- Kannada News Photo gallery Cricket photos MS Dhoni came to bat in CSK vs GT IPL 2023 Final even with this injured knee Viral Video
MS Dhoni Injury: ಇದು ನೀವು ನೋಡಿರದ ವಿಡಿಯೋ: ಫೈನಲ್ನಲ್ಲಿ ಬ್ಯಾಟಿಂಗ್ ಬರುವುದಕ್ಕೂ ಮುನ್ನ ಧೋನಿಯ ಕಾಲು ಹೇಗಾಗಿತ್ತು ನೋಡಿ
Dhoni CSK IPL 2023: ಎಂಎಸ್ ಧೋನಿ ಇಂಜುರಿಯಿಂದ ಬಳಲುತ್ತಿದ್ದಾರೆ. ಫೈನಲ್ನಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುವ ಮುನ್ನ ಧೋನಿ ಅವರ ಕಾಲುವ ನೋವು ಜೋರಾಗಿತ್ತು.
Updated on: Jun 01, 2023 | 9:59 AM

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಇದಕ್ಕಾಗಿ ಐದನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಐಪಿಎಲ್ 2022 ರಲ್ಲಿ ಸಿಎಸ್‌ಕೆ ಹೀನಾಯ ಆಟವಾಡಿ 9ನೇ ಸ್ಥಾನ ಪಡೆದುಕೊಂಡಿತ್ತು. ಆದರೆ, ಆಗ ನಾಯಕ ಎಂಎಸ್ ಧೋನಿ ಒಂದು ಮಾತು ಹೇಳಿದ್ದರು.

2022 ಐಪಿಎಲ್ನಿಂದ ಹೊರಬೀಳುತ್ತಿದ್ದಂತೆ ಧೋನಿ ಅವರು ''ನಾವು ಮುಂದಿನ ಆವೃತ್ತಿಯಲ್ಲಿ ಉತ್ತಮವಾಗಿ ಕಮ್ಬ್ಯಾಕ್ ಮಾಡುತ್ತೇವೆ'' ಎಂದು ಹೇಳಿದ್ದರು. ಅದರಂತೆ ಈ ಬಾರಿ ಕೊಟ್ಟ ಮಾತಿನಂತೆ ನಡೆದುಕೊಂಡ ಸಿಎಸ್‌ಕೆ ನಾಯಕ ಎಂಎಸ್ ಧೋನಿ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದಾರೆ. ಅದುಕೂಡ ಇಂಜುರಿ ಮಧ್ಯೆ.

ಹೌದು, ಎಂಎಸ್ ಧೋನಿ ಇಂಜುರಿಯಿಂದ ಬಳಲುತ್ತಿದ್ದಾರೆ. ಎಂಎಸ್ಡಿ ಅವರಿಗೆ ಐಪಿಎಲ್ 2023 ಋತುವಿನುದ್ದಕ್ಕೂ ಎಡ ಮೊಣಕಾಲಿನ ನೋವು ಕಾಡುತ್ತಲೇ ಇತ್ತು. ಹೀಗಾಗಿ ಎಡಮೊಣಕಾಲಿಗೆ ಪಟ್ಟಿಕಟ್ಟಿಕೊಂಡೇ ಆಡಿದ್ದರು.

ಅದರಲ್ಲೂ ಫೈನಲ್ನಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುವ ಮುನ್ನ ಧೋನಿ ಅವರ ಕಾಲುವ ನೋವು ಜೋರಾಗಿತ್ತು. ಅವರು ಚೇರ್ ಮೇಲೆ ಏಕಾಂಗಿ ಆಗಿ ಕೂತು ಎಡಮೊಣಕಾಲಿಗೆ ಪಟ್ಟಿಕಟ್ಟಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಧೋನಿ ಅವರು ಎಂಟನೇ ಕ್ರಮಾಂಕದಲ್ಲಿ ಆಡಲು ಬರುತ್ತಿದ್ದರು. ರನ್ ಗಳಿಸುವಾಗ ಚಿರತೆಯಂತೆ ಓಡುತ್ತಿದ್ದ ಧೋನಿ ಈ ಬಾರಿ ಆ ವೇಗದಲ್ಲಿ ಓಡುತ್ತಿರಲಿಲ್ಲ. ಸದ್ಯ ಧೋನಿ ಅವರು ಮೊಣಕಾಲಿನ ನೋವಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐಪಿಎಲ್ 2023 ರ ಮೊದಲ ಪಂದ್ಯದಲ್ಲಿಯೇ ಧೋನಿ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇವರು ಮೊಣಕಾಲಿನ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ, ಧೋನಿ ಅಲ್ಲಿಯ ದಾಖಲಾಗುವ ಸಾಧ್ಯತೆಗಳಿವೆ.

ಐಪಿಎಲ್ 2023ರ ಸೀಸನ್‌ನ ಆರಂಭದಲ್ಲಿ ಸಿಎಸ್‌ಕೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಮೊಣಕಾಲಿನ ಗಾಯದೊಂದಿಗೆ ಎಂಎಸ್ ಧೋನಿ ಟಿ20 ಲೀಗ್ ಆಡುತ್ತಿದ್ದಾರೆ ಎಂಬುದನ್ನು ಹೇಳಿದ್ದರು. ಇದು ಧೋನಿಯ ಕೊನೆಯ ಐಪಿಎಲ್ ಎಂದು ಕೂಡ ಹೇಳಲಾಗಿತ್ತು. ಆದರೆ, ಎಂಎಸ್ಡಿ ಅಭಿಮಾನಿಗಳಿಗಾಗಿ ಐಪಿಎಲ್ 2024 ರಲ್ಲೂ ಕಣಕ್ಕಿಳಿಯುವ ಸಾಧ್ಯತೆ ಇದೆ.




