ಧೋನಿಯ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ: ಇಲ್ಲಿದೆ ಫೋಟೋಸ್

| Updated By: ಝಾಹಿರ್ ಯೂಸುಫ್

Updated on: Oct 03, 2023 | 10:06 PM

MS Dhoni: ಉದ್ದ ಕೂದಲಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಆ ಲುಕ್​ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಆದರೆ 2011 ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಧೋನಿ ಉದ್ದ ಕೂದಲಿಗೆ ವಿದಾಯ ಹೇಳಿದ್ದರು.

1 / 6
ಟೀಮ್ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಈ ಬಾರಿ ಆಟದಿಂದಲ್ಲ, ಬದಲಾಗಿ ತಮ್ಮ ಹೊಸ ಲುಕ್​ನಿಂದ ಎಂಬುದು ವಿಶೇಷ.

2 / 6
ಉದ್ದ ಕೂದಲಿಗೆ ಗೋಲ್ಡನ್ ಟಚ್​ ನೀಡಿರುವ ಧೋನಿ ಯಾವುದೇ ಸ್ಟಾರ್ ನಟರಿಗೂ ಕಮ್ಮಿ ಇಲ್ಲವೆಂಬಂತೆ ಪೋಸ್ ನೀಡಿದ್ದಾರೆ. ಈ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

3 / 6
ಹೀಗೆ ವೈರಲ್ ಆಗಲು ಮುಖ್ಯ ಕಾರಣ ಧೋನಿಯ ವಿಂಟೇಜ್ ಲುಕ್. ಅಂದರೆ ಇದೇ ಮಾದರಿಯ ಉದ್ದ ಕೂದಲಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಆ ಲುಕ್​ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು.

4 / 6
ಆದರೆ 2011 ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಧೋನಿ ಉದ್ದ ಕೂದಲಿಗೆ ವಿದಾಯ ಹೇಳಿದ್ದರು. ಇದಾದ ಬಳಿಕ ಹಲವು ಬಾರಿ ಹೇರ್​ ಸ್ಟೈಲ್ ಬದಲಿಸುವ ಮೂಲಕ ಗಮನ ಸೆಳೆದಿದ್ದರು.

5 / 6
ಇದೀಗ ತಮ್ಮ ಹಳೆಯ ಸ್ಟೈಲ್​ಗೆ ಹೊಸ ಟಚ್ ನೀಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಕಂಗೊಳಿಸಿದ್ದಾರೆ. ಹೀಗಾಗಿಯೇ ಧೋನಿಯ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

6 / 6
ಇನ್ನು ಧೋನಿಯ ಹೊಸ ಲುಕ್ ಅನ್ನು ವಿನ್ಯಾಸಗೊಳಿಸಿರುವುದು ಮತ್ಯಾರೂ ಅಲ್ಲ, ಖ್ಯಾತ ಹೇರ್​ ಸ್ಟೈಲಿಸ್ಟ್​ ಆಲೀಮ್ ಹಕೀಮ್. ಬಾಲಿವುಡ್ ಸೆಲೆಬ್ರಿಟಿಗಳು, ಟೀಮ್ ಇಂಡಿಯಾ ಆಟಗಾರರ ಹೇರ್ ಸ್ಟೈಲ್​ ಹಿಂದಿರುವ ಕೈಚಳಕ ಕೂಡ ಇವರದ್ದೇ. ಇದೀಗ ಧೋನಿಯ ತಲೆಗೆ ಕೈ ಹಾಕಿ ಹೊಸ ಲುಕ್ ನೀಡಿದ್ದಾರಷ್ಟೇ.