ ಅಜೇಯ 77 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಸಿಎಸ್​ಕೆ 18.4 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವು ಸಾಧಿಸಿತು.

Published On - 9:32 am, Sat, 22 April 23